Headlines

ಎಸ್ಐಟಿ ಮುಂದೆ ನನಗೆ ತಿಳಿದಿರುವುದೆನ್ನೆಲ್ಲಾ ಹೇಳಿದ್ದೇನೆ, ಇನ್ಮೇಲೆ ಈ ಕೂಪದಲ್ಲಿ ಇರಲ್ಲ: ವೃದ್ಧೆ ಸುಜಾತಾ

ಎಸ್‌‍ಐಟಿಯ ಮುಂದೆ ನನಗೆ ತಿಳಿದಿರುವ ಎಲ್ಲಾ ಅಂಶಗಳನ್ನು ಹೇಳಿ ಬಂದಿದ್ದೇನೆ. ಇನ್ನು ಮುಂದೆ ನಾನು ಈ ಕೂಪದಲ್ಲಿ ಇರುವುದಿಲ್ಲ ಎಂದು ವೃದ್ಧೆ ಸುಜಾತಾಭಟ್‌ ಹೇಳಿದ್ದಾರೆ.

ಇಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರ್ಯಾರು ಏನೇನು ಮಾಡಿದ್ದಾರೋ ಅದಕ್ಕೆ ತಕ್ಕಂತೆ ಅವರು ಅನುಭವಿಸುತ್ತಾರೆ. ನಾನು ಏಕಾಂಗಿಯಾಗಿಯೇ ಎಸ್‌‍ಐಟಿ ತನಿಖೆಯನ್ನು ಎದುರಿಸಿ ಬಂದಿದ್ದೇನೆ. ಇನ್ನು ನನಗೆ ಯಾರ ಸಹವಾಸವೂ ಬೇಡ. ಯಾವ ಕೂಪಗಳಲ್ಲೂ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ.

ಕೊಲೆಯಾಗಿದ್ದಾರೆ ಎಂದು ಹೇಳಲಾಗುವ ವಾಸಂತಿ ಇನ್ನು ಬದುಕಿದ್ದಾರೆ ಎಂದು ನನ್ನ ಮನಸ್ಸು ಹೇಳುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ. ವಾಸಂತಿ ಅವರ ಶವ ಹರಿಯುವ ನದಿಯಲ್ಲಿ ಸಿಕ್ಕಿತ್ತು ಎಂದು ಹೇಳಲಾಗಿದೆ. ಬಟ್ಟೆಗಳೆಲ್ಲಾ ಹಾಳಾಗಿದ್ದವು ಎನ್ನುತ್ತಾರೆ. ಹಾಗಿದ್ದ ಮೇಲೆ ಆಕೆಯ ಕೊರಳಲ್ಲಿದ್ದ ತಾಳಿಯ ಸರ ಹರಿಯುವ ನೀರಿನಲ್ಲಿ ಕೊಚ್ಚಿಹೋಗದೇ ಹೇಗೆ ಉಳಿದುಕೊಳ್ಳಲು ಸಾಧ್ಯ? ಎಂಬ ಅನುಮಾನವನ್ನು ಸುಜಾತಾ ಭಟ್‌ ವ್ಯಕ್ತಪಡಿಸಿದ್ದಾರೆ.

ವಾಸಂತಿ ಅವರ ದೇಹವನ್ನು ಗಂಡನ ಮನೆಯವರಿಗೂ ತೋರಿಸಿಲ್ಲ. ವಾಸಂತಿ ಅವರ ಗಂಡ ಬದುಕಿಲ್ಲ. ಆಕೆ ಬದುಕಿರಬಹುದು ಎಂಬ ಅನುಮಾನ ನನಗೆ ಇದೆ ಎಂದು ಹೇಳಿದರು. ಅನನ್ಯಭಟ್‌ ವಿಚಾರವಾಗಿ ಎಸ್‌‍ಐಟಿ ಅಧಿಕಾರಿಗಳ ಮುಂದೆ ನಾನು ಹೇಳಬೇಕಿದ್ದ ಎಲ್ಲಾ ವಿಚಾರಗಳನ್ನು ತಿಳಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!