Headlines

ಮೂಡಾ ಅನುಮೋದನೆಗೆ ಕತ್ತರಿ! ಹುಲಿಕರೆಯಲ್ಲಿ ಅಕ್ರಮ ಬಡಾವಣೆ ಆರೋಪ!! ಶ್ರೀರಂಗಪಟ್ಟಣ ಟಿ.ಪಿ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೂಡಾ ಆಯುಕ್ತರ ಪತ್ರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಯಾವುದೇ ಅನುಮೋದನೆ ಪಡೆಯದೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೋಳ ಹೋಬಳಿಯ ಹುಲಿಕರೆ ಗ್ರಾಮದಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿಯಮ ಉಲ್ಲಂಘಿಸಿರುವ ಭೂಮಾಲೀಕರು ಹಾಗೂ ಇದಕ್ಕೆ ಸಾಥ್ ನೀಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಕ್ರಿಯೆ ಆರಂಭವಾಗಿದೆ. ​ಹುಲಿಕರೆ ಗ್ರಾಮದ ಸರ್ವೆ ನಂಬರ್ 15/3ರಲ್ಲಿ 20 ಗುಂಟೆ ಹಾಗೂ ಸರ್ವೆ ನಂಬರ್ 19/2ರಲ್ಲಿ 1 ಎಕರೆ 4 ಗುಂಟೆ ಜಮೀನಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ವಸತಿ ಬಡಾವಣೆಗಾಗಿ ಭೂ…

Read More

ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಅಂಬುಲೆನ್ಸ್ ದರ್ಬಾರ್: ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಸಕಲೇಶಪುರ:ಇಲ್ಲಿನ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಖಾಸಗಿ ಅಂಬುಲೆನ್ಸ್‌ಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳು ಹಾಗೂ ಅವರ ಸಂಬಂಧಿಕರನ್ನು ಖಾಸಗಿ ಅಂಬುಲೆನ್ಸ್ ಚಾಲಕರು ಒತ್ತಾಯಪೂರ್ವಕವಾಗಿ ತಮ್ಮ ವಾಹನಗಳಲ್ಲಿ ಕರೆದೊಯ್ಯಲು ಯತ್ನಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.​ಆಸ್ಪತ್ರೆಯ ಆವರಣದಲ್ಲಿಯೇ ಈ ರೀತಿಯ ಅಕ್ರಮ ಚಟುವಟಿಕೆಗಳು ಬಹಿರಂಗವಾಗಿ ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಶಂಕೆ ಈ ಕಳವಳಕಾರಿ ವಿಚಾರವನ್ನು…

Read More

​ಜಿ.ಪಂ ಕಬ್ಬಿಣ ವಿಲೇವಾರಿ ಅಕ್ರಮದ ತನಿಖೆ ನಡುವೆಯೇ KRS ಭದ್ರತಾ ವಲಯದಲ್ಲೂ ಸ್ವತ್ತುಗಳ ನಾಪತ್ತೆ!

ಮಂಡ್ಯ: ಸರ್ಕಾರಿ ಆಸ್ತಿಗಳಿಗೆ ರಕ್ಷಣೆ ಇದೆಯೇ? ಒಂದೆಡೆ ಜಿಲ್ಲಾ ಪಂಚಾಯಿತಿ ಆವರಣದ ಕಬ್ಬಿಣದ ಸಾಮಗ್ರಿಗಳ ತೆರವು ವಿವಾದ, ಮತ್ತೊಂದೆಡೆ ಕೆಆರ್‌ಎಸ್ (KRS) ಅಣೆಕಟ್ಟೆಯಲ್ಲಿನ ಪುರಾತನ ಅಲಂಕಾರಿಕ ಕಬ್ಬಿಣದ ದೀಪದ ಕಂಬಗಳು ನಾಪತ್ತೆಯಾಗಿರುವ ಆರೋಪ! ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳ ಭದ್ರತೆ ಹಾಗೂ ಅಧಿಕಾರಿಗಳ ಹೊಣೆಗಾರಿಕೆ ಕುರಿತು ಇದೀಗ ಗಂಭೀರ ಪ್ರಶ್ನೆಗಳು ಎದ್ದಿವೆ. ಜಿಲ್ಲಾ ಪಂಚಾಯಿತಿ ಆವರಣದಲ್ಲಿದ್ದ ಅಂದಾಜು 60 ಟನ್ ಹಳೆಯ ಕಬ್ಬಿಣದ ಸಾಮಗ್ರಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆಯೇ? ಇ-ಟೆಂಡರ್, ಅಧಿಕೃತ ಅನುಮೋದನೆ ಹಾಗೂ ವಿಲೇವಾರಿ ದಾಖಲೆಗಳು…

Read More

​ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಚಿವ ರಾಯರೆಡ್ಡಿ ಮಹತ್ವದ ಸುಳಿವು!

ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಕೊನೆಗೂ ಮುಹೂರ್ತ ಸನ್ನಿಹಿತವಾಗಿದ್ದು, ಮುಂಬರುವ ಡಿಸೆಂಬರ್ 15ರ ವೇಳೆಗೆ ಮತದಾನ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕೊಪ್ಪಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮುಂಬರುವ ಒಂದೆರಡು ದಿನಗಳಲ್ಲಿ ಅಧಿಕೃತ ಮೀಸಲಾತಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸುಳಿವು ನೀಡಿದ್ದು, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗುವಂತೆ ಕರೆ ನೀಡಿದ್ದಾರೆ. ​ಚುನಾವಣಾ ಪ್ರಕ್ರಿಯೆ ಮತ್ತು ಮೀಸಲಾತಿ…

Read More

ಕಾಮದ ಬಲೆಗೆ ಬಿದ್ದು ನಕಲಿ ಸುಪ್ರೀಂ ಆದೇಶ ಸೃಷ್ಟಿ: ಜೈಲು ಡಿಐಜಿ ಸೋಮಶೇಖರ್ ಅರೆಸ್ಟ್!

ಬೆಂಗಳೂರು: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಹೆಸರಲ್ಲೇ ನಕಲಿ ಬಿಡುಗಡೆ ಆದೇಶ ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಡುಪಾತಕಿಯೊಬ್ಬನನ್ನು ಅಕ್ರಮವಾಗಿ ಜೈಲಿನಿಂದ ಹೊರಕಳಿಸಿದ್ದ ಹೈಪ್ರೊಫೈಲ್ ಪ್ರಕರಣದಲ್ಲಿ, ಪ್ರಸ್ತುತ ಕಾರಾಗೃಹ ಇಲಾಖೆಯ ಡಿಐಜಿ (DIG) ಆಗಿರುವ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ​ಆರೋಪಿ ಡಿಐಜಿಯನ್ನು 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 9ರವರೆಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ, ಖಾಕಿ ವೃಂದವೇ ತಲೆತಗ್ಗಿಸುವಂತಹ ರೋಚಕ…

Read More

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡ್ಡಿ ಆರೋಪ: ಹೊಂಗಳ್ಳಿಯಲ್ಲಿ ದಲಿತ ಸಮುದಾಯದ ಆಕ್ರೋಶ

ಶ್ರೀರಂಗಪಟ್ಟಣ: ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಗಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಕಾಮಗಾರಿಗೆ ಅಡ್ಡಿಪಡಿಸಲಾಗುತ್ತಿದೆ ಹಾಗೂ ಪೊಲೀಸರ ಮೂಲಕ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬಂದಿವೆ. ಗ್ರಾಮದ ದಲಿತ ಸಮುದಾಯದವರು ತಮ್ಮ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಂಬೇಡ್ಕರ್ ಭವನ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಮನೆಮನೆಗೆ ತೆರಳಿ ಚಂದಾ ಸಂಗ್ರಹಿಸುವುದರ ಜೊತೆಗೆ ದಾನಿಗಳಿಂದಲೂ ಆರ್ಥಿಕ ನೆರವು ಪಡೆದು ಕಾಮಗಾರಿ ಕೈಗೊಳ್ಳಲು…

Read More

ಧರ್ಮಸ್ಥಳ ಸೌಜನ್ಯಾ ಪ್ರಕರಣ: ಮರುತನಿಖೆಗೆ ಮಂಗಳೂರಿಗೆ ಆಗಮಿಸಿದ ವಿಶೇಷ ತನಿಖಾ ತಂಡ (SIT)

ಮಂಗಳೂರು: 2012ರಲ್ಲಿ ಜರುಗಿದ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ಅಧಿಕೃತವಾಗಿ ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದೆ. ​ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಲು ಎಸ್‌ಐಟಿ ಸದಸ್ಯರಾದ ಗುಪ್ತಚರ ವಿಭಾಗದ ಎಸ್‌ಪಿ ನಿಶಾ ಜೇಮ್ಸ್ ಹಾಗೂ ಸಿಐಡಿ ಎಸ್‌ಪಿ ಲೋಕೇಶ್ ಜಗಲ್ಸಾರ್ ಅವರು…

Read More

ಬೂದನೂರು ಗ್ರಾ.ಪಂ. ಅಕ್ರಮ: ಧರಣಿಗೆ ಮಣಿದು ₹9,841 ರಿಕವರಿ; ಅಧ್ಯಕ್ಷರು, ಸದಸ್ಯರ ವಿರುದ್ಧ ಕ್ರಿಮಿನಲ್ ಕೇಸ್‌ಗೆ 15 ದಿನಗಳ ಗಡುವು!

ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿಯಲ್ಲಿ 2021-26ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಹಣ ದುರ್ಬಳಕೆ ಹಾಗೂ ಆಡಳಿತಾತ್ಮಕ ಲೋಪಗಳ ವಿರುದ್ಧ ನಡೆಯುತ್ತಿದ್ದ ಅಹೋರಾತ್ರಿ ಧರಣಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಹೆಸರಿನಲ್ಲಿದ್ದ ವಿದ್ಯುತ್ ಸಾಮಗ್ರಿಗಳ ಖರೀದಿ ಬಿಲ್ ಬೂದನೂರು ಗ್ರಾ.ಪಂ.ನಲ್ಲಿ ಪಾವತಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ₹9,841 ಮೊತ್ತವನ್ನು ಆಡಿಟ್ ರಿಕವರಿ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಡೆದ ಧರಣಿಯ ಬಳಿಕ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ)…

Read More

​ಜಲಜೀವನ್ ಮಿಷನ್ ಕಾಮಗಾರಿ ವಿಳಂಬ: ಗುತ್ತಿಗೆದಾರ ಬಿ.ಆರ್. ರಾಮಚಂದ್ರರವರನ್ನು ಕಪ್ಪು ಪಟ್ಟಿಗೆ ಸೇರಿಸಲು ಬೂದನೂರು ಗ್ರಾಮಸ್ಥರ ಆಗ್ರಹ!

ಮಂಡ್ಯ: ಬೂದನೂರು ಗ್ರಾಮ ಪಂಚಾಯತಿಯ ಮಂಗಯ್ಯ ನಗರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಟೆಂಡರ್ ಪಡೆದು ಕೆಲಸ ಮಾಡದ ಗುತ್ತಿಗೆದಾರ ಬಿ. ಆರ್. ರಾಮಚಂದ್ರ ಎಂಬುವವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಬೂದನೂರು ಗ್ರಾಮಸ್ಥರು ಆಗ್ರಹಿಸಿದರು. ಬೂದನೂರು ಗ್ರಾಮ ಪಂಚಾಯಿತಿಯ 2021-26ನೇ ಸಾಲಿನ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ವಿವಿಧ ಅಕ್ರಮ ಹಾಗೂ ಹಣಕಾಸು ಅವ್ಯವಹಾರಗಳ ಕುರಿತು ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ರೈತ ಸಂಘ, ಸ್ವಂತಮನೆ ನಮ್ಮ ಹಕ್ಕು ಹಾಗೂ ಬೂದನೂರು ನಾಗರಿಕರ…

Read More

ಶ್ರೀ ಡಾ.ಗುರುಮಹಾಂತ ಸ್ವಾಮೀಜಿಗಳ ಅಮೃತ ಹಸ್ತದಿಂದ ಮೌಲ್ಯದ ಮುತ್ತು ಕೃತಿ ಬಿಡುಗಡೆ……

ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿಯ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಅವರು ರಚಿಸಿರುವ “ಮೌಲ್ಯದ ಮುತ್ತು” ಎಂಬ ನ್ಯಾನೋ ಕಥಾ ಸಂಕಲನವು ಇದೇ ದಿನಾಂಕ 13-9-2026 ರಂದು ರವಿವಾರ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್ಲನಲ್ಲಿ ಪರಮಪೂಜ್ಯ ಶ್ರೀ ಡಾ.ಗುರು ಮಹಾಂತ ಮಹಾಸ್ವಾಮೀಜಿಗಳು ಬಿಡುಗಡೆಗೊಳಿಸಿದರು. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ 100ಕ್ಕೂ ಹೆಚ್ಚು ನ್ಯಾನೋ ಕಥೆಗಳನ್ನು ಈ ಕೃತಿ ಒಳಗೊಂಡಿದೆ. ಇಂದಿನ ಮೊಬೈಲ್ ಯುಗದಲ್ಲಿ…

Read More
error: Content is protected !!