ಮೂಡಾ ಅನುಮೋದನೆಗೆ ಕತ್ತರಿ! ಹುಲಿಕರೆಯಲ್ಲಿ ಅಕ್ರಮ ಬಡಾವಣೆ ಆರೋಪ!! ಶ್ರೀರಂಗಪಟ್ಟಣ ಟಿ.ಪಿ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೂಡಾ ಆಯುಕ್ತರ ಪತ್ರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಯಾವುದೇ ಅನುಮೋದನೆ ಪಡೆಯದೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೋಳ ಹೋಬಳಿಯ ಹುಲಿಕರೆ ಗ್ರಾಮದಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿಯಮ ಉಲ್ಲಂಘಿಸಿರುವ ಭೂಮಾಲೀಕರು ಹಾಗೂ ಇದಕ್ಕೆ ಸಾಥ್ ನೀಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಕ್ರಿಯೆ ಆರಂಭವಾಗಿದೆ. ಹುಲಿಕರೆ ಗ್ರಾಮದ ಸರ್ವೆ ನಂಬರ್ 15/3ರಲ್ಲಿ 20 ಗುಂಟೆ ಹಾಗೂ ಸರ್ವೆ ನಂಬರ್ 19/2ರಲ್ಲಿ 1 ಎಕರೆ 4 ಗುಂಟೆ ಜಮೀನಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ವಸತಿ ಬಡಾವಣೆಗಾಗಿ ಭೂ…

