ನೇಪಾಳ ದೇಶದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಕ್ಕೆ ಉದ್ರಿಕ್ತ ಯುವ ನೇಪಾಳ ಯುವ ಸಮುದಾಯ ರಾಜಧಾನಿ ಕಠ್ಮಂಡುವಿನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಕಾರಣಕ್ಕೆ ಪ್ರಧಾನಿಯಾಗಿದ್ದ ಕೆ.ಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದರು.ಇದರಿಂದ ನೇಪಾಳ ಗಲಭೆಯಲ್ಲಿ ಅಲ್ಲಿನ ಸರ್ಕಾರವೇ ಸಂಪೂರ್ಣವಾಗಿ ಪತನವಾಗಿತ್ತು. ಆನಂತರ ಬಹಳ ಯೋಚನೆ ಮಾಡಿ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ನೇಪಾಳದ ಹೊಸ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಸುಶೀಲಾ ಕರ್ಕಿ ಅವರು ಇಂದು ಶುಕ್ರವಾರ ಸೆಪ್ಟೆಂಬರ್ 12 ರ ರಾತ್ರಿ 9:15 ಕ್ಕೆ ಸರಿಯಾಗಿ ಕಠ್ಮಂಡುವಿನಲ್ಲಿ ನೇಪಾಳ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನೇಪಾಳದ ಹೊಸ ಪ್ರಧಾನಿಯಾಗಿ ಸುಶೀಲಾ ಕರ್ಕಿ ಆಯ್ಕೆ!

