ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಗರದ ವ್ಯಕ್ತಿಯೊಬ್ಬರು HPIN , IPO ಆ್ಯಪ್ ನ ಹಣಕಾಸು ಚೈನ್ ಲಿಂಕ್ ನ ಆನ್ ಲೈನ್ ವಂಚನೆಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂದ ಸೆನ್ ಪೊಲಿಸ್ ಠಾಣೆಗೆ ದೂರು ದಾಖಲಿಸಿರುವ ದೂರುದಾರ 3,20,920 ಹಣ ಕಳೆದುಕೊಂಡಿದ್ದು, ಕಳೆದುಕೊಂಡ ಹಣವನ್ನ ಭರಿಸಿಕೊಡುವಂತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಆ್ಯಪ್ ಇನ್ಸ್ ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿ..ವಿವಿದ ಖಾತೆಗಳ ಪೈಕಿ ಒಂದು ಖಾತೆಯ ವ್ಯಾಲೆಟ್ ಅಲ್ಲಿ 88,925,76/- ಹಾಗು ಮತ್ತೊಂದು ಖಾತೆಯ ವ್ಯಾಲೆಟ್ ಅಲ್ಲಿ 5,39,150,78/- ಎಂದು ತೋರಿಸುತ್ತಿದ್ದು ಡ್ರಾ ಮಾಡಲು ಹೋದಾಗ ವೈಫಲ್ಯ ಕಂಡು ಅಡ್ಮಿನ್ ಜೊತೆ ಚರ್ಚಿಸಲಾಗಿ ವರ್ಷದವರೆಗೆ ಹಣ ತೆಗೆಯಲಾಗುವುದಿಲ್ಲ ಎಂಬ ಸಂದೇಶದ ಜೊತೆಗೆ ಮತ್ತೆ 5ಲಕ್ಷ ಪಾವತಿಸುವಂತೆ ಸೂಚಿಸಿದ್ದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ತಾನು ವಂಚನೆಗೊಳಗಾಗಿರುವುದು ತಿಳಿದುಬಂದಿದೆ. ಈ ಸಂಬಂದ ಕಳೆದುಕೊಂಡ ಹಣ ಭರಿಸಿಕೊಡುವಂತೆ ಸೆನ್ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ರೀತಿಯ ಹೂಡಿಕೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡವರಿದ್ದು, ಈ ರೀತಿಯ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಸೆನ್ ಪೊಲಿಸ್ ಇನ್ಸ್ ಪೆಕ್ಟರ್ ಸಾಗರ್ ಮನವಿ ಮಾಡಿದ್ದಾರೆ.
ಹಣ ಕಳೆದುಕೊಂಡವರ ಪೈಕಿ ಸರ್ಕಾರಿ ನೌಕರರು, ಇಂಜಿನಿರಿಂಗ್ ಪದವೀಧರರು ,ವಕೀಲರು Buiseness people ಗಳೇ ಹೆಚ್ಚಾಗಿದ್ದಾರೆಂದು ತಿಳಿದುಬಂದಿದೆ.

