Headlines

ಯಶ್ ತಾಯಿ ಪೇಮೆಂಟ್ ಕೊಟ್ಟಿಲ್ಲ: ಕೊತ್ತಲವಾಡಿ ಚಿತ್ರದ ಸಹಕಲಾವಿದ ಆರೋಪ

ಕೆಜಿಎಫ್ ಸ್ಟಾರ್ ಯಶ್ ತಾಯಿ ಪುಷ್ಪ ಅವರ ನಿರ್ಮಾಣದ ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿದ್ದ ಕಲಾವಿದರಿಗೆ ಪೇಮೆಂಟ್ ಆಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಪೇಮೆಂಟ್ ವಿಚಾರವಾಗಿ ಸಹ ಕಲಾವಿದರೊಬ್ಬರು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿರುವ ನಮಗೆ ಸಂಭಾವನೆ ಬಂದಿಲ್ಲ ಸಹ ನಟ ಮಹೇಶ್ ಗುರು ಆರೋಪ ಮಾಡಿದ್ದಾರೆ. ಫೇಸ್ಬುಕ್‌ನಲ್ಲಿ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ನೋಡಿದ್ರೆ ವಿಡಿಯೋ ಡಿಲೀಟ್ ಆಗಿದೆ.

ನಿರ್ಮಾಪಕಿ ಪುಷ್ಪ ಅವರ ಗಮನಕ್ಕೆ ತರೋದಕ್ಕೆ ಮಹೇಶ್ ವೀಡಿಯೋ ಮಾಡಿದ್ದರು. ಖಳನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ಮಹೇಶ್ ಗುರು, ನಿರ್ದೇಶಕರ ಕಡೆಯಿಂದ ನಮಗೆ ಚಾನ್ಸ್ ಸಿಕ್ತು. ಅವಾಗ ಒಂದು ಪ್ಯಾಕೇಜ್ ಮಾತಾಡಿದ್ರು. ಅಡ್ವಾನ್ಸ್ ದುಡ್ಡು ಕೊಡ್ತೀವಿ ಅಂದ್ರು. ಓಕೆ ಅಂತ ಒಪ್ಪಿಕೊಂಡೆ. ಅದಾದ ನಂತರ ಮುಹೂರ್ತ ಅಯ್ತು ದುಡ್ಡು ಕೊಡ್ಲಿಲ್ಲ, ಮೂರು ತಿಂಗಳು ಕೆಲಸ ಮಾಡಿದ್ವಿ, ಶೂಟಿಂಗ್ ಮುಗಿದ ಮೇಲೂ ಪೇಮೆಂಟ್ ಕೊಡ್ಲಿಲ್ಲ. ಡಬ್ಬಿಂಗ್ ಮಾಡಿ ಬಂದು ಮುಗಿದ್ಮೇಲೆ ಪೇಮೆಂಟ್ ಕೊಡ್ತೀನಿ ಅಂದ್ರು. ಅದು ಮಾಡಿದ್ವಿ ಪೇಮೆಂಟ್ ಕೊಡ್ಲಿಲ್ಲ ಎಂದು ದೂರಿದ್ದಾರೆ.

ಸಿನಿಮಾ ಪ್ರಮೋಷನ್ ಜೋರಾಗಿ ಮಾಡಿದ್ರು. ನಮ್ಮನ್ನ ಎಲ್ಲಿಗೂ ಕರೀಲಿಲ್ಲ, ದುಡ್ಡು ಕೊಡ್ಲಿಲ್ಲ. ಈಗ ಓಟಿಟಿಗೆ ಬಂದಿದೆ. ಆದ್ರೂ ದುಡ್ಡು ಕೊಟ್ಟಿಲ್ಲ. ಪ್ರೊಡ್ಯೂಸರ್‌ಗೆ ಗೊತ್ತೋ, ಗೊತ್ತಿಲ್ವ ಗೊತ್ತಿಲ್ಲ. ಪ್ರೊಡ್ಯೂಸರ್ ಪುಷ್ಪ ಅವರಿಗೆ ಹೇಳೋಣ ಅಂದ್ರೆ ಯಾರೂ ನಂಬರ್ ಕೂಡ ಕೊಡ್ತಿಲ್ಲ. ನಮಗೆ ಆಗಿರುವ ಮೋಸನ ನಿರ್ಮಾಪಕಿಗೆ ತಿಳಿಸಿಬೇಕಿದೆ. ನ್ಯಾಯ ಸಿಗ್ಬೇಕು ಅನ್ನೋದೇ ನಾನು ಈ ವೀಡಿಯೋದ ಉದ್ದೇಶ ಅಷ್ಟೆ ಎಂದು ಗುರು ತಿಳಿಸಿದ್ದಾರೆ.

ಆಗಸ್ಟ್ 1 ರಂದು ಕೊತ್ತಲವಾಡಿ ಸಿನಿಮಾ ಬಿಡುಗಡೆ ಆಗಿತ್ತು. ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಪಿಎ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಶ್ರೀರಾಜ್ ನಿರ್ದೇಶನದ ಸಿನಿಮಾ ಇದಾಗಿದೆ.

ಕೊತ್ತಲವಾಡಿ ಸಿನಿಮಾದ ಸಹನಟ ಆರೋಪ ಬೆನ್ನಲ್ಲೇ ಸಿನಿಮಾ ನಿರ್ದೇಶಕ ಶ್ರೀರಾಜ್ ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸಿನಿಮಾದಲ್ಲಿ ಸುಮಾರು ಜನ ನಟಿಸಿದ್ದಾರೆ. ನಮ್ಮ ಹಿಂದಿನ ಸಿನಿಮಾದಲ್ಲಿ ಅವರಿಗೆ ಅವಕಾಶ ಕೊಟ್ಟಿದ್ದೆ. ಥಿಯೇಟರ್ ಆರ್ಟಿಸ್ಟ್ ಇವರು. ಈ ಸಿನಿಮಾದಲ್ಲೂ ಒಂದು ಅವಕಾಶ ಕೊಟ್ಟಿದ್ದೆ. ಅವರಿಗೇನು ಗೌರವ ಧನ ಏನಿದೆ ಎಲ್ಲಾ ಕ್ಲಿಯರ್ ಆಗಿದೆ. ನಮ್ಮ ಕಡೆಯಿಂದ ಪೇಮೆಂಟ್ ಕ್ಲಿಯರ್ ಆಗಿದೆ. ಪೊಲೀಸ್ ಸ್ಟೇಷನ್‌ಗೆ ದೂರು ಕೊಡ್ತೀನಿ. ನಮ್ಮ ಕಡೆ ಪೇಮೆಂಟ್ ಕೊಟ್ಟಿರುವ ಬಗ್ಗೆ ದಾಖಲೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!