Headlines

ಮೈಸೂರು: ಮಗಳ ಅಶ್ಲೀಲ ವಿಡಿಯೋ ವೈರಲ್, ಕೈ ಮುಖಂಡನ ವಿರುದ್ಧ ತಂದೆ ದೂರು, ಎಫ್ಐಆರ್ ದಾಖಲು

ಮೈಸೂರು, ಅಕ್ಟೋಬರ್ 18: ಜಿಲ್ಲೆಯ ಕೆ.ಆರ್.ನಗರ ತಾಲೂಕು ಕಾಂಗ್ರೆಸ್ ಮುಖಂಡ ಲೋಹಿತ್ ಅಲಿಯಾಸ್​​ ರಾಜಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​​ ಆಗಿದೆ. ವೈಯಕ್ತಿಕ ಲಾಭಕ್ಕಾಗಿ ಮಗಳೊಂದಿಗಿನ ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದಾಗಿ ತಂದೆ ದೂರು ನೀಡಿದ್ದು, ಕಾಂಗ್ರೆಸ್ ಮುಖಂಡ ವಿರುದ್ಧ ಮೈಸೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ.

ಕಳೆದ ಅಕ್ಟೋಬರ್ 16ರಂದು ರಾತ್ರಿ 9:20 ಗಂಟೆಗೆ ಸೋಮೇಗೌಡ ಬಿನ್ ಲೇಟ್ ಮಲೆಗೌಡ ಎಂಬುವರ ದೂರಿನ ಸಾರಾಂಶವೆನೆಂದರೆ, ನಾನು ವ್ಯವಸಾಯ ಕಸುಬನ್ನು ಮಾಡಿಕೊಂಡಿರುತ್ತೇನೆ. ನನಗೆ ಇಬ್ಬರು ಮಕ್ಕಳಿದ್ದಾರೆ. 3 ತಿಂಗಳ ಹಿಂದೆ ಹೊಳೆನರಸೀಪುರ ತಾಲೂಕಿನ ಮರಹಳ್ಳಿ ಗ್ರಾಮದ ವ್ಯಕ್ತಿ ಜೊತೆಗೆ ಮಗಳ ಮದುವೆ ಮಾಡಿರುತ್ತೇನೆ. ನನ್ನ ಮಗಳು ಮತ್ತು ಅಳಿಯ ಅನ್ಯೋನ್ಯರಾಗಿದ್ದರು.

ದೀಪಾವಳಿ ಹಬ್ಬದ ಹಿನ್ನೆಲೆ ನನ್ನ ಮಗಳು ನಮ್ಮ ಮನೆಗೆ ಬಂದಿದ್ದಳು. ಹೀಗಿರುವಾಗ ಅಕ್ಟೋಬರ್ 16ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಸಂಬಂಧಿಕರು ನಮ್ಮ ಜಮೀನಿನ ಬಳಿ ಸಿಕ್ಕು, ನಿಮ್ಮ ಮಗಳು ಮತ್ತು ನಿಮ್ಮೂರಿನ ಲೋಹಿತ್​​ ಅಲಿಯಾಸ್​ ರಾಜಿ ಇಬ್ಬರ ಅಶ್ಲೀಲ ವಿಡಿಯೋ ಮಲ್ಲಿಕಾರ್ಜುನ ಎಂಬುವವರ ವಾಟ್ಸಾಪ್​​ ನಂಬರ್​ಗೆ ಬಂದಿದ್ದು, ಆತನು ನನ್ನ ವಾಟ್ಸಾಪ್​​ ನಂಬರ್​ಗೆ ಕಳುಹಿಸಿದ್ದು, ಏನೆಂದು ವಿಡಿಯೋ ನೋಡಲಾಗಿ ಅದು ನಿಮ್ಮ ಮಗಳ ಮತ್ತು ಲೋಹಿತ್​ ಅಶ್ಲೀಲ ವಿಡಿಯೋ ಆಗಿತ್ತು. ಬಳಿಕ ಡಿಲೀಟ್​ ಮಾಡಿರುವುದಾಗಿ ನನಗೆ ಹೇಳಿದ್ದಾರೆ.

ನಮಗೂ ನಮ್ಮೂರಿನ ಲೋಹಿತ್​​ ಎಂಬುವನಿಗೂ ಜಮೀನು ದಾರಿ ವಿಚಾರವಾಗಿ ಆಗಾಗ ಗಲಾಟೆಯಾಗಿದ್ದು, ನಿನಗೆ ಮತ್ತು ನಿಮ್ಮ ಕುಟುಂಬಕ್ಕೆ ಒಂದು ಗತಿ ಕಾಣಿಸುತ್ತೇನೆ ನೋಡು, ಒಂದಲ್ಲ ಒಂದು ದಿನ ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲವೆಂದು ಪದೇ ಪದೇ ಹೇಳುತ್ತಿದ್ದನು.

ಈ ದ್ವೇಷದಿಂದ ನನ್ನ ಮಗಳ ಮತ್ತು ನಮ್ಮ ಕುಟುಂಬದ ಮಾನಮರ್ಯಾದೆಯನ್ನು ಬೀದಿ ಪಾಲು ಮಾಡುವ ಉದ್ದೇಶದಿಂದ ನನ್ನ ಮಗಳೊಂದಿಗೆ ತೊಡಗಿದ ವಿಡಿಯೋವನ್ನು ಮೊಬೈಲ್​​ನಲ್ಲಿ ರೆಕಾರ್ಡ್ ಮಾಡಿಕೊಂಡು ಎಲ್ಲರಿಗೂ ವಾಟ್ಸಾಪ್​​ನಲ್ಲಿ ಕಳುಹಿಸಿ, ನನ್ನ ಮಗಳ ಮತ್ತು ನಮ್ಮ ಸಂಸಾರವನ್ನು ಹಾಳು ಮಾಡಿರುತ್ತಾನೆ. ಆದ್ದರಿಂದ ಲೋಹಿತ್ ಅಲಿಯಾಸ್​ ರಾಜಿ ಎಂಬುವನ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ಕೊಡಿಸುವಂತೆ ತಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!