Headlines

ರಾಷ್ಟ್ರೀಯ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ


ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ರಾಷ್ಟ್ರೀಯ ಸ್ವಯಂಸೇವಕರ ಸಂಘ(ಆರ್‌ಎಸ್‌ಎಸ್) ವತಿಯಿಂದ ವಿಜಯದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಇಂದು ಜರುಗಿತು.

ನಗರದ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಆರಂಭವಾದ ಪಥಸಂಚಲನ ನಗರದ ಪ್ರಮುಖರ ಬೀದಿಗಳಲ್ಲಿ ಹಾಗೂ ವೃತ್ತಗಳಲ್ಲಿ ಸಂಚರಿಸಿ ನೋಡುಗರ ಗಮನ ಸೆಳೆಯಿತು.

ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಪ್ರಮುಖ ಬೀದಿಗಳಲ್ಲಿ ಕಟ್ಟಿದ್ದ ಭಗವಾ ಧ್ವಜ, ಕೇಸರಿ ತೋರಣಗಳು, ಹಾಗೂ ವಿಶೆಷವಾಗಿ ಮನೆಗಳ ಮುಂದೆ ಪಥ ಸಂಚಲನಕ್ಕಾಗಿ ಹಾಕಲಾಗಿದ್ದ ರಂಗೋಲಿಗಳು ಜನರನ್ನು ಮತ್ತಷ್ಟು ಆಕರ್ಷಿಸುತ್ತಿದ್ದವು.

450ಕ್ಕೂ ಹೆಚ್ಚಿನ ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕರಿಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವರ್ತಕರು ಹೂಮಳೆ ಸುರಿಸಿ ಭಾರತ ಮಾತೆಗೆ ಜೈಕಾರ ಹಾಕಿದರು.
ಎಸ್ಪಿ ಕವಿತಾ ಡಿವೈಸ್ಪಿ ಸ್ನೇಹರಾಜ್ ಹಾಗೂ ಇನ್ಸ್ ಪೆಕ್ಟರ್ ಅವರು ಗಳು ಸೂಕ್ತ ಬಂದೂಬಸ್ತ್ ಮಾಡಿದ್ದರು

Leave a Reply

Your email address will not be published. Required fields are marked *

error: Content is protected !!