Headlines

2028 ರ ಅಸೆಂಬ್ಲಿ ಎಲೆಕ್ಷನ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಆಗಲು ಕೈ ನಾಯಕರ ಒಪ್ಪಿಗೆ ಬೇಕು: ಸಚಿವ ಸತೀಶ್ ಜಾರಕಿಹೊಳಿ

ನಿನ್ನೆಯಷ್ಟೇ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನಂತರ 2028 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಬ್ಬ ಅಹಿಂದ ನಾಯಕರಾದ ಉತ್ತರಕರ್ನಾಟಕದ ಬೆಳಗಾವಿ ಸಾಹುಕಾರ್ ಎಂದೇ ಕರೆಯುವ ಸಚಿವ ಸತೀಶ್ ಜಾರಕಿಹೊಳಿ 2028 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭವಿಷ್ಯ ಹೇಳಿದ್ದರು.

ಇಂದು ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿ, ಇಲ್ಲ, ನಾನು ಇನ್ನೂ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ 2028 ರ ವಿಧಾನಸಭಾ ಚುನಾವಣೆಗೆ ಇನ್ನೂ ಬಹಳ ದಿನಗಳು ಬಾಕಿ ಇವೆ‌. ಆದರೆ ಪಕ್ಷದ ಶಾಸಕರು ಮತ್ತು ನಾಯಕರು ನಾನು ಸಿಎಂ ಆಗಲು ಒಪ್ಪಬೇಕು. ಹೀಗಾಗಿ ಈಗಲೇ ಈ ಬಗ್ಗೆ ನಾನು ಯಾವುದೇ ಪ್ರಯತ್ನ ನಡೆಸುತ್ತಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!