Headlines

ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛ ಸಂವಾದ ಸಭೆ

ಸಕಲೇಶಪುರ: ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಸಾರ್ವಜನಿಕ ಅಭಿವೃದ್ಧಿಯ ಉದ್ದೇಶದಿಂದ ಸ್ವಚ್ಛ ಸಂವಾದ ಸಭೆ ಗುರುವಾರ ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಕೇಂದ್ರ ರೈಲ್ವೆ ಇಲಾಖೆಗೆ ಕಳುಹಿಸಲಾಗುವುದು ಎಂದು ಹಿರಿಯ ವಿಭಾಗ ವೈದ್ಯಾಧಿಕಾರಿ ಡಾ. ಅಕ್ಷತಾ ಆರ್ ಅವರು ತಿಳಿಸಿದರು. ಪುರಸಭೆ ಸದಸ್ಯ ಪ್ರಜ್ವಲ್ ಗೌಡ ಅವರು ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛ ಕುಡಿಯುವ ನೀರಿನ ಸೌಲಭ್ಯವನ್ನು ಸುಧಾರಿಸುವ ಅಗತ್ಯವಿದೆ ಎಂದು ಹೇಳಿದರು. ಜೊತೆಗೆ, ಗುಡ್ಡ ಕುಸಿತದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಪರಿಹಾರ ಕ್ರಮ ಕೈಗೊಳ್ಳಬೇಕೆಂದರು.

ಸಾಮಾಜಿಕ ಕಾರ್ಯಕರ್ತ ಸೈಯದ್ ಇದ್ರೀಸ್ ಅವರು ತಾಯಿ–ಮಗು ಆರೈಕೆಗೆ (ಹಾಲುಣಿಸುವ ಕೊಠಡಿ) ವ್ಯವಸ್ಥೆ ಮಾಡಬೇಕು ಹಾಗೂ ಗರ್ಭಿಣಿಯರಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ಅಷ್ಟೇ ಅಲ್ಲ, ಸಕಲೇಶಪುರದ ಪ್ರವಾಸೋದ್ಯಮ ಸ್ಥಳಗಳ ಚಿತ್ರಗಳನ್ನು ನಿಲ್ದಾಣದಲ್ಲಿ ಅಂಟಿಸಿ ಮಾಹಿತಿ ಫಲಕ ರೂಪದಲ್ಲಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು. ಸಭೆಯ ಸಂದರ್ಭದಲ್ಲಿ ಸಾರ್ವಜನಿಕರಿಂದ ವಿವಿಧ ಬೇಡಿಕೆಗಳು ಮುಂದಿಡಲಾದವು.

ಈ ಸಂದರ್ಭದಲ್ಲಿ ಡಾ. ಅಕ್ಷತಾ ಆರ್, ಮಹೇಶ್ ಎನ್, ಗಿರಿಧರ್, ವಿಶ್ವನಾಥ್, ದಿನೇಶ್, ಲೆನಿನ್ ಆರ್ ಬಿ, ಅರವಿಂದ್ ಸೇರಿದಂತೆ ರೈಲ್ವೆ ಸಿಬ್ಬಂದಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!