ಬೆಂಗಳೂರು, ಜುಲೈ 17: ಕನ್ನಡ ಕಿರುತೆರೆ ಲೋಕದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಮದುವೆ ಯಾವಾಗ? ಎಂದು ಹಲವಾರು ವರ್ಷಗಳಿಂದ ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ.
ಏಕೆಂದರೆ ಇದೀಗ ಖ್ಯಾತ ಕಿರುತೆರೆ ನಿರೂಪಕಿ ಅನುಶ್ರೀ ಅವರಿಗೆ ಕೊನೆಗೂ ಕಂಕಣಭಾಗ್ಯ ಕೂಡಿ ಬಂದಿದ್ದು, ಮದುವೆಗೆ ಮುಹೂರ್ತ ಫಿಕ್ಸ್ ಕೂಡ ಆಗಿದೆ.
ಅನುಶ್ರೀ ಮುಂದಿನ ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ಆಗಲಿದ್ದು, ಬೆಂಗಳೂರಿನ ಸಾಫ್ಟ್ ವೇರ್ ಉದ್ಯಮಿಯನ್ನು ವರಿಸಲಿದ್ದಾರೆ.
ಕುಟುಂಬಸ್ಥರು ನೋಡಿದ ಹುಡುಗನ ಜೊತೆಯೇ ಅನುಶ್ರೀ ಮದುವೆಯಾಗುತ್ತಿದ್ದು ಮಂಗಳೂರು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀ ಕಲ್ಯಾಣ ಎನ್ನಲಾಗುತ್ತಿದೆ. ಮದುವೆ ನಿಶ್ಚಯವಾಗಿರುವ ಹುಡುಗ ಹಾಗೂ ಇನ್ನಿತರ ಮಾಹಿತಿಯನ್ನು ಅನುಶ್ರೀ ಗೌಪ್ಯವಾಗಿರಿಸಿದ್ದಾರೆ.
ಸರಳ ಶಾಸ್ತ್ರೋಕ್ತವಾಗಿ ಮದುವೆಯಾಗಿ ಬಳಿಕ ಆಗಸ್ಟ್ 28ಕ್ಕೆ ಸಿನಿಮಾ ಇಂಡಿಸ್ಟ್ರಿಯವರನ್ನ ಆಮಂತ್ರಿಸಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಳ್ಳವ ಸಾಧ್ಯತೆ ಇದೆ.

