Headlines

17 ಲಕ್ಷ ಜನರಿಗೆ ತುಂಗಭದ್ರಾ ಕುಡಿಯುವ ನೀರಿನ ಸೌಲಭ್ಯ; ಸಿಎಂ ಸಿದ್ದರಾಮಯ್ಯ

ತುಮಕೂರು, ಜುಲೈ 21: ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರದ ಜನರು ಇಂದು ಸುವರ್ಣ ಅಕ್ಷರಗಳಲ್ಲಿಎ ಬರೆದಿಡುವ ಕ್ಷಣವಾಗಿದೆ, 2529 ಕೋಟಿ ವೆಚ್ಚದಲ್ಲಿ ಪಾವಗಡ, ಮೊಳಕಾಲ್ಮೂರು, ಚಳ್ಳಕೆರೆ, ಕೂಡ್ಲಿಗಿ,
ಹಾಗೂ ಹರಪನಹಳ್ಳಿ ತಾಲ್ಲೂಕುಗಳ ಜನರಿಗೆ ಕುಡಿಯುವ ನೀರು ನೀಡಲಾಗುತ್ತಿದೆ, ಪ್ಲೋರೈಡ್ ನೀರಿನಿಂದ ಹಲವು ರೋಗಗಳು ಬರುತ್ತಿದ್ದವು ಇದರ ನಿವಾರಣೆಗೆ 200 ಕಿ.ಮೀ ದೂರದಿಂದ ಕುಡಿಯುವ ನೀರು ತಂದು ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಪಾವಗಡ ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ 17 ಲಕ್ಷ ಜನರಿಗೆ ಈ ತುಂಗಭದ್ರಾ ಕುಡಿಯುವ ನೀರಿನ ನೌಲಭ್ಯ ಸಿಗಲ್ಲಿದೆ,ಈ ಯೋಜನೆ 2050 ರವರೆಗೆ ಮುಂದುವರೆಯಲಿದೆ, ಇನ್ನುಮುಂದೆ ಈ ಭಾಗದ ಜನ ಅಂಗವೈಕಲ್ಯಕ್ಕೆ ತುತ್ತಾಗುವುದಿಲ್ಲ, ಪಾವಗಡದ 270 ಹಳ್ಳಿಗಳಿಗೆ ಹಾಗೂ ಪಾವಗಡ ಪಟ್ಟಣಕ್ಕೆ‌ ಈ ನೀರಿನ ಸೌಲಭ್ಯ ಸಿಗಲಿದೆ‌ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

“ಬಿಜೆಪಿಯವರು ಕರ್ನಾಟಕದಲ್ಲಿ ಜನರನ್ನು ತಪ್ಪು ದಾರಿಗೆ ಎಳೆದು ಜನರನ್ನು ದಿಕ್ಕು ತಪ್ಪಿಸುತ್ತಿದೀರಾ. ಎಂದಾದರೂ ರಾಜ್ಯದ ಜನತೆಗೆ ಬೃಹತ್ ಯೋಜನೆಗಳನ್ನು ಜನರಿಗೆ ಕೊಟ್ಟಿದೀರಾ? ಮೋದಿ ಸೇರಿ ಆಶೋಕ, ಯಡಿಯೂರಪ್ಪ, ವಿಜಯೇಂದ್ರ ಎಲ್ಲಾ ಹೇಳುತ್ತಾರೆ, ಸರ್ಕಾರ ದಿವಾಳಿಯಾಗಿದೆ ಎಂದು ನಿಮ್ಮ ಸಾಧನೆ ಏನು ಮೊದಲು ಹೇಳಿ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಮತ್ತು ಬಿಜೆಪಿಯವರೆ ನಿಮಗೆ ಮಾನ ಮರ್ಯಾದೆ ಇದೆಯಾ? ಎಂದು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕದಿಂದ ಪ್ರತಿ ವರ್ಷ ನಾಲ್ಕುವರೆ(4.5) ಲಕ್ಷ ಕೋಟಿ ಕೇಂದ್ರಕ್ಕೆ ತೆರಿಗೆ ಕಟ್ಟಲಾಗುತ್ತಿದೆ, ನಮಗೆ ಅವರು ಕೊಡುತ್ತಿರುವ ತೆರಿಗೆ ಹಣ ಬರೀ 60 ಸಾವಿರ ಕೋಟಿ ಅಷ್ಟೇ, ನಮ್ಮ ರಾಜ್ಯದ ಸಂಸದರು ಯಾಕೆ ಹಣದ ತಾರತಮ್ಯದ ಬಗ್ಗೆ ಮಾತನಾತ್ತಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

‘_ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಕೊಡಲಾಗುತ್ತಿದೆ. ಈ ಭಾಗದ‌ ಜನ ಮತ್ತೊಮ್ಮೆ ವೆಂಕಟೇಶ್ ರನ್ನು ‌ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು‌ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾವಗಡ ತಾಲ್ಲೂಕಿನ ಶಾಸಕ ಹೆಚ್.ವಿ ವೆಂಕಟೇಶ್ ತಾಲ್ಲೂಕಿನ ಜನ ಸಿದ್ದರಾಮಯ್ಯನವರು ಇನ್ನೂ ಹತ್ತು ತಲೆಮಾರು ಜನ ಮರೆಯುವ ಆಗಿಲ್ಲ, ಫ್ಲೋರೈಡ್ ನೀರಿಗೆ ಹೆಸರುವಾಸಿಯಾಗಿದೆ. ನಮ್ಮ ತಾಲ್ಲೂಕಿಗೆ ತುಂಗಭದ್ರಾ ಡ್ಯಾಮ್ ನಿಂದ ಕುಡಿಯುವ ನೀರು ಕಲ್ಪಿಸಲಾಗಿದೆ, ಪಾವಗಡವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಿದ್ದಾರೆ, ಸಿದ್ದರಾಮಯ್ಯನವರನ್ನು ಮರೆಯುವ ಆಗಿಲ್ಲ, ,ಪಾವಗಡ ಪಾಲಿನ ದೇವರು ಸಿದ್ದರಾಮಯ್ಯನವರು ಪಾವಗಡಕ್ಕೆ ಮೆಗಾ ಡೈರಿಗೆ 200 ಕೋಟಿ ರೂಪಾಯಿ ನೀಡಬೇಕು, ಕೈಗಾರಿಕೆ ಮತ್ತು ಶಿಕ್ಷಣ, ವಸತಿ ಸೌಲಭ್ಯಕ್ಕೆ ಹೆಚ್ಟಿನ ಅನುದಾನ ಬಿಡುಗಡೆ ಮಾಡಬೇಕು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಲೋಕಸಭಾ ‌ಸದಸ್ಯ ಗೋವಿಂದ ಕಾರಜೋಳ ಮಾತನಾಡಿದರು. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಜನತೆಗೆ ತುಂಗಭದ್ರ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಮಾಜಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ವಿಧಾನಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ, ಶ್ರೀನಿವಾಸ್, ಮಾಜಿ ಸಚಿವ ವೆಂಕಟರಮಣಪ್ಪ, ಪುರಸಭೆ ಅಧ್ಯಕ್ಷ ಸುದೇಶ್ ಬಾಬು, ಹೆಚ್.ವಿ ಕುಮಾರಸ್ವಾಮಿ, ತುಮಕೂರು ಡೀಸಿ ಶುಭಕಲ್ಯಾಣ್, ಜಿ.ಪಂ ಸಿಇಓ ಪ್ರಭು, ತುಮಕೂರು ಎಸ್ಪಿ ಕೆ.ವಿ ಅಶೋಕ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!