ಬೆಂಗಳೂರು, ಜುಲೈ 23: ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಯಾಗುತ್ತಿದ್ದ ನೋಟೀಸ್ ಗಳಿಂದ ಹೌಹಾರಿದ್ದ ರಾಜ್ಯದ ಸಣ್ಣ ಉದ್ದಿಮೆದಾರರು ಸಿಎಂ ಸಿದ್ದರಾಮಯ್ಯನವರು ನಡೆಸಿದ ಮೀಟಿಂಗ್ ನಂತರ ನಿರಾಳರಾಗಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಯಾಗಿರುವ ತೆರಿಗೆ ನೋಟೀಸ್ ಗಳನ್ನು ವಾಪಸ್ಸು ಪಡೆಯುವ ಆಶ್ವಾಸನೆಯನ್ನು ಕಾಂಡಿಮೆಂಟ್ಸ್, ಬೇಕರಿ, ಟೀ ಸ್ಟಾಲ್ ನಡೆಸುವ ಮತ್ತು ಎಲ್ಲ ಸಣ್ಣ ಉದ್ದಿಮೆದಾರರಿಗೆ ಸಿಎಂ ಸಿದ್ದರಾಮಯ್ಯ ಇಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ಆರಂಭಿಸಿದ್ದ ಸಣ್ಣ ವ್ಯಾಪಾರಿಗಳು ಅದನ್ನು ಇಂದೇ ವಾಪಸ್ ಪಡೆದಿದ್ದಾರೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದ ಎಲ್ಲಾ ವ್ಯಾಪಾರಿಗಳಿಗೆ ರಾಜ್ಯಸರ್ಕಾರ GST ವಿನಾಯಿತಿ ಕೊಟ್ಟಿಲ್ಲ. ಇಷ್ಟಾದರೂ ಸಣ್ಣ ವ್ಯಾಪಾರಿಗಳಾದ ಹಾಲು, ಹಣ್ಣು, ತರಕಾರಿ, ಹೂವಿನ ವ್ಯಾಪಾರಿಗಳಿಗೆ ಮಾತ್ರ GST ಯಿಂದ ವಿನಾಯಿತಿ ಇರಲಿದೆ ಎಂದು ತಿಳಿಸಿದರು.
ಒಟ್ಟಾರೆ ರಾಜ್ಯದ ಸಣ್ಣ ವ್ಯಾಪಾರಿಗಳಿಗೆ GST ಯಿಂದ ವಿನಾಯಿತಿ ನೀಡಲಾಗಿದೆ ಎಂದು ರಾಜ್ಯಸರ್ಕಾರ ಭರವಸೆ ನೀಡಿದ್ದರೂ, ಮಧ್ಯಮ ಮತ್ತು ದೊಡ್ಡ ವ್ಯಾಪಾರಿಗಳಿಗೆ GSTಯಿಂದ ಯಾವುದೇ ವಿನಾಯಿತಿ ಇಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಇನ್ನುಮುಂದೆ ಕರ್ನಾಟಕದಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೆಜಾನ್ ಸೇರಿದಂತೆ ಎಲ್ಲಾ ರೀತಿಯ ಮೊಬೈಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಕುತ್ತು ಬಂದಿದೆ.

