ಮಂಡ್ಯ ತಾಲೂಕಿನ ಆನಸಾಸಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಗೆ ಶಾಸಕ ಪಿ ರವಿಕುಮಾರ್ ಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪಕ್ಷಭೇದ ಮರೆತು ಗ್ರಾಮದವರು ಬಂದು ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಮೆಚ್ಚುವಂತದ್ದು ಆನಸಾಸಲೂ ಗ್ರಾಮ ಮಾದರಿ ಗ್ರಾಮವಾಗಿದೆ ಎಂದರು.
ಮಾರಮ್ಮ ದೇವಿ ದೇವಸ್ಥಾನ ಮತ್ತು ಲೈಬ್ರರಿ ಕಟ್ಟಡ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗೆ ಒಟ್ಟು 35 ಲಕ್ಷ ರೂ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಿದ್ದೇನೆ.
ಚಿಕ್ಕಬಳ್ಳಿ ಕೆರೆಯ ಅಭಿವೃದ್ಧಿಗೆ ಇನ್ನೂ ಎರಡು ತಿಂಗಳಲ್ಲಿ ಅನುದಾನ ಬಿಡುಗಡೆಗೊಳ್ಳಲಿದೆ ವಿರೋಧ ಪಕ್ಷದವರು ಕಾಮಗಾರಿಗೆ ದುಡ್ಡಿಲ್ಲ ಎನ್ನುತ್ತಾರೆ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ನಿಮ್ಮ ಕಣ್ಣ ಮುಂದೆ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಯಲ್ಲಿರುವ ಚಿಕ್ಕಬಳ್ಳಿಕೆರೆ ಕೋಡಿ ಕಾಮಗಾರಿ ಮಾಯಪ್ಪನಹಳ್ಳಿ ಕಾಲುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕ ಬಳ್ಳಿ ಎಂ ಕೃಷ್ಣ , ದ್ಯಾವಪ್ಪ ,ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ತ್ಯಾಗರಾಜು ಗ್ರಾಮ ಪಂಚಾಯತ್ ಸದಸ್ಯರಾದ ದಯಾನಂದ್ ,ಕೃಷ್ಣ, ಸುಮಲೋಕೇಶ್ ಮಾರಮ್ಮ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್ ಕಾರ್ಯದರ್ಶಿ ರಾಜಣ್ಣ ಹಲ್ಲೇಗೆರೆ ಸೊಸೈಟಿ ಮಾಜಿ ಅಧ್ಯಕ್ಷ ಎ.ಎಸ್ ದೇವರಾಜು ಮುಖಂಡರಾದ ಉಮೇಶ್, ಶ್ರೀಕಾಂತ್, ಮಹೇಂದ್ರ ಡೈರಿ ಅಧ್ಯಕ್ಷ ರಾಕೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

