ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ್ ಸಾರ್ವಜನಿಕರೆದುರು ಬಂದು ಇರುವ ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂದು ಮಾಜಿ ಶಾಸಕ ಎ.ವಿ ಉಮಾಪತಿ ಅವರು ಸವಾಲು ಹಾಕಿದ್ದಾರೆ.
ಈ ಬಗ್ಗೆ ಹೊಳಲ್ಕೆರೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಎ.ವಿ ಉಮಾಪತಿ ಅವರು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಆಸ್ತಿ ಅಲ್ಲಿನ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ್, ಬಡಿಗೇರ್, ಶಿವರಾಮಯ್ಯ ಅವರ ಪಾಲಾಗುತ್ತಿದೆ ಎಂದು ಹರಿಹಾಯ್ದರು.
“ಬಡಿಗೇರ್, ಮಠದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ್ ಹಾಗೂ ಶಿವರಾಮಯ್ಯ ಸೇರಿಕೊಂಡು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಆಸ್ತಿಯನ್ನು ಕೊಳ್ಳೆ ಹೊಡೆದಿದ್ದಾರೆ. ಟ್ರಸ್ಟಿ ತಿಮ್ಮಯ್ಯ ಮಠದ ಖಾತೆಗೆ ಜಮಾ ಮಾಡಲು ಹಣ ಕೊಟ್ಟರೂ ಜಮಾ ಮಾಡುತ್ತಿಲ್ಲ. ಆದ್ದರಿಂದ ಮಠದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ್ ರಂತಹ ದ್ರೋಹಿಗಳನ್ನು ಸೇರಿಸಿ ಎಲ್ಲರನ್ನೂ ಮಠದಿಂದ ಹೊರಹಾಕಬೇಕು ಎಂದು ಮಾಜಿ ಶಾಸಕ ಎ.ವಿ ಉಮಾಪತಿ ಅವರು ಕರೆ ನೀಡಿದರು.

