ಮಂಗಳೂರು, ಆಗಸ್ಟ್ 1: ಅನಾಮಿಕ ದೂರುದಾರನ ಆಗ್ರಹದ ಮೇರೆಗೆ ಉತ್ಖನನ ಕೆಲಸ ಜಾರಿಯಲ್ಲಿದೆ ಮತ್ತು ಇವತ್ತು 7ನೇ ಸ್ಥಳದಲ್ಲಿ ಅಸ್ಥಿಪಂಜರಗಳನ್ನು ಪತ್ತೆ ಮಾಡುವ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ನೇತ್ರಾವತಿ ನದಿ ಹರಿಯುತ್ತಿರುವ ತೀರದ ಮತ್ತೊಂದು ಭಾಗದಲ್ಲಿ ಭೂಮಿ ತೋಡುವ ಕೆಲಸ ನಡೆಯುತ್ತಿದೆ ಮತ್ತು ನದಿ ತೀರದ ಈ ಭಾಗದಲ್ಲಿ ನಿಂತಿದ್ದಾರೆ. ಇದುವರೆಗೆ ಎರಡೂವರೆ ಅಡಿ ತೋಡಿದರೂ ಮಾನವ ದೇಹದ ಮೂಳೆಗಳಾಗಲೀ, ಅಸ್ಥಿಪಂಜರವಾಗಲೀ ಸಿಕ್ಕಿಲ್ಲ. ನಿನ್ನೆ ಮೂಳೆಗಳು ಸಿಕ್ಕಿದ್ದು ಮೂರೂವರೆ ಅಡಿ ಅಗೆತದ ನಂತರ, ಹಾಗಾಗಿ ಮುಂದಿನ ಒಂದು-ಒಂದೂವರೆ ಅಡಿ ಅಗೆತ ಅತ್ಯಂತ ನಿರ್ಣಾಯಕ ಎಂದು ಹೇಳಲಾಗುತ್ತಿದೆ.
ಆದಾಗ್ಯೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಪ್ರಕಾರ ಧರ್ಮಸ್ಥಳದ ಬಳಿಯ ಆಸುಪಾಸಿನಲ್ಲಿ ಸಿಗುತ್ತಿರುವ ಮಾನವ ತಲೆಬುರುಡೆ, ಕೈ-ಕಾಲು ಮೂಳೆಗಳು ಮತ್ತು ಮೃತ ದೇಹದ ಅಸ್ತಿಪಂಜರಗಳನ್ನು ಅವಲೋಕಿಸಿ ಕೊಲೆ ಮಾಡಲಾಗಿತ್ತೇ? ಎಂದು ನಿಖರವಾಗಿ ಕಂಡುಹಿಡಿಯಲು ಅಸಾಧ್ಯ ಎಂದು ತಿಳಿಸಿದ್ದಾರೆ.
ಹೀಗಾಗಿ ಧರ್ಮಸ್ಥಳದ ಆಸುಪಾಸಿನಲ್ಲಿ ಈಗ ಸಿಕ್ಕಿರುವ, ಸಿಗುತ್ತಿರುವ ಮೂಳೆಗಳು, ತಲೆಬುರುಡೆಗಳು, ಅಸ್ತಿಪಂಜರಗಳನ್ನು ಪರಿಶೀಲಿಸಿ ಆ ವ್ಯಕ್ತಿಯನ್ನು ಅತ್ಯಾಚಾರ ಮಾಡಲಾಗಿದೆಯೇ? ಎಂದು ನಿಖರವಾಗಿ ಹೇಳುವುದು ಅಸಾಧ್ಯ ಎಂದು ಎಸ್ಐಟಿ ಪೊಲೀಸರಿಗೆ FSL ತಜ್ಞರು ಹೇಳಿದ್ದಾರೆ.
.

