ಬೆಂಗಳೂರು, ಆಗಸ್ಟ್ 4: ರಾಜ್ಯದ ಸಾರಿಗೆ ನಿಗಮಗಳ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಾಳೆ ಆಗಸ್ಟ್ 5 ರಿಂದ ರಾಜ್ಯಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ 4 ಸಾರಿಗೆ ನಿಗಮಗಳು ಇಂದು ಕೆಲಸಕ್ಕೆ ಹಾಜರಾಗುವಂತೆ ಎಲ್ಲಾ ಸಾರಿಗೆ ನೌಕರರಿಗೆ ನೋಟಿಸ್ ನೀಡಿದ್ದಾರೆ. ಅಲ್ಲದೆ ನಾಳೆಯಿಂದ ಕಡ್ಡಾಯವಾಗಿ ಎಲ್ಲಾ ಸಾರಿಗೆ ನೌಕರರು ತಮ್ಮ ಕೆಲಸಕ್ಕೆ ಹಾಜರಾಗಬೇಕು, ಜೊತೆಗೆ ವಾರದ ರಜೆಯನ್ನು ಸಹ ಸಾರಿಗೆ ನೌಕರರು ತೆಗೆದುಕೊಳ್ಳುವಂತಿಲ್ಲ ಎಂದು 4 ಸಾರಿಗೆ ನಿಗಮಗಳು ಸಾರಿಗೆ ನೌಕರರಿಗೆ ನೋಟಿಸ್ ನೀಡಿವೆ.
ಆದ್ದರಿಂದ ನಾಳೆ ಮುಂಜಾನೆ ಸಾರಿಗೆ ನೌಕರರು ಮುಷ್ಕರ ಆರಂಭಿಸುವ ಮುನ್ನ ಸಾರಿಗೆ ಇಲಾಖೆ ಮತ್ತು ಸಾರಿಗೆ ಸಷಯ ರಾಮಲಿಂಗಾರೆಡ್ಡಿ ಅವರು ಇಂದು ರಾತ್ರಿಯೊಳಗೆ ಸಂಧಾನ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಸಾರಿಗೆ ನೌಕರರು ಮುಷ್ಕರ ನಡೆಸದೇ ಕೆಲಸಕ್ಕೆ ಹಾಜರಾಗಲು ನೋಟಿಸ್ ಜಾರಿ

