- MSME ಕ್ಷೇತ್ರದಲ್ಲಿ ಕರ್ನಾಟಕ ಪ್ರಥಮ – ಉದ್ಯಮ್ ಪೋರ್ಟಲ್ನಲ್ಲಿ 43.7 ಲಕ್ಷ ನೋಂದಣಿ.
- ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿ – PMEGP ಮೂಲಕ ₹94.67 ಕೋಟಿ ಸಹಾಯಧನ, 22,712 ಹೊಸ ಉದ್ಯೋಗಗಳು.
- ವಿಶ್ವಕರ್ಮ ಯೋಜನೆಯಲ್ಲಿ ರಾಷ್ಟ್ರದಲ್ಲಿ ನಂ.1 – 5.7 ಲಕ್ಷ ಫಲಾನುಭವಿಗಳ ದಾಖಲೆ.
- ಕೌಶಲ್ಯಾಭಿವೃದ್ದಿಗೆ ಉತ್ತೇಜನ – 18,000 ಮಂದಿಗೆ ESDP ತರಬೇತಿ.
- ಸಾಂಪ್ರದಾಯಿಕ ಕೈಗಾರಿಕೆಯ ಪುನರುತ್ಥಾನ – SFURTI ಯೋಜನೆಯಡಿ 18,952 ಉದ್ಯೋಗ.
- ಅಡಮಾನಮುಕ್ತ ಸಾಲ ಮಂಜೂರು – CGS-MSE ಮೂಲಕ ₹21,453 ಕೋಟಿ.
- SC/ST ಉದ್ಯಮಿಗಳಿಗೆ ಪ್ರೋತ್ಸಾಹ – 11,614 ಉದ್ಯಮಿಗಳಿಗೆ ನೆರವು.
- ESI ಸೇವಾ ವಿಸ್ತರಣೆ – 31 ಜಿಲ್ಲೆಗಳಲ್ಲಿ 1.33 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ.
- ಉದ್ಯೋಗಾವಕಾಶ ವೃದ್ಧಿ – 2.4 ಲಕ್ಷ ಉದ್ಯೋಗ ಸೃಜನೆ, 344 ಉದ್ಯೋಗ ಮೇಳಗಳು.
- ಜನಪರ ಆಡಳಿತ – 100% CPGRAMS ದೂರು ಪರಿಹಾರ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವೆ ಸು.ಶ್ರೀ. ಶೋಭಾ ಕರಂದ್ಲಾಜೆ ಅವರ ಸಕಾರಾತ್ಮಕ ದೃಷ್ಟಿಕೋನ ಹಾಗೂ ವೃತ್ತಿಪರತೆಯಿಂದ ಎಂ.ಎಸ್.ಎಂ.ಇ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯದ ಯೋಜನೆಗಳು ಕುಶಲಕರ್ಮಿಗಳಿಗೆ, ಸಣ್ಣ ವ್ಯಾಪಾರಸ್ಥರಿಗೆ, ಉದ್ಯಮಕರ್ತರಿಗೆ, ಮಹಿಳೆಯರಿಗೆ ತಲುಪಲು ಸಾಧ್ಯವಾಗಿದೆ. ಸಚಿವಾಲಯದ ಉಪಕ್ರಮಗಳಿಂದ ಕರ್ನಾಟಕದಲ್ಲಿ ಹೆಚ್ಚಿನ ಸಾಮಾಜಿಕ ಭದ್ರತೆ, ಆರ್ಥಿಕ ಬೆಳವಣಿಗೆ ಸಾಧ್ಯವಾಗಿದೆ.
ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯವು ಗಮನಾರ್ಹ ಯಶಸ್ಸನ್ನು ಪ್ರದರ್ಶಿಸಿದ್ದು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ.
ಉದ್ಯಮ್ ಪೋರ್ಟಲ್ ನಲ್ಲಿ 43.7 ಲಕ್ಷ MSME ಗಳು ನೋಂದಾವಣಿ ಆಗುವ ಮೂಲಕ ಕರ್ನಾಟಕ ರಾಷ್ಟ್ರದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಇದರಲ್ಲಿ ಸುಮಾರು 21.8 ಲಕ್ಷ ಎಂ.ಎಸ್.ಎಂ.ಇ ಗಳು ಉದ್ಯಮ್ ಅಸಿಸ್ಟ್ ಪ್ಲಾಟ್ಫಾರ್ಮ್ ಮೂಲಕ ನೋಂದಣಿ ಮಾಡಿಕೊಂಡಿವೆ.
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ [PMEGP] ಕಾರ್ಯಕ್ರಮದ ಮೂಲಕ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತಿವೆ.
ಕಳೆದ ಹಣಕಾಸು ವರ್ಷದಲ್ಲಿ, 2839 ಹೊಸ ಯೂನಿಟ್ ಗಳು ಪ್ರಾರಂಭವಾಗಿದ್ದು, ರೂ 94.67 ಕೋಟಿಯಷ್ಟು ಸಹಾಯ ಧನವನ್ನು ನೀಡಲಾಗಿದ್ದು, 22,712 ಉದ್ಯೋಗ ಸೃಜನೆಯಾಗಿದೆ. ಅಸ್ಸಿಸ್ಟಡ್ ಯೂನಿಟ್ಸ (ನೆರವಿನ ಘಟಕಗಳಲ್ಲಿ) 31 % ರಷ್ಟು ಮಹಿಳೆಯರಿರುವುದು ಗಮನಾರ್ಹ.
ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಲ್ಲಿ ಕರ್ನಾಟಕ ಅದ್ಭುತವಾದ ಸಾಧನೆಯನ್ನು ಮಾಡಿದೆ. ಒಟ್ಟು 5,70,890 ನೋಂದಾಯಿತ ಫಲಾನುಭವಿಗಳು, ಸಾಲ ಮಂಜೂರಾತಿ ಆಗಿರುವ 108398 ಫಲಾನುಭವಿಗಳು ಹಾಗೂ ಟೂಲ್ ಕಿಟ್ ವಿತರಣೆಯಾಗಿರುವ 72,960 ಫಲಾನುಭವಿಗಳನ್ನು ದಾಖಲು ಮಾಡುವ ಮೂಲಕ ಸದರಿ ಯೋಜನೆಯು ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆದಿದೆ.
ಕೌಶಲ್ಯ ಅಭಿವೃದ್ಧಿ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿದೆ. 380 ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ [ESDP] ಯೋಜನಾ ಉಪಕ್ರಮಗಳಿಂದ 18,000 ಫಲಾನುಭವಿಗಳು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡು ಹೆಚ್ಚು ಆದಾಯ ಮತ್ತು ಜೀವನೋಪಾಯಕ್ಕೆ ದಾರಿಯಾಗಿದೆ.
ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಸ್ಪೂರ್ತಿಯಾದ ‘SFURTI’ ಯೋಜನೆ

ಸದರಿ ಯೋಜನೆಯಡಿ 29 ಸಾಂಪ್ರದಾಯಿಕ ಕೈಗಾರಿಕೆಗಳ ಕ್ಲಸ್ಟರ್ ಗಳನ್ನು ಆಧುನೀಕರಣ, 18952 ಕುಶಲಕರ್ಮಿಗಳಿಗೆ ಉದ್ಯೋಗ ನೀಡಿದೆ; ಇದರಲ್ಲಿ ಅರ್ಧಕ್ಕೂ ಹೆಚ್ಚು ಮಹಿಳೆಯರಿದ್ದಾರೆ.
CGS -MSE ಯೋಜನೆಯ ಮೂಲಕ 21453 ಕೋಟಿಯಷ್ಟು ಅಡಮಾನ ಮುಕ್ತ ಸಾಲವನ್ನು ಫಲಾನುಭವಿಗಳಿಗೆ ಮಂಜೂರಾಗಿದೆ. ತನ್ಮೂಲಕ, ಮೊದಲ ಬಾರಿ ಉದ್ಯಮವನ್ನು ಪ್ರಾರಂಭಿಸುವವರಿಗೂ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೂ ಸಹಾಯಕಾರಿಯಾಗಿದೆ ರಾಷ್ಟ್ರೀಯ SC-ST ಹಬ್ ಯೋಜನೆ (NSSH) ಮೂಲಕ 11,614 ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಉದ್ಯಮಕರ್ತರಿಗೆ ಉದ್ದೇಶಿತ ಬೆಂಬಲವನ್ನು ನೀಡಲಾಗಿದೆ. ಈ ಯೋಜನೆಯಡಿ ಖಾದಿ ಸಂಸ್ಥೆಗಳಿಗೆ, ಕುಶಲಕರ್ಮಿಗಳಿಗೆ ಹಾಗೂ ಗುಡಿ ಕೈಗಾರಿಕೆಗಳಿಗೆ ಸಾಕಷ್ಟು ಸಹಾಯವಾಗಿದೆ ಸಾಮಾಜಿಕ ಭದ್ರತೆ ಹಾಗೂ ಸಮಾನ ಅವಕಾಶವನ್ನು ಎತ್ತಿ ಹಿಡಿದ ಕಾರ್ಮಿಕ & ಉದ್ಯೋಗ ಸಚಿವಾಲಯ ESI ಯೋಜನೆಯು 31 ಜಿಲ್ಲೆಗಳಿಗೆ ವ್ಯಾಪಿಸುವ ಮೂಲಕ 1.33 ಕೋಟಿ ಕಾರ್ಮಿಕರು ಹಾಗೂ ಅವರ ಪರಿವಾರದ ಸದಸ್ಯರಿಗೆ ತಲುಪುವ ಮೂಲಕ ದಾಪುಗಾಲನ್ನಿಟ್ಟಿದೆ. ಸುಮಾರು 849 ಕೋಟಿ ವೆಚ್ಚದಲ್ಲಿ ಎಂಟು ನೂತನ ESI ಆಸ್ಪತ್ರೆಗಳ ಕಾಮಗಾರಿ ಮುಗಿಯುವ ಹಂತದಲ್ಲಿದೆ. 2024-25 ರಲ್ಲಿ 19117 ಹೊಸ ESI ಸಂಸ್ಥೆಗಳು ಸೇರ್ಪಡೆಯಾಗುವ ಮೂಲಕ 4.95 ಲಕ್ಷ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸಿದೆ.
ESI ಆಸ್ಪತ್ರೆಗಳ ಬಲ ವರ್ಧನೆಯಿಂದ ಉತ್ತಮ ಗುಣಮಟ್ಟದ ಸೇವೆಯನ್ನು ಕೊಡಲಾಗುತ್ತಿದೆ.ಕಳೆದ ವರ್ಷದಲ್ಲಿ 19.7 ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ ಹಾಗೂ 75 ,000 ಒಳರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ನೂತನ ತಂತ್ರಜ್ಞಾನ ಹಾಗೂ ನಾವೀನ್ಯತೆಗಳಾದ AAA + ಮೊಬೈಲ್ ಆಪ್ ಗಳಿಂದ ಉತ್ತಮ ಸೇವೆ ಹಾಗೂ ರಾಜಾಜಿನಗರ, ಪೀಣ್ಯ ಮತ್ತು ಕಲಬುರಗಿಯಲ್ಲಿ ಆಸ್ಪತ್ರೆಗಳನ್ನು ಆಧುನೀಕರಣ ಮಾಡುವ ಮೂಲಕ ವಿಶ್ವದರ್ಜೆಯ ವೈದ್ಯಕೀಯ ಚಿಕಿತ್ಸೆಗಳನ್ನು ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗದವರು ಪಡೆಯಬಹುದಾಗಿದೆ.

ಉದ್ಯೋಗ ವಲಯದಲ್ಲಿ, ಕರ್ನಾಟಕದ 14 ಮಾದರಿ ವೃತ್ತಿ ಕೇಂದ್ರವು, ರಾಷ್ಟ್ರೀಯ ವೃತ್ತಿ ಸೇವೆ ಯೋಜನೆಯನ್ನು ಕಾರ್ಯಗತಗೊಳಿಸಲು ಯಶಸ್ವಿಯಾಗಿದೆ. ಸದರಿ ಯೋಜನೆಯಡಿ, 16.7 ಲಕ್ಷ ಉದ್ಯೋಗಾಕಾಂಕ್ಷಿಗಳನ್ನು ಮತ್ತು 88,948 ಉದ್ಯೋಗದಾತರನ್ನು ನೋಂದಾವಣಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ 2.4 ಲಕ್ಷ ಉದ್ಯೋಗ ಸೃಜನೆ, 344 ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಮುಂದುವರೆದು, ಹುಬ್ಬಳ್ಳಿ EPFO ನಲ್ಲಿ 78.7 ಲಕ್ಷ ಚಂದಾದಾರರಿಗೆ ಉತ್ತಮ ಸೇವೆ ನೀಡಿ, ರೂ 4986 ಕೋಟಿ ಕ್ಲೇಮ್ ಗಳನ್ನು ಇತ್ಯರ್ಥಗೊಳಿಸುವ ಮೂಲಕ ರಾಷ್ಟ್ರದಲ್ಲೇ ಉತ್ತಮ ಸಾಧನೆ ಮಾಡಿದೆ.
ಪಾರದರ್ಶಕ, ನಾಗರೀಕ ಕೇಂದ್ರಿತ ಸೇವೆ
ಕರ್ನಾಟಕದಲ್ಲಿ ಸುಮಾರು 700 ಕುಂದು ಕೊರತೆ ಸಭೆಗಳನ್ನು ನಡೆಸುವ ಮೂಲಕ ಶೇಕಡಾ 100 % ರಷ್ಟು CPGRAMS ದೂರುಗಳನ್ನು ಬಗೆಹರಿಸಿ ಉತ್ತಮ ಸಾಧನೆ ಮಾಡಿದೆ. ಆಧುನೀಕರಣ, ಡಿಜಿಟಲೀಕರಣದ ಮೂಲಕ ಸರ್ಕಾರದ ಸೇವೆಗಳು ಫಲಾನುಭವಿಗಳಿಗೆ ಮುಟ್ಟಲು ಸಾಧ್ಯವಾಗಿದೆ. ರಾಜ್ಯವು ಪ್ರಗತಿಯ ಪಥಾದ್ಲಲಿ ಸಾಗುತ್ತಿರುವಾಗ, ಸುಶ್ರೀ ಶೋಭಾ ಕರಂದ್ಲಾಜೆ ಅವರು ಪ್ರತಿಪಡಿಸಿದ ಸಹಭಾಗಿತ್ವದ ಮಾದರಿಯು ಯಾವುದೇ ಕಾರ್ಮಿಕ, ಕುಶಲಕರ್ಮಿ ಅಥವಾ ಉದ್ಯಮಿಯ ಹಿಂದೆ ಬೀಳಲು ಬಿಡುವುದಿಲ್ಲ ಎಂದು ಖಚಿತಪಡಿಸುತ್ತದೆ ಕೇಂದ್ರ ಸಚಿವೆ ಸು.ಶ್ರೀ. ಶೋಭಾ ಕರಂದ್ಲಾಜೆ ಅವರ ಸೇವಾತತ್ಪರತೆ, ಬದ್ಧತೆ, ಸಮರ್ಪಣಾ ಭಾವದಿಂದ ಸಣ್ಣ ಉದ್ಯಮಕರ್ತರ, ಕುಶಕಲಕರ್ಮಿಗಳ, ಸಣ್ಣ ವ್ಯಾಪಾರಿಗಳ, ಮಹಿಳೆಯರ ಜೀವನ ಸುಧಾರಿಸಿದೆ ಹಾಗೂ ಆದಾಯ ಹೆಚ್ಚಳವಾಗಿದೆ. ಸಚಿವರ ದೂರದೃಷ್ಟಿ ಹಾಗೂ ಸಕಾರಾತ್ಮಕ ದೃಷ್ಟಿಕೋನ ಹಾಗೂ ವೃತ್ತಿಪರತೆಯಿಂದ ಯೋಜನೆಗಳು ಕರ್ನಾಟಕ ಸೇರಿದಂತೆ ದೇಶದ ಎಲ್ಲ ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿದೆ.

