Headlines

ಹುನಗುಂದ ತಾಲೂಕಿನ ಅವಳಿ ಸಂಘಗಳಿಂದ ಸೂಟಿ ಪತ್ರಿಕೆ ಹಾಗೂ ಪದಗ್ರಹಣ ಕಾರ್ಯಕ್ರಮ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಹುನಗುಂದದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹುನಗುಂದ ಹಾಗೂ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುನಗುಂದ ಅವಳಿ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೂಟಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸರಳವಾಗಿ ಸುಂದರವಾಗಿ ಯಶಸ್ವಿಯಾಯಿತು.


ಸರಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರು ಆಗಿರುವ ಶ್ರೀ ಎಸ್ ಜಿ ಹುದ್ದಾರ ಅವರು ಒಂಟಿಯ ಹೋರಾಟಕ್ಕೂ ಜಂಟಿಯ ಹೋರಾಟಕ್ಕೂ ಬಹಳ ವ್ಯತ್ಯಾಸವಿದೆ. ನಾವೆಲ್ಲರೂ ಸಂಘ ಸಂಸ್ಥೆಗಳ ಜೊತೆಗೆ ಸದಾ ಮುನ್ನಡೆಯೋಣ ಸಂಘಗಳ ಒಂದು ಕೈಗೆ ನಮ್ಮದು ಒಂದು ಕೈ ಸೇರಿಸಿದಾಗ ಮಾತ್ರ ಸಂಘ ಸಂಸ್ಥೆಗಳ ಮೂಲಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನವನ್ನು ವಹಿಸಿಕೊಂಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುನಗುಂದ್ ಘಟಕದ ನಿಕಟ ಪೂರ್ವ ಅಧ್ಯಕ್ಷರು ಆಗಿರುವ ಶ್ರೀ ಸಿದ್ದು ಶೀಲವಂತರ ಅವರು ಶಿಕ್ಷಣ ಜ್ಯೋತಿ ಸಾವಿತ್ರಿಬಾಯಿ ಪುಲೆ ಅವರಿಗೆ ಜನ್ಮದಿನದ ಶುಭಾಶಯಗಳು ತಿಳಿಸುತ್ತಾ ಸಂಘಟನೆಯ ಶಕ್ತಿ ಸರ್ವ ಶಕ್ತಿಗೂ ಮಿಗಿಲಾದದ್ದು, ಸಂಘ ಸಂಸ್ಥೆಗಳ ಜೊತೆಗೆ ನಾವೆಲ್ಲರೂ ಶಿಕ್ಷಕರು ಎಂಬ ಭಾವ ನಮ್ಮಲ್ಲಿ ಇರಲಿ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶ್ರೀ ಎಂ ಪಿ ಕುದರಿ ಅವರು ಸಂಘಗಳನ್ನು ಹುಟ್ಟುಹಾಕಿ ಸಂಘದ ಬೆಳವಣಿಗೆಗೆ ಸದಾ ಕಾಲ ದುಡಿಯೋಣ ಪ್ರತಿಯೊಬ್ಬರ ಕಷ್ಟಗಳಿಗೆ ಹೆಗಲು ನಿಡೋಣ ಎಂಬ ವಿಚಾರಗಳನ್ನು ಹಂಚಿಕೊಂಡರು.


ಎಸ್ ಸಿ/ ಎಸ್ ಟಿ ನೌಕರರ ಸಂಘದ ಉಪಾಧ್ಯಕ್ಷರು ಆಗಿರುವ ಶ್ರೀ ಎಂ ಎಚ್ ಪೂಜಾರಿ ಅವರು ಮಾತನಾಡಿ ಸಂಘದ ಗುರಿ ಉದ್ದೇಶಗಳು ಹಾಗೂ ಹಿರಿಯರ ಮಾರ್ಗದರ್ಶನ, ಸಂಘ ಬೆಳೆದು ಬಂದ ದಾರಿಯನ್ನು ಹಾಗೂ ಎನ್ ಪಿ ಎಸ್ ಹೋರಾಟದ ದಿನಗಳನ್ನು ವೇದಿಕೆ ಮೇಲೆ ನೆನೆಸಿಕೊಂಡರು.


ಅವಳಿ ಸಂಘದಿಂದ ಶ್ರೀ ಸಂಗಮೇಶ ಪಾಟೀಲ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹುನಗುಂದ ಇವರಿಗೆ ಸನ್ಮಾನಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಆಗಿರುವ ಶ್ರೀ ಆನಂದ್ ಎನ್ ಬೇಗಾರ ಅವರು ಮಾತನಾಡಿದರು.


ಅವಳಿ ಸಂಘದ ಸೂಟಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಎಂ ಟಿ ನಡುವಿನಮನಿ,ಶ್ರೀ ಶರಣಪ್ಪ ದು ಮರೋಳ,ಶ್ರೀ ಮುತ್ತಪ್ಪ ಹ. ಪೂಜಾರಿ,ಶ್ರೀ ಲಚ್ಚಪ್ಪ ವಾಯ್ ಗುಂಡಿನಮನಿ, ಶ್ರೀ ಶಾಂತರಾಜ ಎಸ್ ಪಿ, ಶ್ರೀ ರವೀಂದ್ರ ಕೆ ಆರ್, ಶ್ರೀ ಮಹಮ್ಮದ್ ರಫೀಕ್ ಯಳಮೇಲಿ, ಶ್ರೀ ಮಂಜುನಾಥ ಟಕ್ಕಳಕಿ, ಶ್ರೀ ಗಂಗಾಧರಯ್ಯ ಹಿರೇಮಠ, ಶ್ರೀ ಸಂತೋಷ ಶಿರಬೂರ, ಶ್ರೀ ಮಹೇಂದ್ರ ಕುಮಾರ್ ಬೆನ್ನೂರ, ಶ್ರೀ ಪಕೀರಪ್ಪ ತೆಗ್ಗಿನಮನಿ, ಶ್ರೀ ಅಬ್ದುಲ್ ಸೋಲಾಪುರ, ಶ್ರೀ ಪ್ರಶಾಂತ್ ರಾಮವಾಡಗಿ, ಶ್ರೀ ಸುಧಾಕರ ಕೆ ಎನ್, ಶ್ರೀ ಜಾಫರ್ ಅಲಿ ರಾಂಪುರ,ಶ್ರೀ ಹನಮಂತ್ ಟಿ ಕಂದಗಲ್, ಶ್ರೀ ಅರುಣ್ ಕುಮಾರ್ ಎನ್, ಶ್ರೀಮತಿ ಅನುಪಮಾ ಪಾಡಮುಖಿ, ಶ್ರೀ ಮಲ್ಲಪ್ಪ ತೋಟಗೇರ, ಶ್ರೀ ಹನಮಂತಪ್ಪ ಕುರಿ ಹಾಗೂ ಅವಳಿ ಸಂಘದ ಸರ್ವರು ಭಾಗವಹಿಸಿದ್ದರು.


ಶ್ರೀಮತಿ ಎಸ್ ಆರ್ ಲಕ್ಷ್ಯಕೊಪ್ಪದ ಪ್ರಾರ್ಥನಾ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಸುಧಾಕರ್ ಅವರು ಸ್ವಾಗತಿಸಿದರು. ಶ್ರೀ ಮುತ್ತು ಯ.ವಡ್ಡರ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!