ಮನೆಯಲ್ಲೇ ಸುಜಾತಾ ಭಟ್ ವಿಚಾರಣೆ ನಡೆಸಿದ ಎಸ್ಐಟಿ
ಬೆಂಗಳೂರು, ಆ.24: ಅನನ್ಯಾ ಭಟ್ ನಾಪತ್ತೆ ಕುರಿತಂತೆ ದಿನಕ್ಕೊಂದು ಗೊಂದಲದ ಹೇಳಿಕೆ ನೀಡಿ ದಾರಿ ತಪ್ಪಿಸುತ್ತಿರುವ ಸುಜಾತಾ ಭಟ್ ಅವರನ್ನು ಅವರ ಮನೆಯಲ್ಲೇ ಶೀಘ್ರದಲ್ಲೇ ವಿಚಾರಣೆ ನಡೆಸಲು ಎಸ್‌ಐಟಿ ವಿಶೇಷ ತಂಡ ನಿರ್ಧರಿಸಿದೆ. ಸುಜಾತ ಭಟ್ ನೆಲೆಸಿರುವ ಬೆಂಗಳೂರಿನ ಬನಶಂಕರಿಯಲ್ಲಿರುವ ಸುಜಾತಾ ಭಟ್ ಅವರ ನಿವಾಸಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಇಲ್ಲವೆ ಒಂದೆರಡು ದಿನಗಳಲ್ಲಿ ಅವರನ್ನು ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಸ್ಐಟಿ ವಿಶೇಷ ತಂಡದ ಮೂಲಗಳು ತಿಳಿಸಿವೆ. ಧರ್ಮಸ್ಥಳದ ಸುತ್ತಮುತ್ತ ನೂರಾರು…

