ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಗೊಳಿಸುವ ವಿವಾದಾತ್ಮಕ ಮಸೂದೆ ಲೋಕಸಭೆಯಲ್ಲಿ ಮಂಡನೆ
ನವದೆಹಲಿ, ಆ.20: ಆರೋಪ ಸಾಬೀತಾಗದೇ ಇದ್ದರೂ ವಿಚಾರಣೆ ಹಂತದಲ್ಲಿ 30 ದಿನಕ್ಕಿಂತ ಹೆಚ್ಚು ಅವಧಿ ಜೈಲಿನಲ್ಲಿದ್ದರೆ ಪ್ರಧಾನಿ ಹಾಗೂ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬಹುದು ಎಂಬ ವಿವಾದಾತ್ಮಕ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಸಚಿವ ಅಮಿತ್ ಶಾ ಬುಧವಾರ ಮೂರು ತಿದ್ದುಪಡಿ ಮಸೂದೆಗಳನ್ನು ಮಂಡಿಸಿದ್ದು, ಇದರಲ್ಲಿ ಪ್ರಮುಖವಾದ ಆರೋಪ ಸಾಬೀತಾಗದೇ ಇದ್ದರೂ 30 ದಿನ ಜೈಲಲ್ಲಿ ಇದ್ದ ಯಾವುದೇ ವ್ಯಕ್ತಿಯನ್ನು ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನದಿಂದ ಪದಚ್ಯುತಗೊಳಿಸಬಹುದು ಎಂಬ ಮಸೂದೆ ಪ್ರಮುಖವಾಗಿತ್ತು. ಕ್ರಿಮಿನಲ್…

