ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ತೆರಳುವ ಸಂದರ್ಭದಲ್ಲಿ ಮೊಬೈಲ್ ಕಳೆದು ಕೊಂಡಿದ್ದ ಪ್ರಯಾಣಿಕರೊಬ್ಬರ ಮೊಬೈಲನ್ನು ಹಿಂದಿರುಗಿಸುವ ಮೂಲಕ ಬಸ್ಸಿನ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮಂಡ್ಯ – ಆದಿಚುಂಚನಗಿರಿ ನಡುವೆ ಸಂಚರಿಸುವ ನಾಗಮಂಗಲ ಡಿಪೋಗೆ ಬಸ್ಸಿನ ನಿರ್ವಾಹಕ ಸತೀಶ್ ಬಿ.ಎಸ್.ಮೊಬೈಲನ್ನು ಹಿಂದಿರುಗಿಸಿ ಮಾನವೀಯತೆ ಮರೆದಿದ್ದಾರೆ.
ಏನಿದು ಘಟನೆ ?
ಮಂಡ್ಯ ತಾಲ್ಲೂಕಿನ ಹನಿಯಂಬಾಡಿ ಗ್ರಾಮದ ಮಂಜುಳ ಹಾಗೂ ಅವರ ಪತಿ ಎನ್.ಶೇಖರ್ ಅವರು ಭಾನುವಾರ ಬೆಳಿಗ್ಗೆ ಮಂಡ್ಯದಿಂದ ಆದಿಚುಂಚನಗಿರಿಗೆ ಬಸ್ಸಿನಲ್ಲಿ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಮಂಜುಳ ಅವರ ಮೊಬೈಲ್ ಕಳೆದು ಹೋಗಿತ್ತು. ಎಲ್ಲ ಕಡೆ ಹುಡುಕಿದರೂ ಅದು ಪತ್ತೆಯಾಗಿರಲಿಲ್ಲ. ಆದರೆ ಬಸ್ಸು ತನ್ನ ಕಾರ್ಯಾಚರಣೆ ಮುಗಿಸಿ ಡಿಪೋಗೆ ತೆರಳುವ ಸಂದರ್ಭದಲ್ಲಿ ಮೊಬೈಲು ನಿರ್ವಾಹಕ ಸತೀಶ್ ಬಿ.ವಿ ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ಮೊಬೈಲಿನಲ್ಲಿದ್ದ ನಂಬರ್ ಗೆ ಕರೆ ಮಾಡಿ, ಮೊಬೈಲ್ ನಮ್ಮ ಬಳಿ ಇರುವುದಾಗಿ ತಿಳಿಸಿ, ಮಂಡ್ಯ ಬಸ್ ನಿಲ್ದಾಣಕ್ಕೆ ಬಂದು ಪಡೆದುಕೊಳ್ಳುವಂತೆ ತಿಳಿಸಿದರು. ಆನಂತರ ಎನ್.ಶೇಖರ್ ಬಸ್ ನಿಲ್ದಾಣಕ್ಕೆ ತೆರಳಿ ವಾಪಸ್ ಪಡೆದು, ನಿರ್ವಾಹಕ ಸತೀಶ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮತ್ತೊರ್ವ ನಿರ್ವಾಹಕ ಜಗದೀಶ್ ಬಿ ಪಿ ಹಾಗೂ ಗೃಹ ರಕ್ಷಕದಳ ಸಿಬ್ಬಂದಿ ಶ್ರೀನಿವಾಸ್ ಪ್ರಸಾದ್ ಉಪಸ್ಥಿತರಿದ್ದರು.

