ಬೆಂಗಳೂರು, ಜುಲೈ 19: ನಗರದಲ್ಲಿ ಆಗಾಗ ಬಿಎಂಟಿಸಿ ಬಸ್ ಅಪಘಾತಕ್ಕೆ ಈಡಾಗುತ್ತಲೇ ಇವೆ. ಈ ನಡುವೆ ನಿನ್ನೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಪೀಣ್ಯ 2ನೇ ಹಂತದ ಬಳಿ ಕ್ಯಾಂಟೀನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದಾರೆ.
ಬಿಎಂಟಿಸಿ ನಿರ್ವಹಿಸುತ್ತಿದ್ದ ಎಲೆಕ್ಟ್ರಿಕ್ ಬಸ್ ನಿನ್ನೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಬದಿಯ ಕ್ಯಾಂಟೀನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಜನರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗಿದ್ದು, ಇದರಲ್ಲಿ ಓರ್ವ ಯುವತಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ನಿನ್ನೆ ಬೆಳಗ್ಗೆ 8.45 ರ ಸುಮಾರಿಗೆ ನಡೆದಿದೆ. ಉಳಿದ ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಎಲೆಕ್ಟ್ರಿಕ್ ಬಸ್ ಡ್ರೈವರ್ ಮತ್ತು ಬಿಎಂಟಿಸಿ ಕಂಡಕ್ಟರ್ ನಡುವೆ ಜಗಳವಾದ ಕಾರಣ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಿಎಂಟಿಸಿ ಕಂಡಕ್ಟರ್ ಬಸ್ ಕಂಡಕ್ಟರ್ ರಮೇಶ್ ಬಸ್ ಚಲಾಯಿಸುವ ವೇಳೆ ಈ ದುರ್ಘಟನೆ ನಡೆದಿದೆ. ಬಸ್ ಸಂಖ್ಯೆ KA-51 AK4170 ಅಪಘಾತ ನಡೆಸಿದ್ದು, ಇದು ರೂಟ್- 252/4 ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯ 2ನೇ ಹಂತದಲ್ಲಿ ಸಂಚಾರ ಮಾಡುತ್ತಿತ್ತು. ಡಿಪೋ-22 ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟೀನ್ ಚೆಲ್ಲಾಪಿಲ್ಲಿಯಾಗಿತ್ತು.
ಒಟ್ಟಾರೆ ಈ ಅಪಘಾತ ಬಿಎಂಟಿಸಿ ಸಂಸ್ಥೆ ಮತ್ತು ಎಲೆಕ್ಟ್ರಿಕ್ ಬಸ್ ನಿರ್ವಹಣೆ ಮತ್ತು ವಿಶ್ವಾಸಾರ್ಹತೆ ಮೇಲೆ ಭಾರಿ ಹೊಡೆತ ನೀಡಿದೆ.

