“ಗುಂಡ್ಲುಪೇಟೆಯ ಮಹಾನ್ ಪುತ್ರ: ಗ್ರಾಮೀಣ ಅಭಿವೃದ್ಧಿಯ ಕರ್ತೃ ಅಬ್ದುಲ್ ನಜೀರ್ ಸಾಬ್ ಸ್ಮರಣೆ”
ಇಂದು ನೀರ್ ಸಾಬ್ ಎಂದೇ ಖ್ಯಾತರಾದ ಅಬ್ದುಲ್ ನಜೀರ್ ಸಾಬ್ ಅವರ 92 ನೇ ಹುಟ್ಟುಹಬ್ಬ.ಗಾಂಧೀಜಿ ಗ್ರಾಮ ಸ್ವರಾಜ್ಯ ಪರಿ ಕಲ್ಪನೆಯನ್ನ ಸಾಕಾರಗೊಳಿಸಿದ ಹೆಗ್ಗಳಿಕೆ ಅಬ್ದುಲ್ ನಜೀರ್ ಸಾಬ್ ಗೇ ಸಲ್ಲುತ್ತದೆ. ಜಿಲ್ಲಾ ಪಂಚಾಯತಿ, ಮಂಡಲ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಯನ್ನು ರಾಜ್ಯಕ್ಕೆ ತಂದ ಶ್ರೇಯಸ್ಸು ಗುಂಡ್ಲುಪೇಟೆ ಮೂಲದ ನೀರ್ ಸಾಬ್ ಅವರದು. ಹೆಗ್ಡೆ ಸಂಪುಟದಲ್ಲಿ ಗ್ರಾಮೀಣಅಭಿವೃದ್ಧಿ ಸಚಿವರಾಗಿದ್ದ 1983 ರಿಂದ 86ರವರೆಗೂ ಕರ್ನಾಟಕದಲ್ಲಿ ಭೀಕರ ಬರಗಾಲ. ಇಂತಹ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೆ ಕೊಳವೆ ಬಾವಿ ತೋಡಿಸಿ,…

