ರಷ್ಯಾದ ಜೊತೆಗೆ ಯುದ್ಧ ಮುಗಿದ ಮೇಲೆ ರಾಜೀನಾಮೆ ನೀಡುತ್ತೇನೆ: ಉಕ್ರೇನ್ ಅಧ್ಯಕ್ಷ ಘೋಷಣೆ
ಕೈವ್, ಸೆ.25: ರಷ್ಯಾದೊಂದಿಗಿನ ಯುದ್ಧ ಮುಗಿದ ನಂತರ ತಾನು ಅಧಿಕಾರ ತ್ಯಜಿಸಲು ಸಿದ್ಧನಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಈ ಬಗ್ಗೆ ಖಾಸಗಿ ವೆಬ್‌ಸೈಟ್ ಜೊತೆ ಮಾತನಾಡಿದ ಝೆಲೆನ್ಸ್ಕಿ, “ಯುದ್ಧವನ್ನು ಮುಗಿಸುವುದು ಮಾತ್ರ ನನ್ನ ಗುರಿ. ಯುದ್ಧ ಮುಗಿದು ನಮ್ಮ ದೇಶದಲ್ಲಿ ಶಾಂತಿ ನೆಲೆಸಿದ ನಂತರ ಅಧಿಕಾರ ನಡೆಸಬೇಕೆಂಬ ಆಸೆ ನನಗಿಲ್ಲ. ಮುಂದಿನ ಅವಧಿಗೆ ನಾನು ಸ್ಪರ್ಧಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶಾಂತಿಕಾಲದಲ್ಲಿ ಉಕ್ರೇನ್ ಅನ್ನು ಮುನ್ನಡೆಸುವ ಉದ್ದೇಶವಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದು, ಕದನ…

