Headlines

ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಕೊನೆಗೂ ರಹಸ್ಯ ಬಾಯ್ಬಿಟ್ಟ ಪೆಡ್ಲರ್!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಭಾರಿ ಪ್ರಮಾಣದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇನ್ನು ಡ್ರಗ್ಸ್ ತಯಾರಿಕಾ ಘಟಕ ಮೈಸೂರಿನಲ್ಲೇ ಇರುವುದು ಪತ್ತೆಯಾಗಿದೆ. ಮೈಸೂರಿನಲ್ಲಿ ಸಿಕ್ಕ ಮಾದಕ ವಸ್ತುವಿಗೆ ಮಹಾರಾಷ್ಟ್ರದ ನಂಟು ಇದ್ದು, ಈ ಬಗ್ಗೆ ಮಹಾರಾಷ್ಟ್ರದಲ್ಲಿ ಸೆರೆಯಾದ ಡ್ರಗ್ ಪೆಡ್ಲರ್‌ನಿಂದ ಮಾಹಿತಿ ಬಹಿರಂಗವಾಗಿದೆ.ಮೈಸೂರಿನಿಂದ ಡ್ರಗ್ ಸಪ್ಲೈ ಆಗುತ್ತಿರುವ ಬಗ್ಗೆ ಪೆಡ್ಲರ್ ಬಾಯ್ಬಿಟ್ಟಿದ್ದಾನೆ. ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು, ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಈ ವೇಳೆ…

Read More

ಆರೋಗ್ಯ ಇಲಾಖೆಯ ವಿರುದ್ಧ 108 ಆ್ಯಂಬುಲೆನ್ಸ್ ನೌಕರರ ಆಕ್ರೋಶ: ಆ.1ರಿಂದ ಮುಷ್ಕರದ ಎಚ್ಚರಿಕೆ

ಬೆಂಗಳೂರು, ಜುಲೈ 26: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಮುಖ ಯೋಜನೆಗಳಲ್ಲಿ ಒಂದಾದ 108 ಆಂಬುಲೆನ್ಸ್ ಆರೋಗ್ಯ ಕವಚ ಸೇವೆಯನ್ನು ಇಷ್ಟು ದಿನಗಳ ಕಾಲ ಜಿವಿಕೆ ಎಂಬ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಶೀಘ್ರದಲ್ಲೇ ಆರೋಗ್ಯ ಇಲಾಖೆಯೇ ನಿರ್ವಹಣೆ ಮಾಡುವುದಾಗಿ ಘೋಷಿಸಿದೆ. ಆದರೆ ಈ ಬೆಳವಣಿಗೆ ಬೆನ್ನಲ್ಲೇ 108 ಆರೋಗ್ಯ ಕವಚ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಈವರೆಗೂ ಒಂದೇ ಸಂಸ್ಥೆಯ ನಿರ್ವಹಣೆ ಅಡಿಯಲ್ಲಿ 3500 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ…

Read More

ವಿರೋಧ  ಪಕ್ಷದವರು ದುಡ್ಡಿಲ್ಲ ಎನ್ನುತ್ತಾರೆ, ಕ್ಷೇತ್ರದ ಅಭಿವೃದ್ಧಿ ನಿಮ್ಮ ಕಣ್ಣ ಮುಂದೆ ಇದೆ : ಶಾಸಕ ಪಿ ರವಿಕುಮಾರ್

ಮಂಡ್ಯ ತಾಲೂಕಿನ ಆನಸಾಸಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಗೆ ಶಾಸಕ ಪಿ ರವಿಕುಮಾರ್ ಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪಕ್ಷಭೇದ ಮರೆತು ಗ್ರಾಮದವರು ಬಂದು ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಮೆಚ್ಚುವಂತದ್ದು ಆನಸಾಸಲೂ ಗ್ರಾಮ ಮಾದರಿ ಗ್ರಾಮವಾಗಿದೆ ಎಂದರು. ಮಾರಮ್ಮ ದೇವಿ ದೇವಸ್ಥಾನ ಮತ್ತು ಲೈಬ್ರರಿ ಕಟ್ಟಡ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗೆ ಒಟ್ಟು 35 ಲಕ್ಷ ರೂ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಿದ್ದೇನೆ. ಚಿಕ್ಕಬಳ್ಳಿ ಕೆರೆಯ ಅಭಿವೃದ್ಧಿಗೆ ಇನ್ನೂ ಎರಡು ತಿಂಗಳಲ್ಲಿ…

Read More

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ: ನ್ಯಾ.ಮೈಕೆಲ್ ಕುನ್ಹಾ ವರದಿ ರದ್ದು ಕೋರಿ ಹೈಕೋರ್ಟಿಗೆ ಡಿಎನ್‌ಎ ರಿಟ್

ಬೆಂಗಳೂರು, ಜುಲೈ 25: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆ ಸಂಬಂಧ ನ್ಯಾ.ಮೈಕೆಲ್ ಕುನ್ಹಾ ವರದಿಯನ್ನು ರದ್ದುಗೊಳಿಸಬೇಕು ಎಂದು ತುರ್ತು ವಿಚಾರಣೆ ಕೋರಿ ಡಿಎನ್​ಎ ಎಂಟರ್​ಟೇನ್​ಮೆಂಟ್​​ ನೆಟ್​ವರ್ಕ್ ಕರ್ನಾಟಕ ಹೈಕೋರ್ಟ್​ಗೆ ಮನವಿ ಮಾಡಿದೆ. ನ್ಯಾ.ಜಯಂತ್ ಬ್ಯಾನರ್ಜಿ, ನ್ಯಾ.ಎಸ್.ಜಿ.ಪಂಡಿತ್ ಅವರಿದ್ದ ಹೈಕೋರ್ಟ್ ಪೀಠಕ್ಕೆ ಈ ಮನವಿ ಸಲ್ಲಿಕೆಯಾಗಿದೆ. ನ್ಯಾ.ಮೈಕೆಲ್ ಕುನ್ಹಾ ವರದಿಯನ್ನು ಕರ್ನಾಟಕ ಸಚಿವ ಸಂಪುಟ ಅಂಗೀಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸದ್ಯ, ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 28ಕ್ಕೆ ನಿಗದಿಪಡಿಸಿದೆ….

Read More

ಹೈಕೋರ್ಟ್ ಮಹತ್ವದ ಆದೇಶ: ಗ್ರೇಟರ್ ಬೆಂಗಳೂರು (ಆಡಳಿತ) ಕಾಯ್ದೆಯಡಿ ಭೂಸ್ವಾಧೀನಕ್ಕೆ ಹಿನ್ನಡೆ

ಬೆಂಗಳೂರು, ಜುಲೈ 24: ಗ್ರೇಟರ್ ಬೆಂಗಳೂರು(ಆಡಳಿತ) ಕಾಯ್ದೆಯಡಿ ಭೂಸ್ವಾಧೀನಕ್ಕೆ ಆರಂಭಿಕ ವಿಘ್ನ ಎದುರಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ (2025) ಅಡಿಯಲ್ಲಿ ಭೂಸ್ವಾಧೀನ ಪ್ರಶ್ನಿಸಿ ರಾಜಗೋಪಾಲ ಗೋಪಾಲಕೃಷ್ಣ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ನೋಟಿಸ್ ಆಧರಿಸಿ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಅರ್ಜಿದಾರರ ಬಿಡದಿ ಜಮೀನಿನ ಸ್ವಾಧೀನಕ್ಕೆ ಅಡ್ಡಿಪಡಿಸದಂತೆ ಆದೇಶ ಹೊರಡಿಸಿದೆ. ಅಲ್ಲದೇ ಈ ಬಗ್ಗೆ ಇದೇ ಜುಲೈ 29ರಂದು ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿ ಹೈಕೋರ್ಟ್ ನೋಟಿಸ್…

Read More

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಮೃತ ಯುವತಿಯ ಮರಣೋತ್ತರ ಪರೀಕ್ಷೆ ವೇಳೆ ಕಿವಿಯೋಲೆ ಕಳವು!

ಬೆಂಗಳೂರು, ಜುಲೈ 24: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ದಿವ್ಯಾಂಶಿಯ ಚಿನ್ನಾಭರಣ ಕಳ್ಳತನವಾಗಿರುವ ಆರೋಪ ಕೇಳಿಬಂದಿದೆ. ಶವಾಗಾರದೊಳಗೆ ಮೃತದೇಹ ಕೊಂಡೊಯ್ಯುವಾಗ ಮಗಳ ಕಿವಿಯೋಲೆ, ಚಿನ್ನದ ಸರ ಇತ್ತು. ಆದ್ರೆ, ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಆಭರಣ ಕಾಣೆಯಾಗಿತ್ತು ಎಂದು ದಿವ್ಯಾಂಶಿ ತಾಯಿ ಅಶ್ವಿನಿ ಆರೋಪಿಸಿ ಬೌರಿಂಗ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶವಾಗಾರದೊಳಗೆ ಮೃತದೇಹ ಕೊಂಡೊಯ್ಯುವಾಗ ಆಭರಣ ಇತ್ತು. ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಆಭರಣ…

Read More

ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ನವದೆಹಲಿ, ಜುಲೈ 24: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ತೂಗುದೀಪ್ ಹಾಗೂ ಇತರೆ ಎಲ್ಲಾ 17 ಆರೋಪಿಗಳು ಈಗಾಗಲೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಪೈಕಿ ದರ್ಶನ್ ಹಾಗೂ 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿತ್ತು. ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. 10 ದಿನಗಳ ಬಳಿಕವಷ್ಟೇ ನಟ ದರ್ಶನ್ ಜಾಮೀನು ಅರ್ಜಿ ಬಗ್ಗೆ ತೀರ್ಪು…

Read More

ಹಳೆಯ GST ಬಾಕಿ ಮನ್ನಾ: ಸಣ್ಣ ವ್ಯಾಪಾರಿಗಳ ಮುಷ್ಕರ ವಾಪಸ್!

ಬೆಂಗಳೂರು, ಜುಲೈ 23: ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಯಾಗುತ್ತಿದ್ದ ನೋಟೀಸ್ ಗಳಿಂದ ಹೌಹಾರಿದ್ದ ರಾಜ್ಯದ ಸಣ್ಣ ಉದ್ದಿಮೆದಾರರು ಸಿಎಂ ಸಿದ್ದರಾಮಯ್ಯನವರು ನಡೆಸಿದ ಮೀಟಿಂಗ್ ನಂತರ ನಿರಾಳರಾಗಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಯಾಗಿರುವ ತೆರಿಗೆ ನೋಟೀಸ್ ಗಳನ್ನು ವಾಪಸ್ಸು ಪಡೆಯುವ ಆಶ್ವಾಸನೆಯನ್ನು ಕಾಂಡಿಮೆಂಟ್ಸ್, ಬೇಕರಿ, ಟೀ ಸ್ಟಾಲ್ ನಡೆಸುವ ಮತ್ತು ಎಲ್ಲ ಸಣ್ಣ ಉದ್ದಿಮೆದಾರರಿಗೆ ಸಿಎಂ ಸಿದ್ದರಾಮಯ್ಯ ಇಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ಆರಂಭಿಸಿದ್ದ ಸಣ್ಣ ವ್ಯಾಪಾರಿಗಳು ಅದನ್ನು ಇಂದೇ ವಾಪಸ್ ಪಡೆದಿದ್ದಾರೆ. ಆದರೆ ಈ…

Read More

ಸೆಪ್ಟೆಂಬರ್ 22 ರಿಂದ ಮರುಜಾತಿಗಣತಿಗೆ ನಿರ್ಧರಿಸಿದ ರಾಜ್ಯಸರ್ಕಾರ

ಬೆಂಗಳೂರು, ಜುಲೈ 23: ಭಾರೀ ವಿವಾದಕ್ಕೆ ಗುರಿಯಾಗಿರುವ ಕಾಂತರಾಜು ಆಯೋಗ ಜಾತಿಗಣತಿ ವರದಿಗೆ ಬ್ರೇಕ್ ಹಾಕಲು ಹೈಕಮಾಂಡ್ ಸೂಚಿಸಿದ್ದು, ಬದಲಿಗೆ ಮರು ಜಾತಿಗಣತಿ ಮಾಡುವಂತೆ ಸೂಚಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಒಪ್ಪಿಗೆ ಸೂಚಿಸಿದ್ದಾರೆ. ಈ ಸಂಬಂಧ ಇಂದು (ಜುಲೈ 23) ಸಂಬಂಧ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮಹತ್ವದ ಸಭೆ ಮಾಡಿದ್ದು, ಜಾತಿ ಜನಗಣತಿ ಮರು ಸಮೀಕ್ಷೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ 15…

Read More

MRMC ಶಿಷ್ಯ ವೇತನ ಹಗರಣ: ಕೈ ಮುಖಂಡನ 5.87 ಕೋಟಿ ಆಸ್ತಿ ಜಪ್ತಿ

ಕಲಬುರಗಿ, ಜುಲೈ 23: ಎಂಆರ್​ಎಂಸಿ ಮೆಡಿಕಲ್ ಕಾಲೇಜ್ ಶಿಷ್ಯ ವೇತನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್​ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಭೀಮಾಶಂಕರ್ ಬಲಿಗುಂದಿಯ 5.87 ಕೋಟಿ ರೂ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಕಲಬುರಗಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018 ರಿಂದ 2024 ರ ವರೆಗಿನ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಶಿಷ್ಯ ವೇತನದಲ್ಲಿ ಅಂದಾಜು 82 ಕೋಟಿ ರೂ. ಹಗರಣ ನಡೆದಿತ್ತು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ‌ ಮಾಡಿತ್ತು….

Read More
error: Content is protected !!