ಕೊನೆಗೂ ಕಿರುತೆರೆ ನಿರೂಪಕಿ ಅನುಶ್ರೀಗೆ ವಿವಾಹ ಭಾಗ್ಯ!
ಬೆಂಗಳೂರು, ಜುಲೈ 17: ಕನ್ನಡ ಕಿರುತೆರೆ ಲೋಕದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಮದುವೆ ಯಾವಾಗ? ಎಂದು ಹಲವಾರು ವರ್ಷಗಳಿಂದ ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಏಕೆಂದರೆ ಇದೀಗ ಖ್ಯಾತ ಕಿರುತೆರೆ ನಿರೂಪಕಿ ಅನುಶ್ರೀ ಅವರಿಗೆ ಕೊನೆಗೂ ಕಂಕಣಭಾಗ್ಯ ಕೂಡಿ ಬಂದಿದ್ದು, ಮದುವೆಗೆ ಮುಹೂರ್ತ ಫಿಕ್ಸ್ ಕೂಡ ಆಗಿದೆ. ಅನುಶ್ರೀ ಮುಂದಿನ ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ಆಗಲಿದ್ದು, ಬೆಂಗಳೂರಿನ ಸಾಫ್ಟ್ ವೇರ್ ಉದ್ಯಮಿಯನ್ನು ವರಿಸಲಿದ್ದಾರೆ. ಕುಟುಂಬಸ್ಥರು ನೋಡಿದ ಹುಡುಗನ ಜೊತೆಯೇ ಅನುಶ್ರೀ…

