ಐಶ್ವರ್ಯಗೌಡ ಚಿನ್ನ ವಂಚನೆ ಕೇಸ್: ಇ.ಡಿಯಿಂದ ಡಿ.ಕೆ ಸುರೇಶ್ ವಿಚಾರಣೆ
ಬೆಂಗಳೂರು, ಜುಲೈ 8: ಐಶ್ವರ್ಯಗೌಡ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕೇಂದ್ರ ಜಾರಿ ನಿರ್ದೇಶನಾಲಯ 2ನೇ ಬಾರಿಗೆ ವಿಚಾರಣೆಗೊಳಪಡಿಸಿದೆ. ಐಶ್ವರ್ಯಗೌಡ ಹಲವಾರು ಮಂದಿಗೆ ಚಿನ್ನ ವ್ಯಾಪಾರದ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ್ದರು. ಈ ವೇಳೆ ಆಕೆ ತಾವು ಡಿ.ಕೆ.ಸುರೇಶ್‌ರವರ ಸಹೋದರಿ ಎಂದು ಹೇಳಿಕೊಂಡಿದ್ದರು. ನಟರೊಬ್ಬರು ಡಿ.ಕೆ.ಸುರೇಶ್‌ರವರ ಧ್ವನಿಯನ್ನು ಮಿಮಿಕ್ರಿ ಮಾಡಿ ಉದ್ಯಮಿಗಳ ಜೊತೆ ಮಾತನಾಡಿದ್ದರು. ಬಹುಕೋಟಿ ಹಗರಣವನ್ನು ವಿಚಾರಣೆ ನಡೆಸುತ್ತಿರುವ ಕೇಂದ್ರ ಜಾರಿ ನಿರ್ದೇಶನಾಲಯ ಡಿ.ಕೆ.ಸುರೇಶ್‌ರವರಿಗೆ ನೋಟಿಸ್ ನೀಡಿತ್ತು. ಕಳೆದ…

