ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಪೊಲೀಸ್ ವರೀಷ್ಟಾದಿಕಾರಿ ಕವಿತಾ ಹಾಗೂ ಜಿಲ್ಲಾದಿಕಾರಿ ಶಿಲ್ಪನಾಗ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಶ್ರೀರೂಪಾ ಅವರನ್ನು ಸರಕಾರ ನೇಮಿಸಿ ಆದೇಶ ಹೊರಡಿಸಿದೆ.
ಶ್ರೀರೂಪಾ ಅವರು ಪ್ರಸ್ತುತ ಪಶುಪಾಲನಾ ಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು. ಇವರು 2018ನೇ ಕರ್ನಾಟಕ ಬ್ಯಾಚ್‌ನ ಐ ಎ ಎಸ್ ಅಧಿಕಾರಿಯಾಗಿದ್ದಾರೆ. ಚಾಮರಾಜ ನಗರ ಜಿಲ್ಲಾಧಿಕಾರಿಯಾಗಿದ್ದ ಸಿ.ಟಿ. ಶಿಲ್ಪಾ ನಾಗ್ ಅವರನ್ನು ಬೆಂಗಳೂರಿನ ಪಶುಪಾಲನಾ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಪಂಚ ಕಲ್ಯಾಣ ಯೋಜನೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲೊಬ್ಬರಾಗಿದ್ದರು.. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಕ್ಲಬ್ ಗಳ ಬಗ್ಗೆ ದೂರು ಸಲ್ಲಿಸಲಾಗಿದ್ದರೂ ಕ್ರಮ ವಹಿಸುವ ಭರವಸೆ ನೀಡಿದ್ದರು.
ಪೊಲೀಸ್ ವರೀಷ್ಟಾದಿಕಾರಿ ಬಿಟಿ ಕವಿತಾ ಅವರ ಸ್ಥಾನಕ್ಕೆ
ನೂತನ ಪೊಲೀಸ್ ವರಿಷ್ಠಾಧಿ ಕಾರಿಯಾ ಮುತ್ತುರಾಜು ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.
ಮುತ್ತುರಾಜು ಅವರು ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್‌ಫೋರ್ಸ್ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು. ಇವರು 2014ನೇ ಕರ್ನಾಟಕ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.ಹಿಂದೆ ಇವರುಚಾಮರಾಜನಗರ ಎಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಹಾಲಿ ಚಾ.ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಯಾಗಿದ್ದ ಡಾ.ಬಿ.ಟಿ.ಕವಿತಾ ಅವರನ್ನು ಬೆಂಗಳೂರಿನ ಸಿಐಡಿ ವಿಭಾಗದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಚಾಮರಾಜನಗರ ಪೊಲಿಸ್ ಇಲಾಖೆ ವ್ಯಾಪ್ತಿಯಲ್ಲಿ ಕ್ಲಬ್ ಗಳ ಬಗ್ಗೆ ಆಗಾಗ ದೂರುಗಳ ಬಂದರೂ ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಸಾದ್ಯವಾಗದೆ ಇದ್ದರೂ ಕೆಲವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಉದಾಹರಣೆಗಳು ಇದ್ದವು. ಗ್ರಾಮಾಂತರ ಭಾಗಗಳಲ್ಲಿ ಅಕ್ರಮ ಮದ್ಯ,ಜೂಜಾಟಕ್ಕೆ ಕಡಿವಾಣ ಹಾಕಿ ಅತಿ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ.ಇಲಾಖೆಯ ಮೇಲಾದಿಕಾರಿ ಆದೇಶದಂತೆ ಎಸ್ಸಿಎಸ್ಟಿ ಸಬೆ ಅತಿ ಹೆಚ್ಚು ನಡೆಸಿದವರಲ್ಲಿ ಮೊದಲಿಗರು.ನೂತನ ಕವಾಯತು ಮೈದಾನ,ಹುತಾತ್ಮರ ಸ್ಮಾರಕ, ಸ್ವಾಗತ ಕಮಾನು ನಿರ್ಮಾಣ, ದೈನಂದಿನ ಚಾರಣ, ತಪ್ಪೆಸಗಿದ ಸಿಬ್ಬಂದಿಯ ಮೇಲೆ ಖಡಕ್ ಕ್ರಮ ಮೇಲಾದಿಕಾರಿಗಳ ಆದೇಶವಾಗಿ ಪಾಲನೆ, ಆಡಳಿತದಲ್ಲಿ ಸಾಕಷ್ಟು ಬದಲಾವಣೆ ತಂದ ಹಾಗೂ ಸಿ.ಎಮ್ ಬಂದೂಬಸ್ತ್, ಗಣಪತಿವಿಸರ್ಜನೆ,ಹನುಮ ಜಯಂತಿಗೆ ಯಾವ್ದೆ ಲೋಪವಿಲ್ಲದೆ, ಸಂಚಾರ ನಿಯಂತ್ರಣ ವ್ಯವಸ್ಥೆ ಗೆ ತಮ್ಮನ್ನ ತಾವೆ ನಿಯೋಜಿಸಿಕೊಂಡು ಮುಂಚೂಣಿಯಲ್ಲಿ ಇದ್ದು ಇಲಾಖಾ ಕಾರ್ಯವೈಖರಿಯಲ್ಲಿ ದಕ್ಷತೆ ಮೆರೆದವರಲ್ಲಿ ಪ್ರಚಾರ ಬಯಸದ,ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡಿ ತೋರಿದವರಲ್ಲಿ ಪೊಲೀಸ್ ಅದೀಕ್ಷಕರೂ ಒಬ್ಬರಾಗಿದ್ದರು.
ಪತ್ರಿಕೆಗಳಲ್ಲಿ ಇಲಾಖೆ ಹಾಗೂ ಸಿಬ್ಬಂದಿಯ ಮೇಲೆ ದಾಖಲೆ ರಹಿತ ಸುದ್ದಿ ಪ್ರಕಟಿಸಿದ ಪತ್ರಕೆ ಹಾಗೂ ಪತ್ರಕರ್ತರ ಮೇಲೂ ಪ್ರಕರಣ ದಾಖಲಿಸಿ ಸೊ.ಮಿ.ಮಾನಿಟರಿಂಗ್ ಸೆಲ್ ಕರ್ತವ್ಯವನ್ನ ಇಲಾಖೆಗೆ ತೋರಿಸಿದ್ದಾರೆ ಎನ್ನಬಹುದು. ಕೆಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೂ ದೂರು ಬಂದಲ್ಲಿ ಕ್ರಮವಹಿಸುವ ಮಟ್ಟಿಗೆ ಕಾರ್ಯ ನಿರ್ವಹಣೆ ಮಾಡಿದ್ದರು.
ವರ್ಷವಾಗುತ್ತಿದ್ದಂತೆ ಎಸ್ಪಿ, ಡೀಸಿಗಳ ವರ್ಗಾವಣೆ ಮಾಡುತ್ತಿದ್ದ ಸರ್ಕಾರ ಒಂದೂವರೆ ಎರಡು ವರ್ಷಗಳ ನಂತರ ಅದಿಕಾರಿಗಳ ವರ್ಗಾವಣೆ ತಡವಾಗಿ ಮಾಡಿ ಆದೇಶಿಸಿದೆ.

