ಮೈಸೂರು, ಡಿಸೆಂಬರ್ 26:ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಹತ್ಯೆ ಮತ್ತು ಹಿಂಸಾಚಾರವನ್ನು ಖಂಡಿಸಿ ಮೈಸೂರಿನ ಹಿಂದೂಪರ ಸಂಘಟನೆಗಳಿಂದ ಇಂದು ಪಂಜಿನ ಮೆರವಣಿಗೆ ನಡೆಯಿತು.ಮೆರವಣಿಗೆ ಪುರಭವನದಿಂದ ಪ್ರಾರಂಭವಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ದೊರಕಿತು. ಅಲ್ಲಿಂದ ಮೆಟ್ರೋಪೋಲ್ ವೃತ್ತದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಯವರೆಗೆ ಮೆರವಣಿಗೆ ಸಾಗಿತು. ಈ ವೇಳೆ ಮೈಸೂರು‑ಕೊಡಗು ಸಂಸದ ಯಧುವೀರ್ ಕೃಷ್ಣದತ್ತ ಒಡೆಯರ್ ರವರು ಭಾಗವಹಿಸಿ ಮಾತನಾಡಿದರು. ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ, ಅಲ್ಲಿ ಇರುವ ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಜಯ್, ಡಿ.ಟಿ. ಪ್ರಕಾಶ್, ಮೈ ಕಾ ಪ್ರೇಮ್ ಕುಮಾರ್, ಸಂದೇಶ್, ರಾಕೇಶ್ ಭಟ್, ಚಂದ್ರು ವಕೀಲ, ಪ್ರದೀಶ್ ಕುಮಾರ್, ಎಸ್.ಟಿ. ಮೋರ್ಚಾ ಅಧ್ಯಕ್ಷ ಎಂ. ರಾಮಕೃಷ್ಣ, ಬಿ.ಎಂ. ರಘು, ರುದ್ರಮೂರ್ತಿ, ಶಂಭು, ಎಂ. ಚಿಕ್ಕವೆಂಕಟು, ಸಚಿನ್ ಗೌಡ, ಎನ್. ಯೋಗಾನಂದ್, ಕೆ.ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಧ್ವಜಗಳು, ಬ್ಯಾನರ್ಗಳು ಮತ್ತು ಘೋಷಣೆಗಳೊಂದಿಗೆ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆಗ್ರಹ ವ್ಯಕ್ತಪಡಿಸಲಾಯಿತು.

