ಬೆಂಗಳೂರು, ಜುಲೈ 12: ರಾಜಕಾರಣದಲ್ಲಿ ನಿವೃತ್ತಿ ಅಂತಿಲ್ಲ, ಹಾಗಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2028ರಲ್ಲೂ ತನ್ನದೇ ನಾಯಕತ್ವ ಅಂತ ಹೇಳಿರಬಹುದು ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಶಾಸಕಾಂಗದ ಬೆಂಬಲದೊಂದಿಗೆ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ, 2 ವರ್ಷದಿಂದ ಅಧಿಕಾರ ನಡೆಸಿಕೊಂಡು ಹೋಗುತ್ತಿದ್ದಾರೆ, ಮುಂದೆಯೂ ನಡೆಸುತ್ತಾರೆ, ಡಿ.ಕೆ ಶಿವಕುಮಾರ್ ಅವರು ಶಾಸಕರ ಬೆಂಬಲ ಪಡೆದುಕೊಳ್ಳಲು ಅಥವಾ ಕೇಳಲು ಇದು ಸಮಯ ಅಲ್ಲ, ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಯಾಕೆ ಪದೇಪದೇ ಉದ್ಭವಿಸುತ್ತಿದೆಯೋ ಗೊತ್ತಿಲ್ಲ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಆದಾಗ್ಯೂ ಬಮೂಲ್ (ಬೆಂಗಳೂರು ಹಾಲು ಒಕ್ಕೂಟ ಮಂಡಳಿ) ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿರುವ ಡಿ.ಕೆ ಸುರೇಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಬೆಂಬಲ ಪಡೆದಿರುವ ಹಾಲಿ ಅಧ್ಯಕ್ಷ ಭೀಮಾನಾಯಕ್ ಎದುರಾಳಿ ಆಗಿದ್ದಾರೆ.

