Headlines

ರಾಜಕೀಯ ಕುತೂಹಲ ಕೆರಳಿಸಿದ ಡಿಕೆಶಿ ದೆಹಲಿ ಪ್ರವಾಸ!

ಬೆಂಗಳೂರು, ಜುಲೈ 14: ರಾಜ್ಯ ಕಾಂಗ್ರೆಸ್ ಸರ್ಕಾರದ
ಪವರ್ ಶೇರಿಂಗ್ ಫೈಟ್​ನಲ್ಲಿ ದಿನಕ್ಕೊಂದು ಟರ್ನ್. ಕ್ಷಣಕ್ಕೊಂದು ಟ್ವಿಸ್ಟ್ ಕಾಣಸಿಗ್ತಿದೆ. ಸಿಎಂ ಸಿದ್ದರಾಮಯ್ಯ ಇದೀಗ 5 ವರ್ಷದ ಜಪ ಮಾಡ್ತಿದ್ರೆ, ಡಿಸಿಎಂ-ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೌನಕ್ಕೆ ಜಾರಿದ್ರು. ಈ ಬೆನ್ನಲ್ಲೇ ಶಿರಡಿ ಸಾಯಿಬಾಬಾನ ದರ್ಶನಕ್ಕೆ ಮುಂದಾಗಿದ್ರು. ಈ ಹೊತ್ತಲ್ಲೇ ಮತ್ತೆ ಡಿಕೆಶಿ ದೆಹಲಿಗೆ ಹಾರಿದ್ದಾರೆ.

ಪತ್ನಿ ಸಮೇತ ಶಿರಡಿ ಸಾಯಿಬಾಬಾ ದರ್ಶನ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಶ್ರದ್ಧೆ ನಂಬಿಕೆ ಮತ್ತು ತಾಳ್ಮೆ ಇದ್ದರೆ ಎಲ್ಲವೂ ಸಾಧ್ಯ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೇ ಪ್ರಯತ್ನ ವಿಫಲವಾಗಬಹುದು ಪ್ರಾರ್ಥನೆ ವಿಫಲವಾಗಲ್ಲ ಅಂತಾ ಡಿಸಿಎಂ ಸಂದೇಶ ರವಾನಿಸಿದ್ದಾರೆ.

ಪ್ರಾರ್ಥನೆ ವಿಫಲವಾಗಲ್ಲ…
ಪವಿತ್ರವಾದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಬಾಬಾರವರ ದಿವ್ಯ ದರ್ಶನ ಪಡೆದಿರುವುದು ನಿಜಕ್ಕೂ ಪುಣ್ಯಕರ ಅನಿಸುತ್ತಿದೆ. ಶ್ರದ್ಧೆ, ನಂಬಿಕೆ ಮತ್ತು ತಾಳ್ಮೆಯಿಂದ ಎಲ್ಲವೂ ಸಾಧ್ಯ. ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್, ಹೇಳಿದ್ದಾರೆ.

ಪ್ರಾರ್ಥನೆ ವಿಫಲವಾಗಲ್ಲ ಅಂತಾ ದೇವರ ಮೊರೆ ಹೋದ ಬೆನ್ನಲ್ಲೇ ಹೈಕಮಾಂಡ್ ಗಂಟೆ ಬಾರಿಸಿದಂತಿದೆ. ಡಿ.ಕೆ ಶಿವಕುಮಾರ್​ ದಿಢೀರ್ ದೆಹಲಿ ದಾರಿ ಹಿಡಿದಿದ್ದಾರೆ.

ದೆಹಲಿಯಲ್ಲಿದ್ದು ಬಳಿಕ 2 ದಿನ ಸೈಲೆಂಟ್​​​ ಆಗಿದ್ದ ಡಿಕೆಶಿ ಮತ್ತು ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾಗದೇ ವಾಪಸ್ ಆಗಿದ್ದ ಸಿಎಂ, ಡಿಸಿಎಂ
ಡಿ.ಕೆ ಶಿವಕುಮಾರ್​ಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿರಡಿ ಸಾಯಿಬಾಬಾನ ದರ್ಶನ ಪಡೆದ ಬೆನ್ನಲ್ಲೇ ವರಿಷ್ಠರ ಸಂದೇಶ ಕಳುಹಿಸಿದ್ದರಿಂದ
ಪುಣೆಯಿಂದ ನೇರವಾಗಿ ದೆಹಲಿಗೆ ತೆರಳಿರುವ ಡಿ.ಕೆ ಶಿವಕುಮಾರ್​​ ಅಲ್ಲಿ ಏನು ಮಾಡಲಿದ್ದಾರೆ? ಎಂದು ರಾಜಕೀಯ ಕುತೂಹಲ ಕೆರಳಿಸಿದೆ.
ಆದರೆ ನನಗೆ ಹೈಕಮಾಂಡ್ ಯಾವುದೇ ಆಹ್ವಾನ ಕೊಟ್ಟಿಲ್ಲ ಅಂತಿರೋ ಡಿಕೆಶಿ ನಾನು ಇಂದು ಖಾಸಗಿ ಕಾರ್ಯಕ್ರಮಕ್ಕಾಗಿ ಹೋಗ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

ಒಟ್ಟಾರೆ ಡಿ.ಕೆ ಶಿವಕುಮಾರ್ ತಾಳ್ಮೆಯ ದೀಕ್ಷೆ ಪಡೆದು, ಪ್ರಾರ್ಥನೆ ಮೂಲಕ ಫಲ ಬಯಸ್ತಿರೋ ಹೊತ್ತಲ್ಲಿ ಮತ್ತೆ ಡಿ.ಕೆ ಶಿವಕುಮಾರ್​ಗೆ ದೆಹಲಿಗೆ ಪ್ರಯಾಣಿಸ್ತಿದ್ದಾರೆ. ಸಹಜವಾಗಿ ಇಂದು ಕುತೂಹಲದ ಬುಟ್ಟಿಯನ್ನ ಓಪನ್ ಮಾಡಿದೆ. ಕರ್ನಾಟಕದಲ್ಲಿ ಸಿಎಂ ಕುರ್ಚಿ ಕುರುಕ್ಷೇತ್ರದ ನಡುವೆ ಈ ಬೆಳವಣಿಗೆ ಇದೀಗ ದೊಡ್ಡ ರಾಜಕೀಯ ಮಹತ್ವವನ್ನೇ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!