Headlines

ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಕೊನೆಗೂ ರಹಸ್ಯ ಬಾಯ್ಬಿಟ್ಟ ಪೆಡ್ಲರ್!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಭಾರಿ ಪ್ರಮಾಣದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇನ್ನು ಡ್ರಗ್ಸ್ ತಯಾರಿಕಾ ಘಟಕ ಮೈಸೂರಿನಲ್ಲೇ ಇರುವುದು ಪತ್ತೆಯಾಗಿದೆ.

ಮೈಸೂರಿನಲ್ಲಿ ಸಿಕ್ಕ ಮಾದಕ ವಸ್ತುವಿಗೆ ಮಹಾರಾಷ್ಟ್ರದ ನಂಟು ಇದ್ದು, ಈ ಬಗ್ಗೆ ಮಹಾರಾಷ್ಟ್ರದಲ್ಲಿ ಸೆರೆಯಾದ ಡ್ರಗ್ ಪೆಡ್ಲರ್‌ನಿಂದ ಮಾಹಿತಿ ಬಹಿರಂಗವಾಗಿದೆ.
ಮೈಸೂರಿನಿಂದ ಡ್ರಗ್ ಸಪ್ಲೈ ಆಗುತ್ತಿರುವ ಬಗ್ಗೆ ಪೆಡ್ಲರ್ ಬಾಯ್ಬಿಟ್ಟಿದ್ದಾನೆ. ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು, ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಈ ವೇಳೆ ಪೊಲೀಸರು ಕೋಟ್ಯಾಂತರ ಬೆಲೆಯ ಎಂ.ಡಿ.ಎಂ.ಎ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಸೇರಿ ದೇಶ ವಿದೇಶಗಳಿಗೆ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಎಂ.ಡಿ.ಎಂ.ಎ ಬೆಲೆ 2 ಕೋಟಿ ರೂ. ಗ್ಯಾರೇಜ್ ಹೆಸರಿನಲ್ಲಿ ಈ ದಂಧೆ ನಡೆಯುತ್ತಿತ್ತು.

ಡ್ರಗ್ಸ್ ತಯಾರಿಕಾ ಕೇಂದ್ರವಾದ ಸಾಂಸ್ಕೃತಿಕ ನಗರಿ ಮೈಸೂರು!

ಡ್ರಗ್ಸ್ ಮಾಫಿಯಾದ ಕೇಂದ್ರ ಸ್ಥಾನ ಆಗ್ತಿದ್ದೆಯಾ ಮೈಸೂರು? ಎಂಬ ಪ್ರಶ್ನೆಯೊಂದು ಈಗ ಎದ್ದಿದೆ. ಕಾರಣ ಮೈಸೂರಲ್ಲಿ ಶನಿವಾರ (ಜುಲೈ 26) ರಾತ್ರಿ ಭಾರೀ ಪ್ರಮಾಣದ ಎಂಡಿಎಂಎ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿಯಲ್ಲಿ ಮಾದಕ ಪದಾರ್ಥಗಳ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ ಭಾರೀ ಪ್ರಮಾಣದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. 50 ಕೆಜಿಗೂ ಹೆಚ್ಚು ಪ್ರಮಾಣದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಇದು ಈಗ ಮೈಸೂರನ್ನೇ ಬೆಚ್ಚಿ ಬೀಳಿಸಿದ

ಈ ದಾಳಿಯ ಮೂಲಕ ಮೈಸೂರು ಸೀರಿಯಸ್ ಟ್ರಬಲ್‌ನಲ್ಲಿ ಇದೆಯಾ? ಅನ್ನಿಸಿದೆ. ಮಹಾರಾಷ್ಟ್ರದಲ್ಲಿ ಸೆರೆಯಾದ ಡ್ರಗ್ ಪೆಡ್ಲರ್ ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು ಮೈಸೂರು ಪೊಲೀಸರ ಸೆರೆಯಾದ ಡ್ರಗ್ ಪೆಡ್ಲರ್ ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು ಮೈಸೂರು ಪೊಲೀಸರ ಸಹಕಾರದಿಂದ ಈ ಕಾರ್ಯಾಚರಣೆ ಮಾಡಿದ್ದಾರೆ. ಮೈಸೂರಿನಲ್ಲಿ ಡ್ರಗ್ಸ್ ತಯಾರಿಸಿ ಮಹಾರಾಷ್ಟ್ರ ಸೇರಿ ದೇಶದ ವಿವಿಧ ಭಾಗಗಳು, ವಿದೇಶಗಳಿಗೆ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.


15 ದಿನಗಳ ಹಿಂದಷ್ಟೇ ಡ್ರಗ್ಸ್ ತಯಾರಿಕಾ ಘಟಕ ಮೈಸೂರಲ್ಲಿ ಶುರುವಾಗಿದೆ. ಮುಂದೆ ಕಾರ್ ಗ್ಯಾರೇಜ್ ಮಾಡಿಕೊಂಡು ಅದರ ಹಿಂದೆ ಡ್ರಗ್ಸ್ ತಯಾರಿಕಾ ಘಟಕ ನಿರ್ಮಿಸಿ ಕೊಳ್ಳಲಾಗಿತ್ತು. ಮೂರು ದೊಡ್ಡ ಕಂಟೇನರ್ ಇಟ್ಟು ದ್ರವದ ಆವಿಯಿಂದ ಡ್ರಗ್ ತಯಾರಿಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. 15 ದಿನದಲ್ಲಿ 13 ಕೆಜಿ ಡ್ರಗ್ಸ್ ತಯಾರಿಸಲಾಗಿತ್ತು. 50 ಕೆಜಿ ಡ್ರಗ್ಸ್ ತಯಾರಿಕೆ ಪ್ರಕ್ರಿಯ ಅಂತಿಮ ಹಂತದಲ್ಲಿತ್ತು. ಇದನ್ನು ಈಗ ಪೊಲೀಸರು ಸ್ಹೀಜ್ ಮಾಡಿದ್ದಾರೆ.

ಒಟ್ಟಾರೆ ಸಾಂಸ್ಕೃತಿಕ ನಗರಿ ಎಂದು ಖ್ಯಾತಿ ಪಡೆದಿದ್ದ ಮೈಸೂರು ಮಹಾನಗರ ಇದೀಗ ಡ್ರಗ್ಸ್ ತಯಾರಿಕಾ ಕೇಂದ್ರ ಮತ್ತು ಡ್ರಗ್ಸ್ ಸರಬರಾಜು ಮಾಡುವ ಕೇಂದ್ರವಾಗಿ ಭಾರತದಲ್ಲಿ ಕುಖ್ಯಾತಿ ಪಡೆದಿದೆ.

Leave a Reply

Your email address will not be published. Required fields are marked *

error: Content is protected !!