ಮಂಡ್ಯ.ಸೆ.02:- ಕರ್ನಾಟಕ ಸರ್ಕಾರದ ಕೆಫೆ ಸಂಜೀವಿನಿ ಯೋಜನೆಯಡಿ ಪಾಂಡವಪುರ ತಾಲೂಕು ಪಂಚಾಯತ್ ಕಛೇರಿ ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಕ್ಕ ಕೆಫೆ ಗೆ ಸಂಬAಧಿಸಿದAತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ. ಆರ್. ಅವರು ಸ್ಥಳ ಪರಿಶೀಲನೆ ನಡೆಸಿದರು.
ಮಂಗಳವಾರ ಪಾಂಡವಪುರ ತಾಲೂಕು ಪಂಚಾಯತ್ ಕಚೇರಿ ಗೆ ಭೇಟಿ ನೀಡಿದ ಅವರು ಮಹಿಳಾ ಸ್ವ ಸಹಾಯ ಸಂಘಗಳ ಆರ್ಥಿಕ ಸ್ವಾವಲಂಬನೆಗಾಗಿ ಅಕ್ಕ ಕೆಫೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪಾಂಡವಪುರ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಲಭ್ಯವಿರುವ ಖಾಲಿ ಜಾಗದಲ್ಲಿ ಅಕ್ಕ ಕೆಫೆ ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 3 ಅಕ್ಕ ಕೆಫೆ ಸ್ಥಾಪನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಹೆಚ್ಚುವರಿಯಾಗಿ 5 ಅಕ್ಕ ಕೆಫೆ ಗಳನ್ನು ಅನುಮೋದನೆ ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಶುಚಿ ರುಚಿಯಾದ ಹಾಗೂ ಉತ್ತಮ ಗುಣಮಟ್ಟದ ಆಹಾರ ಒದಗಿಸುವ ನಿಟ್ಟಿನಲ್ಲಿ ಅಕ್ಕ ಕೆಫೆ ಗಳು ಕಾರ್ಯನಿರ್ವಹಿಸಲಿವೆ ಎಂದು ಜಿ. ಪಂ. ಸಿಇಓ ನಂದಿನಿ ಕೆ ಆರ್ ಅವರು ತಿಳಿಸಿದರು.
ಅಕ್ಕ ಕೆಫೆ ಗೆ ಸ್ಥಳ ಪರಿಶೀಲನೆ ಸಂದರ್ಭದಲ್ಲಿ, ಜಿ. ಪಂ. ಉಪಕಾರ್ಯದರ್ಶಿ ಲಕ್ಷ್ಮಿ, ಕೆ.ಆರ್.ಐ.ಡಿ.ಎಲ್ ಕಾರ್ಯಪಾಲಕ ಅಭಿಯಂತರ ಸೋಮಶೇಖರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಸೇರಿದಂತೆ ಇತರರು ಹಾಜರಿದ್ದರು.

