Headlines

ಕೊಟ್ಟ ಮಾತು ಉಳಿಸಿಕೊಂಡ ಎಚ್‌ಡಿಕೆ: ಕೆಟಿಎಸ್‌ ಶ್ಲಾಘನೆ

ಮಂಡ್ಯ: ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ನಗರದ ಮೈಷುಗರ್‌ ಶಾಲೆ ಅಭಿವೃದ್ಧಿ ಹಾಗೂ ಇಲ್ಲಿನ ಶಿಕ್ಷಕರಿಗೆ ವೇತನ ನೀಡುವ ಸಂಬಂಧ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಶ್ಲಾಘಿಸಿದರು.

ನಗರದ ಮೈಷುಗರ್‌ ಶಾಲೆಯ ಶಿಕ್ಷಕರಿಗೆ ವೇತನದ ಸಂಬಳದ ಚೆಕ್‌ ವಿತರಣೆ ಮಾಡಿ ಅವರು ಮಾತನಾಡಿದ ಅವರು, ಮೈಷುಗರ್ ಪ್ರೌಢ ಶಾಲೆ ಶಿಕ್ಷಕರಿಗೆ ಹಾಗೂ ಐಟಿಐ ಶಿಕ್ಷಕರಿಗೆ ಹಾಗೂ ಶಿಕ್ಷಕರೇತರಿಗೆ ವೇತನವನ್ನು ಬಿಡುಗಡೆ ಮಾಡಿದ್ದಾರೆ, ಈ ಮೂಲಕ ಮೈಷುಗರ್ ಶಾಲೆಯು ಯಶಸ್ವಿಯಾಗಿ ಮುನ್ನಡೆಯಲು ಕುಮಾರಸ್ವಾಮಿ ಅವರು ಕಾರಣ ಕರ್ತರಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಶಾಲೆ ಮತ್ತು ಐಟಿಐ ಕಾಲೇಜಿನ ಅಭಿವೃದ್ಧಿಗೆ ಒಪ್ಪಿಗೆ ನೀಡಿದ್ದಾರೆ, ಈಗಾಗಲೇ ಯೋಜನೆಯನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಿಎಸ್‌ಆರ್‌ ಫಂಡ್‌ಗೆ ಸಲ್ಲಿಸಿದ್ದಾರೆ. ಬಹುಶಃ ಮಾರ್ಚ್‌ನಲ್ಲಿ ಹಣ ಬಿಡುಗಡೆ ಆಗಲಿದೆ. ಶಾಲೆ ಅಭಿವೃದ್ಧಿಗೆ ತಕ್ಕಂತಹ ವಾತಾವರಣ ಸೃಷ್ಟಿಸಲು ಮುಂದಾಗಿದ್ದಾರೆ ಎಂದರು.

ಇವರ ಅಭಿವೃದ್ಧ ಸಹಿಸದ ಕೆಲವರು ಕಪೋಕಲ್ಪಿತದಿಂದ ಮಾತನಾಡುತ್ತಿದ್ದಾರೆ, ಮೈಷುಗರ್‌ ಕಾರ್ಖಾನೆಯ ಅಭಿವೃದ್ಧಿಗೂ ಮುಂದಾಗಿದ್ದಾರೆ, ಮಾತನಾಡುವವರು ತಿಳಿದುಕೊಳ್ಳಬೇಕು. ಹೊಸ ಕಾರ್ಖಾನೆಯನ್ನು ಮಾಡಲಾಗುವುದೆಂಬುದನ್ನು ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ನವರು ಹೇಳಿದ್ದರು, ಆದರೆ ಅದನ್ನು ಮರೆತು ಕುಮಾರಸ್ವಾಮಿ ಅವರ ಮೇಲೆ ವ್ಯಥಾ ಆರೋಪ ಮಾಡುವುದನ್ನು ನಿಲ್ಲಿಸಬೇಕು. ರೈತರಿಂದ ವಸೂಲಿ ಮಾಡಿರುವ ₹4 ಹಣ ಏನಾಗಿದೆ. ಅದನ್ನ ಶಿಕ್ಷಕರಿಗೆ ಸಂಬಳ ಕೊಡುವ ಜವಾಬ್ದಾರಿ ಕಾರ್ಖಾನೆಯವರಿಗೆ ಹಾಗೂ ಟ್ರಸ್ಟ್‌ನ ಮೇಲಿದೆ ಎಂದು ತಿಳಿಸಿದರು.

ನಿಮ್ಮಲ್ಲಿರುವ ಹಣವನ್ನು ಟ್ರಸ್ಟ್‌ಗೆ ವರ್ಗಾವಣೆ ಮಾಡಬೇಕು. ಕಾರ್ಖಾನೆಯವರು ಆ ರೈತರ ಹಣವನ್ನು ಕಿತ್ತುಕೊಂಡು ಆರೋಪ ಮಾಡುತ್ತಾ ಕಾಲ ಕಳೆಯುವುದನ್ನು ನಿಲ್ಲಿಸಬೇಕು. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿಂತಿರುವ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಸಲ್ಲದ ಹೇಳಿಕೆಗಳನ್ನು ಹೇಳುವ ಬದಲಿ ಅಭಿವೃದ್ಧಿಕಡೆ ಗಮನ ಹರಿಸಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮೈಷುಗರ್ ಶಾಲೆ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಟಿ.ಜಯರಾಮ್‌, ಉಪಾಧ್ಯಕ್ಷ ಸತ್ಯನಾರಾಯಣ್‌ದೇವ್‌, ಮುಖ್ಯಶಿಕ್ಷಕಿ ಟಿ.ಎಚ್‌.ವಿಶಾಲಾಕ್ಷಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲೇಜು ಪ್ರಾಂಶುಪಾಲ ಶಂಕರ್‌ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!