ಬೆಂಗಳೂರು, ಆಗಸ್ಟ್ 18: ಧರ್ಮಸ್ಥಳ ಸುತ್ತಮುತ್ತ ನೂರಾರು ಜನರನ್ನು ಕೊಲೆ ಮಾಡಿ ಶವಗಳನ್ನು ಕಾಣದ ರೀತಿಯಲ್ಲಿ ಹೂತಿಡಲಾಗಿದೆ ಎಂದು ಆರೋಪಿಸಿ ಎಸ್ಐಟಿ ತನಿಖಾ ತಂಡಕ್ಕೆ ತಲೆನೋವಾಗಿರುವ ಅನಾಮಿಕ ದೂರುದಾರನ ಹೆಸರನ್ನು ಇಂದು ಖುದ್ದು ಗೃಹ ಸಚಿವ ಪರಮೇಶ್ವರ್ ಸದನದ ಮುಂದೆ ಬಹಿರಂಗಪಡಿಸಿದ್ದಾರೆ.
ಸದನದ ಮುಂದೆ ಗೃಹ ಸಚಿವರು ಹೇಳಿದ್ದಿಷ್ಟು:
“ಹಿಂದೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಓರ್ವ ದೂರು ಕೊಟ್ಟಿದ್ದನು. ಈ ವ್ಯಕ್ತಿ ತನ್ನ ದೂರಿನಲ್ಲಿ ತನಗೆ ನಿರಂತರವಾಗಿ ಜೀವ ಬೆದರಿಕೆಯೊಡ್ಡಿ ಶವ ಹೂತಿಟ್ಟ ಬಗ್ಗೆ ತಿಳಿಸಿದ್ದ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆ ಅಪರಿಚಿತ ದೂರು ಕೊಟ್ಟಿದ್ದ. ತನ್ನ ದೂರಿನಲ್ಲಿ ಅಪರಿಚಿತ ತನಗೆ ಮತ್ತು ತನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿದ್ದ. ಇದೀಗ ಎಸ್ಐಟಿ ಅಧಿಕಾರಿಗಳು ಈ ಅಪರಿಚಿತ ದೂರುದಾರನ ಹೆಸರನ್ನು ವಿ(V) ಎಂದು ನಮೂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಆಸುಪಾಸಿನಲ್ಲಿ ಕೊಲೆ ಮಾಡಿ ಶವಗಳನ್ನು ಹೂತಿಟ್ಟ ಪ್ರಕರಣದ ದೂರುದಾರನ ಹೆಸರು ವಿ(V) ಎಂದು ಗೃಹ ಸಚಿವರು ಸದನಕ್ಕೆ ತಿಳಿಸಿದರು.

