ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಮನೆಯಲ್ಲಿದ್ದ ಪೀಠೋಪಕರಣಗಳು ಸುಟ್ಟು ಬಸ್ಮವಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಹುಲಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.
ನಿನ್ನೆ ಬೆಳಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಹುಲಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ MNPM ಕಾಲೋನಿಯ ಶಿವಣ್ಣಚಾರ್ ರವರ ಮನೆಯಲ್ಲಿ ಸೌದೆ ಒಲೆಯಲ್ಲಿ ನೀರು ಕಾಯಿಸುತ್ತಿರುವಾಗ ಆಕಸ್ಮಿಕವಾಗಿ ಬೆಂಕಿಯು ಮನೆಯನ್ನು ಆವರಿಸಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಪೀಠೋಪಕರಣಗಳು ಸುಟ್ಟು ಬಸ್ಮಮಾಡಿದೆ ಹಾಗೂ ಮನೆಯ ಮೇಲ್ಚಾವಣಿಯು ಸಂಪೂರ್ಣ ಹಾನಿಯಾಗಿದೆ. ಬೆಂಕಿ ಕಂಡ ಸ್ಥಳೀಯರು ಬೆಂಕಿ ಆರಿಸಲು ಅರಸಹಸ ಪಟ್ಟಿದ್ದಾರೆ, ಅಂತಿಮವಾಗಿ ಅಗ್ನಿಶಾಮಕ ವಾಹನದೊಂದಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತಾಗಿ ಗ್ರಾಮ ಪಂಚಾಯತಿ ಸದಸ್ಯರಾದ ರಾಮುರವರು ಸ್ಥಳೀಯ ಶಾಸಕರಾದ ಬಾಬಣ್ಣ ನವರಿಗೆ ಫೋನ್ ಮೂಲಕ ಘಟನೆ ಬಗ್ಗೆ ಸಂಪೂರ್ಣವಾಗಿ ವಿವರಿಸಿದಾಗ, ಶಾಸಕರು ಈ ಕೂಡಲೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸುವುದಾಗಿ ಹಾಗೂ ಸರ್ಕಾರದಿಂದ ಶೀಘ್ರವಾಗಿ ಪರಿಹಾರ ಕೊಡಿಸುವುದಾಗಿ ಹಾಗೂ ಕಾರ್ಯನಿಮಿತ್ತ ವಿದೇಶ ಪ್ರವಾಸದಲ್ಲಿರುವುದರಿಂದ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.
ಅದರಂತೆ ಹೋಬಳಿ ರಾಜಸ್ವ ನಿರೀಕ್ಷಕರಾದ ಪ್ರಸನ್ನ ರವರು, KRS ಪೋಲಿಸ್ ಠಾಣೆಯ ಪಿಎಸ್ಐ ರಮೇಶ್ ರವರು ಸ್ಥಳಕ್ಕೆ ಆಗಮಿಸಿ ಸಂಪೂರ್ಣವಾಗಿ ಪರಿಶೀಲಿಸಿ ಪ್ರಕರಣವನ್ನು ದಾಖಲುಮಾಡಿಕೊಂಡರು.

ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಂಜುನಾಥ್(ಜನನಿ) ಗ್ರಾಮಪಂಚಾಯತಿ ಸದಸ್ಯರಾದ ಸುಶೀಲ. ಮುಖಂಡರಾದ ಕುಂಟೆಗೌಡ. ಶಿವಲಿಂಗ ಬಾಲ್ರಾಜ್ ಮಂಜುನಾಥ್. ಅರುಣ್. ರೇಣುಕಾ ಸುರೇಶ್.ರಂಗಸ್ವಾಮಿ ರವಿ.ಹಾಜರಿದ್ದರು. ಈ ಸಮಯದಲ್ಲಿ ಬೆಂಕಿ ನಂದಿಸಲು ಸಹಾಯ ಮಾಡಿದ ಎಲ್ಲರಿಗೂ ಹುಲಿಕೆರೆ ಗ್ರಾಮ ಪಂಚಾಯತಿ ಸದಸ್ಯರಾದ ರಾಮು ರವರು ಧನ್ಯವಾದ ತಿಳಿಸಿದರು.

