Headlines

ಮದ್ದೂರು: ಅಕ್ರಮ ಜೂಜು ಅಡ್ಡೆ ಮೇಲೆ ದಾಳಿ, 50 ಆರೋಪಿಗಳ ವಿರುದ್ಧ ಪ್ರಕರಣ ದಾಖಲು.

ದಿನಾಂಕ 10/03/2026 ರಂದು ಮಂಡ್ಯ ಜಿಲ್ಲೆ ಮದ್ದೂರು ಪೊಲೀಸ್ ಠಾಣಾ ಸರಹದ್ದಿನ ಮದ್ದೂರು ತಾಲ್ಲೂಕು, ಆತಗೂರು ಹೋಬಳಿ, ನಿಡಘಟ್ಟ ಗ್ರಾಮದ ತಿನ್ನೂರು ರಸ್ತೆಯಲ್ಲಿರುವ ಶ್ರೀ ವರದರಾಜಸ್ವಾಮಿ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಕಟ್ಟಡದಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಗುಂಪುಗೂಡಿಕೊಂಡು ಅಂದರ್-ಬಾಹರ್ ಜೂಜಾಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.

​ಈ ಮಾಹಿತಿಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಡಾ. ಶೋಭಾರಾಣಿ ವಿಜೆ, ಐಪಿಎಸ್ ರವರ ಆದೇಶದ ಮೇರೆಗೆ, ಘನ ನ್ಯಾಯಾಲಯದ ಅನುಮತಿ ಪಡೆದು ಕಾರ್ಯಾಚರಣೆ ರೂಪಿಸಲಾಯಿತು. ಮಳವಳ್ಳಿ ಡಿವೈ.ಎಸ್.ಪಿ. ಶ್ರೀ ಯಶವಂತಕುಮಾರ್ ಎಸ್‌.ಬಿ ರವರ ಮಾರ್ಗದರ್ಶನದಲ್ಲಿ ಮದ್ದೂರು ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ನವೀನ ಹೆಚ್.ಎಸ್, ಮಂಡ್ಯ ಆರ್.ಪಿ.ಐ ಚನ್ನನಾಯಕ್, ಪಿ.ಎಸ್.ಐ ಮಂಜುನಾಥ ಹಾಗೂ ಸಿಬ್ಬಂದಿಯವರು ಸದರಿ ಕ್ಲಬ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದರು.

​ದಾಳಿಯ ಸಮಯದಲ್ಲಿ ಜೂಜಾಟಕ್ಕೆ ಪಣಕ್ಕಿಟ್ಟಿದ್ದ ಒಟ್ಟು 97,910 ರೂ. ನಗದು ಹಣ ಹಾಗೂ ಆಟಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳನ್ನು ಪೊಲೀಸರು
ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಮೊ.ಸಂ. 101/2026, ಕಲಂ: 79, 80 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಒಟ್ಟು 50 ಜನ ಆರೋಪಿತರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

​ಈ ಯಶಸ್ವಿ ದಾಳಿಯಲ್ಲಿ ಭಾಗವಹಿಸಿದ್ದ ಪಿ.ಎಸ್.ಐ ಮಂಜುನಾಥ, ಎಆರ್‌ಎಸ್‌ಐ ಪುರುಷೋತ್ತಮ, ಸಿಹೆಚ್ ಸಿಯವರಾದ ಸಿದ್ದೇಗೌಡ, ಮಹೇಶ್‌, ಶರತ್, ಎಹೆಚ್ಸಿಯವರಾದ ರಾಜಗೋಪಾಲ್, ಚಂದನ್‌ ಕುಮಾರ್, ಸಿದ್ದಶೆಟ್ಟಿ, ಸಿಪಿಸಿಯವರಾದ ಪ್ರಸನ್ನ ಹಾಗೂ ಎಪಿಸಿಯವರಾದ ಚಂದ್ರಶೇಖರ್, ನಾಗರಾಜಗೌಡ‌, ವಿಜಯ್‌ ಕುಮಾರ, ಸುನೀಲ್, ಮನೋಜ್, ಆನಂದ ರವರ ತಂಡವನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!