ಅಡುಗೆ ರಾಣಿ ಟೊಮ್ಯಾಟೊ ಬೆಲೆ ದಿಢೀರ್ ಕುಸಿತ: ರೈತರಿಗೆ ಸಂಕಷ್ಟ
ಕೋಲಾರ, ಆ.31: ಒಂದೆಡೆ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮೆಟೋ ರಾಶಿರಾಶಿ ಬಿದ್ದಿದ್ದರೆ, ಮತ್ತೊಂದೆಡೆ ಅತಿ ಕಡಿಮೆ ಬೆಲೆಗೆ (15 ಕೆಜಿ 150 ರಿಂದ 200 ರೂ.) ಹರಾಜಾಗುತ್ತಿದೆ. ಇನ್ನೊಂದೆಡೆ, ಮಳೆಯಿಂದ ಹಾಳಾಗಿರುವ ಟೊಮೆಟೋ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲೀಗ ಈ ದೃಶ್ಯ ಸಾಮಾನ್ಯವಾಗಿದೆ. ಏಷ್ಯಾದಲ್ಲೇ 2ನೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಹತ್ತು ಹದಿನೈದು ದಿನಗಳ ಹಿಂದೆ ಬಾಕ್ಸ್ ಟೊಮೆಟೋ ದರ ತಲಾ 15 ಕೆಜಿಗೆ 700ರಿಂದ 800…

