Headlines

ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು!

ಬೆಂಗಳೂರು, ಅಕ್ಟೋಬರ್ 9: ರಾಜ್ಯಸರ್ಕಾರ ತಮ್ಮ ಬೇಡಿಕೆಗಳನ್ನು ನಿಗದಿತ ಸಮಯದೊಳಗೆ ಸಮಯದೊಳಗೆ ತಮ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಇದೇ ತಿಂಗಳ 15ರಿಂದ 5 ದಿನಗಳ ಕಾಲ ರಾಜ್ಯಾದ್ಯಂತ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದ್ದು, 2020 ಜನವರಿ 1ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ ನಂತರದ 38 ತಿಂಗಳ ಬಾಕಿ ಹಣ ಪಾವತಿ, 38 ತಿಂಗಳ ಬಾಕಿ…

Read More

ಸೌಜನ್ಯ ಹತ್ಯೆಗೀಡಾಗಿ 13 ವರ್ಷ; ಮಂಡ್ಯದಲ್ಲಿ ಜಾಗೃತ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ವಿನೂತನ ಪ್ರತಿಭಟನೆ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರವಾಗಿ ಕೊಲೆಯಾಗಿ 13 ವರ್ಷ ಗತಿಸಿದ ಸಂದರ್ಭದಲ್ಲಿ  ಜಾಗೃತ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳು ಮಂಡ್ಯನಗರದಲ್ಲಿ ಗುರುವಾರ ಸಂಜೆ ಮೆಣದಬತ್ತಿಗಳನ್ನು ಬೆಳಗಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದವು. ಮಂಡ್ಯನಗರ ಸಂಜಯ ವೃತ್ತದಲ್ಲಿ ಜಾಗೃತ ಕರ್ನಾಟಕ ಸಂಘಟನೆಯ ಮುಖಂಡರು ಹಾಗೂ ವಿವಿಧ ಜನಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಜನಾಗ್ರಹದಲ್ಲೇನಿದೆ ?  1. ಧರ್ಮಸ್ಥಳದ ಫಾಸಲೆಯಲ್ಲಿ ನಡೆದಿರುವ 400ಕ್ಕೂ ಹೆಚ್ಚು ಅಸಹಜ ಸಾವುಗಳ ಬಗ್ಗೆ ಕೂಲಂಕುಶವಾದ, ಗಂಭೀರವಾದ…

Read More

”ಜಲ ಸಂಚಯ ಜನ ಭಾಗಿದಾರಿ” ಅಭಿಯಾನ ಮಂಡ್ಯ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

ಮಂಡ್ಯ.ಅ.4:- ಜಲ ಶಕ್ತಿ ಅಭಿಯಾನದ ಅಂಗವಾಗಿ “ಜಲ ಸಂಚಯ ಜನ ಭಾಗಿದಾರಿ  (JSJB)”  ಅಭಿಯಾನದಡಿ ಮಂಡ್ಯ ಜಿಲ್ಲೆಯು ಜಲ ಸಂರಕ್ಷಣೆ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಟಾನಗೊಳಿಸಿದ್ದಕ್ಕಾಗಿ ಮಂಡ್ಯ ಜಿಲ್ಲೆಗೆ ರಾಷ್ರ‍್ಟೀಯ ಪ್ರಶಸ್ತಿ ದೊರೆತಿದೆ. ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಜಲಶಕ್ತಿ ಅಭಿಯಾನದ ಚಟುವಟಿಕೆಗಳನ್ನು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿ ಅನುಷ್ಟಾನಗೊಳಿಸಿದ್ದಕ್ಕಾಗಿ ಮಂಡ್ಯ ಜಿಲ್ಲೆಗೆ ಪ್ರಶಸ್ತಿಯ ಜೊತೆಗೆ 25 ಲಕ್ಷ ರೂ ನಗದು ಬಹುಮಾನವನ್ನು ನೀಡಲಾಗುತ್ತಿದೆ. ಮೈಸೂರು ವಿಭಾಗದ…

Read More

ಕರೂರು ಕಾಲ್ತುಳಿತ ಕೇಸ್: ವಿಜಯ್ ವಿರುದ್ಧ ಕಿಡಿ ಕಾರಿ ಎಸ್ಐಟಿ ತನಿಖೆಗೆ ಆದೇಶಿಸಿದ ಹೈಕೋರ್ಟ್

ಚೆನೈ, ಅಕ್ಟೋಬರ್ 3: ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕರ ವಿರುದ್ಧ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಲ್ತುಳಿತದಿಂದ ಜನರು ಸಾವನ್ನಪ್ಪಿದರೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಆ ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಆ ಘಟನೆಯ ಬಗ್ಗೆ ಟಿವಿಕೆ ಪಕ್ಷವು ಸ್ವಲ್ಪವೂ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ದುರ್ಘಟನೆಯ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ಆಸ್ರಾ ಗರ್ಗ್ ನೇತೃತ್ವದ…

Read More

ಜಾತಿ ಗಣತಿ ಸಮೀಕ್ಷೆ ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ: ಸಿಎಂ ಎಚ್ಚರಿಕೆ

ಬೆಂಗಳೂರು, ಸೆ.26: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸದೇ ಕರ್ತವ್ಯ ಲೋಪ ಎಸಗುವವರು ಹಾಗೂ ದತ್ತಾಂಶ ಸಂಗ್ರಹದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಹಿರಿಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯಲ್ಲಿ ಪೂರ್ಣ ಪ್ರಮಾಣದ ಮಾಹಿತಿ ಕಲೆ ಹಾಕಿರಲಿಲ್ಲ. ಆಯೋಗ…

Read More

ರಷ್ಯಾದ ಜೊತೆಗೆ ಯುದ್ಧ ಮುಗಿದ ಮೇಲೆ ರಾಜೀನಾಮೆ ನೀಡುತ್ತೇನೆ: ಉಕ್ರೇನ್ ಅಧ್ಯಕ್ಷ ಘೋಷಣೆ

ಕೈವ್, ಸೆ.25:‌ ರಷ್ಯಾದೊಂದಿಗಿನ ಯುದ್ಧ ಮುಗಿದ ನಂತರ ತಾನು ಅಧಿಕಾರ ತ್ಯಜಿಸಲು ಸಿದ್ಧನಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಈ ಬಗ್ಗೆ ಖಾಸಗಿ ವೆಬ್‌ಸೈಟ್‌ ಜೊತೆ ಮಾತನಾಡಿದ ಝೆಲೆನ್ಸ್ಕಿ, “ಯುದ್ಧವನ್ನು ಮುಗಿಸುವುದು ಮಾತ್ರ ನನ್ನ ಗುರಿ. ಯುದ್ಧ ಮುಗಿದು ನಮ್ಮ ದೇಶದಲ್ಲಿ ಶಾಂತಿ ನೆಲೆಸಿದ ನಂತರ ಅಧಿಕಾರ ನಡೆಸಬೇಕೆಂಬ ಆಸೆ ನನಗಿಲ್ಲ. ಮುಂದಿನ ಅವಧಿಗೆ ನಾನು ಸ್ಪರ್ಧಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶಾಂತಿಕಾಲದಲ್ಲಿ ಉಕ್ರೇನ್ ಅನ್ನು ಮುನ್ನಡೆಸುವ ಉದ್ದೇಶವಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದು, ಕದನ…

Read More

ಕೊನೆಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ರವಾನಿಸಿದ ಕೈ ಹೈಕಮಾಂಡ್!

ಬೆಂಗಳೂರು, ಸೆ.24: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿಗಮ-ಮಂಡಳಿಗೆ ಕೊನೆಗೂ ನೇಮಕವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ‌.ಕೆ ಶಿವಕುಮಾರ್ ಅವರು ಸಿಡಬ್ಲ್ಯೂಸಿ ಸಭೆಗೆಂದು ಬಿಹಾರ ರಾಜ್ಯಕ್ಕೆ ತೆರಳಿದ ಸಂದರ್ಭದಲ್ಲೇ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದೆ. 39 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಿಗೆ ಕಾಂಗ್ರೆಸ್ ಹೈಕಮಾಂಡ್‌ ಇಂದು ಅಂತಿಮ ಮುದ್ರೆ ಹಾಕಿ ಇಂದು (ಸೆಪ್ಟೆಂಬರ್ 24) ಪಟ್ಟಿಯನ್ನು ರಾಜ್ಯಕ್ಕೆ ರವಾನೆ ಮಾಡಿದೆ. ಇನ್ನು ಬಿಜೆಪಿ ‌ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ…

Read More

200 ರೂ. ಸಿನಿಮಾ ಟಿಕೆಟ್ ದರ ಆದೇಶಕ್ಕೆ ತಡೆಯಾಜ್ಞೆ ಬೆನ್ನಲ್ಲೇ 700 ರೂ.ಗೆ ಏರಿದ ಟಿಕೆಟ್ ದರ!

ಬೆಂಗಳೂರು, ಸೆ.24: ರಾಜ್ಯಸರ್ಕಾರ ಸಿನಿಮಾ ಥಿಯೇಟರ್ ಗಳಿಗೆ ನಿಗದಿಪಡಿಸಿದ್ದ 200 ರೂಪಾಯಿ ಟಿಕೆಟ್ ದರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೇರಿದೆ. ನಿನ್ನೆಯಷ್ಟೇ ಹೈಕೋರ್ಟ್ ನ ಜಸ್ಟೀಸ್ ರವಿ ಹೊಸಮನಿ ಅವರ ಪೀಠವು 200 ರೂಪಾಯಿ ಟಿಕೆಟ್ ದರ ಜಾರಿಗೆ ತಡೆಯಾಜ್ಞೆ ನೀಡಿತ್ತು. ಇದಾದ ಬಳಿಕ ಇಂದು ರಾಜ್ಯದ ಸಿನಿಮಾ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರ ಗಗನಕ್ಕೇರಿದೆ.ಬೆಂಗಳೂರಲ್ಲಿ ತೆಲುಗು ಚಿತ್ರದ ಟಿಕೆಟ್ ಬೆಲೆ 700 ರೂಪಾಯಿಗೆ ಏರಿಕೆಯಾಗಿದೆ. ಸಿಂಗಲ್…

Read More

ಪದ್ಮಭೂಷಣ ಹಿರಿಯ ಸಾಹಿತಿ ಎಸ್.ಎಸ್ ಭೈರಪ್ಪ ಅಸ್ತಂಗತ

ಬೆಂಗಳೂರು, ಸೆ.24: ಪದ್ಮಭೂಷಣ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿನಗರದ ಆಸ್ಪತ್ರೆಯಲ್ಲಿ ಇಂದು(ಸೆಪ್ಟೆಂಬರ್ 24) ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆ ಬಳಲುತ್ತಿದ್ದ ಭೈರಪ್ಪ ಅವರಿಗೆ ಮರವಿನ ಕಾಯಿಲೆ ಸಹ ಇತ್ತು. ಹೀಗಾಗಿ ಅವರು 3 ತಿಂಗಳಿನಿಂದ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದರು. 94 ವರ್ಷದ ಹಿರಿಯ ಸಾಹಿತಿ ಎಸ್​.ಎಲ್​ ಭೈರಪ್ಪ ಅವರು ಒಬ್ಬ ಪ್ರಸಿದ್ಧ ಕನ್ನಡ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಲೇಖಕರಾಗಿದ್ದು, 2023ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು, ಭೈರಪ್ಪ ಅವರು ಪರ್ವ, ಆವರಣ, ಗೃಹಭಂಗ ಸೇರಿದಂತೆ…

Read More

ಸೌಜನ್ಯ ಕೇಸ್: ನಾನೇ ಸಾಕ್ಷಿ ಎಂದಿದ್ದ ಮಹಿಳೆಯ ಅಸಲಿ ವಿಷಯ ಬಹಿರಂಗ!

ಮಂಡ್ಯ, ಸೆ.24: ಸೌಜನ್ಯ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್​ ಸಿಕ್ಕಿದೆ. ಸೌಜನ್ಯ ಅತ್ಯಾಚಾರ ಕಣ್ಣಾರೆ ಕಂಡಿದ್ದೆ ಎಂದು ದೂರು ಕೊಟ್ಟಿದ್ದ ಮಂಡ್ಯ (Mandya) ಮೂಲದ ಮಹಿಳೆ ಬಗ್ಗೆ ಆಕೆಯ ಸಹೋದರನೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. TV9 ಜೊತೆ ಮಾತನಾಡಿರುವ ಮಹಿಳೆಯ ಸಹೋದರ ಶಿವಕೆಂಪಯ್ಯ, ಆಕೆ ಹೇಳಿದ್ದೆಲ್ಲ ಬರೀ ಸುಳ್ಳು. ಅವಳ ಹಿಂದೆ ಯಾರೋ ನಿಂತು ಈ ರೀತಿ ಹೇಳಿಸುತ್ತಿದ್ದು, ಸೌಜನ್ಯಗೆ ನ್ಯಾಯ ಕೊಡಿಸುವ ಯಾವ ಉದ್ದೇಶವೂ ಆಕೆಗೆ ಇಲ್ಲ ಎಂದಿದ್ದಾರೆ. ನನ್ನ ಸಹೋದರಿ 16 ವರ್ಷ ಇದ್ದಾಗಲೇ…

Read More
error: Content is protected !!