ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ತೂಗುದೀಪ್ ಹಾಗೂ ನಟಿ ಪವಿತ್ರಾಗೌಡ ಅವರಿಗೆ ನೀಡಲಾಗಿದ್ದ ಕರ್ನಾಟಕ ಹೈಕೋರ್ಟ್ ನ ಜಾಮೀನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಗಿದಿದ್ದು, ನಾಳೆ ಗುರುವಾರ ತೀರ್ಪು ಹೊರಬೀಳಲಿದೆ.
ಈ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಪವಿತ್ರಾಗೌಡ ಅವರಿಗೆ ನಾಳೆ ಬಹಳ ಮಹತ್ವದ ದಿನವಾಗಿದ್ದು, ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಬೇಕೆಂದು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಪೀಠದಲ್ಲಿ ಮುಕ್ತಾಯವಾಗಿದೆ. ಕಾಯ್ದಿರಿಸಿದ ತೀರ್ಪು ನಾಳೆ ಹೊರಬೀಳಲಿದೆ.
ಈಗಾಗಲೇ ದರ್ಶನ್ ಮತ್ತು ಪವಿತ್ರಾಗೌಡ ಪರ ವಕೀಲರು ಸುಪ್ರೀಂಕೋರ್ಟ್ ನ್ಯಾಯಾಂಗ ಪೀಠದ ಮುಂದೆ ವಾದ ಮಂಡಿಸಿ ತಮ್ಮ ವಾದವನ್ನು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಎಸ್ಐಟಿ ಪರ ವಕೀಲರು ಜಾಮೀನು ರದ್ಯಗೊಳಿಸಿ ಪ್ರತಿ ವಾದ ಮಂಡಿಸಿದ್ದಾರೆ.
ಈ ಕಾರಣದಿಂದ ನಾಳೆ ನಟ ದರ್ಶನ್ ಮತ್ತು ಪವಿತ್ರಾಗೌಡ ಅವರಿಗೆ ತಮ್ಮ ಭವಿಷ್ಯ ಏನಾಗಲಿದೆ? ಎಂಬ ಆತಂಕ ಮೂಡಿದೆ.

