Headlines

ರಾಜಕಾರಣಿಗಳು 75 ವರ್ಷಕ್ಕೆ ನಿವೃತ್ತಿಯಾಗಬೇಕೆಂದ ಆರೆಸ್ಸೆಸ್ ಮುಖ್ಯಸ್ಥ!

ದೇಶದಲ್ಲಿ ಎಲ್ಲಾ ಪ್ರಮುಖ ಹುದ್ದೆಗಳಲ್ಲಿರುವ ರಾಜಕೀಯ ನಾಯಕರು 75 ವರ್ಷ ತುಂಬಿದ ನಂತರ ಸ್ವಯಂ ನಿವೃತ್ತಿಯಾಗಿ ಇತರರಿಗೆ ಅವಕಾಶ ನೀಡಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ಹೇಳಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು ಹೀಗೆ ಭಾಷಣ ಮಾಡಿದರು: “ಯಾರಾದರೂ ನಿಮಗೆ 75 ವರ್ಷ ತುಂಬಿದ್ದಕ್ಕೆ ಅಭಿನಂದನೆ ಸಲ್ಲಿಸಿದರೆ, ನೀವು ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದರ್ಥ. ಇತರರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು” ಎಂದು ಒತ್ತಿ ಹೇಳಿದ್ದಾರೆ.

ಮೋಹನ್ ಭಾಗವತ್ ತಮ್ಮ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸದಿದ್ದರೂ, ವಿರೋಧ ಪಕ್ಷಗಳು ಅದನ್ನು ಇದೀಗ ಪ್ರಧಾನಿ ಮೋದಿಗೆ ಲಿಂಕ್ ಮಾಡುತ್ತಿವೆ. ಏಕೆಂದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿಗೆ 75 ವರ್ಷ ತುಂಬಲಿದೆ.

ಶಿವಸೇನಾ ನಾಯಕ ಸಂಜಯ್ ರಾವತ್ ಈ ಬಗ್ಗೆ ಪ್ರತಿಕ್ರಿಯಿಸಿ.. ಪ್ರಧಾನಿ ಮೋದಿ ಅವರು ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಜಸ್ವಂತ್ ಸಿಂಗ್ ಅವರಂತಹ ದೊಡ್ಡ ನಾಯಕರನ್ನು ನಿವೃತ್ತಿ ಹೊಂದುವಂತೆ ಒತ್ತಾಯಿಸಿದ್ದರು. ತಾವು ಹಿಂದೆ ಹೇಳಿದ್ದನ್ನೇ ಇದೀಗ ಪ್ರಧಾನಿ ಮೋದಿ ಅವರು ಈಗ ಇದನ್ನು ಅನುಸರಿಸುತ್ತಾರೋ? ಇಲ್ಲವೋ? ಎಂದು ನೋಡೋಣ ಎಂದಿದ್ದಾರೆ.

ನಿಯಮ ಇದೆಯಾ..?
ಬಿಜೆಪಿಯಲ್ಲಿ ರಾಜ್ಯ ಮತ್ತು ವಿಭಾಗೀಯ ಮಟ್ಟದಲ್ಲಿ ವಯಸ್ಸಿನ ಮಿತಿಗಳು ಅನ್ವಯವಾಗುತ್ತವೆ. ಆದರೆ ನಿರ್ದಿಷ್ಟ ವಯಸ್ಸಿನವರೆಗೆ ಹುದ್ದೆಯನ್ನು ಅಲಂಕರಿಸುವ ಬಗ್ಗೆ ಬಿಜೆಪಿಯಲ್ಲಿ ಯಾವುದೇ ಅಧಿಕೃತ ನಿಯಮವಿಲ್ಲ. ಕೆಲವು ಹಂತಗಳಲ್ಲಿ ವಯಸ್ಸಿನ ಮಿತಿಗಳನ್ನು ವಿಧಿಸಲಾಗಿದೆ. ಉದಾಹರಣೆಗೆ ಛತ್ತೀಸ್‌ಗಢ ಬಿಜೆಪಿ ಮಂಡಲ ಅಧ್ಯಕ್ಷ ಹುದ್ದೆಗೆ 35 ರಿಂದ 45 ವರ್ಷಗಳು ಮತ್ತು ಜಿಲ್ಲಾ ಅಧ್ಯಕ್ಷ ಹುದ್ದೆಗೆ 45 ರಿಂದ 60 ವರ್ಷ ವಯಸ್ಸಿನ ಮಿತಿಯನ್ನು ನಿಗದಿಪಡಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 75 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ಹಿರಿಯ ನಾಯಕರಿಗೆ ಟಿಕೆಟ್ ನೀಡಲಿಲ್ಲ. ಇದರಲ್ಲಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್, ಕಲ್ ರಾಜ್ ಮಿಶ್ರಾ ಮುಂತಾದ ಅನೇಕ ನಾಯಕರು ಸೇರಿದ್ದಾರೆ.

Leave a Reply

Your email address will not be published. Required fields are marked *

error: Content is protected !!