Headlines

ಇಂದಿರಾ ಕ್ಯಾಂಟಿನ್ ಆವರಿಸಿದ ಒಳಚರಂಡಿ ನೀರು.!

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ : ಜಿಲ್ಲಾಡಳಿತ ಸಮೀಪವಿರುವ ಇಂದಿರಾ ಕ್ಯಾಂಟಿನ್ ಗೆ ಮಳೆ ನೀರು, ಒಳಚರಂಡಿ ನೀರಿನಿಂದ ಜಲಾವೃತಗೊಂಡ ಪರಿಣಾಮ: ೨-೩ ದಿನ‌‌‌ ಕ್ಯಾಂಟಿನ್ ಬಂದ್‌ ಮಾಡಲಾಗಿದೆ.

ಕೂಲಿಕಾರ್ಮಿಕರು, ಸಾರ್ವಜನಿಕರು. ವಿದ್ಯಾರ್ಥಿಗಳಿಗೆ ಕಡಿಮೆದರದಲ್ಲಿ‌ ಉಪಹಾರ ಒದಗಿಸುವ ಕಾಂಗ್ರೆಸ್ ಸರ್ಕಾರದ‌ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ ಸಿಎಂ ಸಿದ್ದರಾಮಯ್ಯ 2013 ರಲ್ಲಿ ಸಿಎಂ ಆಗಿದ್ದಾಗ ಚಾಮರಾಜನಗರ ಸೇರಿದಂತೆ ರಾಜ್ಯದ ಹಲಜಿಲ್ಲೆಗಳಲ್ಲಿ ಆರಂಭಿಸಿದ್ಷರು. ದುರಂತ ಎಂದರೆ‌ ಸಿಎಂ‌ ತವರು ಜಿಲ್ಲೆಯಿಂದ 60 ಕಿಮೀ‌ ಗಡಿಜಿಲ್ಲಾ ಕೇಂದ್ರದಲ್ಲಿನ ಇಂದಿರಾ ಕ್ಯಾಂಟಿನ್ ಹಲವಾರು‌‌ ಸಮಸ್ಯೆ ಇದ್ದರೂ ಇದೀಗ ಒಳಚರಂಡಿ ನೀರಿನ ಅವ್ಯವಸ್ಥೆ ಕೂಡ ಒಂದಾಗಿದೆ.

ಜಿಲ್ಲಾಡಳಿತ ಭವನಕ್ಕೆ ಪ್ರವೇಶಿಸುವ ಮುಖ್ಯಗೇಟ್ ಬಳಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದ್ದು, ಪ್ರತಿದಿನ‌ ಮಧ್ಯಾಹ್ನ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು. ಗ್ರಾಮಾಂತರ ಪ್ರದೇಶದ ಜನರು ಕೂಡಾ ೫-೧೦ ರೂ ಪಾವತಿಸಿ, ಉಪಹಾರ ಸೇವಿಸಿ ತೆರಳುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳಂತೂ ಕ್ಯಾಂಟಿನ್ ಆವರಣದಲ್ಲಿ ಕುಳಿತು ಊಟ ಮಾಡುತ್ತಿದ್ದರು.

ದುರಂತ ಎಂದರೆ ಭಾನುವಾರ ಸಂಜೆ ಸುರಿದ ಮಳೆ ವೇಳೆ ಒಳ ಚರಂಡಿಯ ಕೊಳಚೆ ನೀರು. ಕ್ಯಾಂಟೀನ್ ಒಳಗೆ ನುಗ್ಗಿ ಇಂದಿರಾ ಕ್ಯಾಂಟೀನ್ ನಲ್ಲಿದ್ದ ದಿನಸಿ ಪದಾರ್ಥ,ಅಕ್ಕಿ ಹಾಳಾಗಿದೆ.
ಎಂದಿನಂತೆ ಕ್ಯಾಂಟೀನ್ ಗೆ ಅಡುಗೆ ಮಾಡಲೂ ಬಂದಿದ್ದ ಅಡುಗೆ ಭಟ್ಟರು, ಸಹಾಯಕರು ಕೊಳಚೆ ನೀರು‌ ಕ್ಯಾಂಟೀನ್ ಒಳಗೆ ನಿಂತಿರುವುದನ್ನು ಬಂದ ಗ್ರಾಹಕರು ನೋಡಿ ದಂಗಾದರು. ಅಷ್ಟೆ ಅಲ್ಲ ನೀರು ನಿಂತ‌ ಪರಿಣಾಮ ಇಡೀ‌‌ ವಾತಾವರಣ ಗಬ್ಬೆದ್ದು ನಾರುತ್ತಿತ್ತು.ರಸ್ತೆಯಿಂದ ಕ್ಯಾಂಟಿನ್ ನಿರ್ಮಿಸಿರುವ ಜಾಗ‌‌ ಹಳ್ಳದಲ್ಲಿದ್ದು . ಮಳೆಯಾದರಂತೂ‌ ಕ್ಯಾಂಟೀನ್ ಒಳಗೆ ನೀರು ನಿಲ್ಲುತ್ತದೆ. ಮಳೆ ನೀರು ಹೊರಹೋಗಲು ಕ್ಯಾಂಟಿನ್ ನಿರ್ಮಿಸಿರುವ ಗುತ್ತಿಗೆದಾರರು ಯಾವುದೇ ವ್ಯವಸ್ಥೆ ಮಾಡಿಲ್ಲ. ಒಳಗಡೆ‌ ಸ್ವಚ್ಚತೆಯೂ ಮರೀಚಿಕೆಯಾಗಿದೆ.
ಕೊಳಚೆ ನೀರು. ಕ್ಯಾಂಟೀನ್ ಒಳಗೆ ನುಗ್ಗಿ ಇಂದಿರಾ ಕ್ಯಾಂಟೀನ್ ನಲ್ಲಿದ್ದ ದಿನಸಿ ಪದಾರ್ಥ,ಅಕ್ಕಿ ಹಾಳಾದ ಹಿನ್ನೆಲೆ‌‌ ಅವ್ಯವಸ್ಥೆ ಸರಿಪಡಿಸಲು ಮೂರು ದಿನವಾದರು ಬೇಕು ಅಂತ ಇಂದಿರಾ ಕ್ಯಾಂಟೀನ್ ಬಂದ್‌‌‌‌ ಮಾಡಲಾಗಿದೆ.

ಯುಜಿಡಿ ಕಳಪೆ: ನಗರದ ಪ್ರಮುಖ ರಸ್ತೆ , ಬಡಾವಣೆ್ಗಳಲ್ಲಿರಬಹುದು. ನಿರ್ಮಾಣ ಮಾಡಿರುವ ಒಳಚರಂಡಿ‌ ಕಳಪೆಯಿಂದ ಕೂಡಿದ್ದು. ಬಹುತೇಕ‌ ವಾರ್ಡಗಳಲ್ಲಿ‌ ಈಗಲೂ‌ ಕೊಳಚೆ ನೀರು‌‌‌‌ ರಸ್ತೆಯಲ್ಲಿ‌ ಹರಿಯುತ್ತಿರುವ ನಿದರ್ಶನಗಳಿವೆ. ಒಳಚರಂಡಿ‌ ಅವ್ಯವಸ್ಥೆಯಿಂದ‌‌ ನಗರದಲ್ಲಿ‌ ಇಂತಹ ಹಲವಾರು‌ ಸಮಸ್ಯೆ ತಲೆದೋರುತ್ತಿವೆ.
ಕೂಡಲೇ ಜಿಲ್ಲಾಡಳಿತ ಹಾಗೂ ನಗರಸಭೆ ಆಡಳಿತ
ಕೆಟ್ಟುಕೆರಹಿಡಿದಿರುವ ಒಳಚರಂಡಿ‌ ದುರವಸ್ಥೆ ಸರಿಪಡಿಸಬೇಕು,‌‌ ಇಂದಿರಾ ಕ್ಯಾಂಟೀನ್ ಕಟ್ಟಡ ಆವರಣದಲ್ಲಿ‌‌‌ ಮಳೆನೀರು ನಿಲ್ಲದಂತೆ ಸೂಕ್ರಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!