Headlines

ಜಾತಿ ಸಮೀಕ್ಷೆ ಮೂಲಕ ಹಿಂದೂ ಸಮಾಜ ದುರ್ಬಲಗೊಳಿಸಲು ರಾಜ್ಯ ಸರಕಾರ ಯತ್ನ:  ಬಿಜೆಪಿ ಮುಖಂಡ   ಡಾ.ಸುಶ್ರುತಗೌಡ ಆರೋಪ

ಮೈಸೂರು,ಸೆಪ್ಟೆಂಬರ್ 18 :  ಕರ್ನಾಟಕ ಹಿಂದುಳಿದ ಆಯೋಗ  ಕೈಗೆತ್ತಿಕೊಂಡಿರುವ   ಜಾತಿ ಗಣತಿಯನ್ನು ಹಿಂದುಳಿದ ಸಮಾಜಗಳ ಸಬಲೀಕರಣದ ಬದಲಿಗೆ  ಹಿಂದೂ ಧರ್ಮವನ್ನು ದುರ್ಬಲಗೊಳಿಸಲು ರಾಜ್ಯ ಸರಕಾರ ಅದರಲ್ಲೂ ಮುಖ್ಯವಾಗಿ  ಕಾಂಗ್ರೆಸ್ ಹೈಕಮಾಂಡ್   ದುರ್ಬಳಕೆ ಮಾಡಿಕೊಳ್ಳುತ್ತಿವೆ  ಎಂದು ಚಾಮರಾಜಕ್ಷೇತ್ರದ ಬಿಜೆಪಿ ಮುಖಂಡರಾದ ಡಾ.ಸುಶ್ರುತಗೌಡ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರೈಸ್ತ ಹಾಗು ಇಸ್ಲಾಂ ಧರ್ಮಗಳಿಗೆ, ಹಿಂದೂ ಧರ್ಮದಿಂದ  ಮತಾಂತರಗೊಂಡವರಿಗೆ  ಅವರ ಮೂಲ  ಜಾತಿಯನ್ನು ನಮೂದಿಸಲು ಅವಕಾಶ ನೀಡಿ, ಹಿಂಬಾಗಿಲ ಮೂಲಕ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಹಿಂದೆ ಬಹುದೊಡ್ಡ ಹಿಂದೂ ವಿರೋಧಿ ಸಂಚುಗಾರಿಕೆ ಇದೆ,” ಎಂದು ಅವರು ಆರೋಪಿಸಿದ್ದಾರೆ.

“ಈ ಪ್ರಯತ್ನ ಎಷ್ಟು ಆತ್ಮಘಾತುಕವಾಗಿದೆ ಎಂದರೆ,  ಕ್ರೈಸ್ತ ಧರ್ಮಕ್ಕೆ ಮತಾಂತರವಾದವರ ಮೂಲ ಜಾತಿ ಪಟ್ಟಿಯನ್ನು  ಬಹಿರಂಗಗೊಳಿಸಲಾಗಿದೆ. ಆದರೆ   ಇಸ್ಲಾಂ ಧರ್ಮಕ್ಕೆ ಮತಾಂತರವಾದವರ ಮೂಲ ಜಾತಿಯ ಬಗ್ಗೆ ರಹಸ್ಯ ಕಾಪಾಡಲಾಗಿದೆ. ಎರಡು ಧರ್ಮಗಳಲ್ಲಿ ಜಾತಿ ವ್ಯವಸ್ಥೆ ಇಲ್ಲವಾಗಿದ್ದರೆ,  ಈ ಮೂಲ ಜಾತಿಯನ್ನು ಸಮೀಕ್ಷೆ ಸಂದರ್ಭದಲ್ಲಿ  ನಮೂದಿಸುವ  ಅವಶ್ಯಕತೆ ಏನಿದೆ?,” ಎಂದು ಅವರು ಪ್ರಶ್ನಿಸಿದ್ದಾರೆ.

“ರಾಜ್ಯದ ಜನತೆ  ಅಧಿಕಾರ  ಕೊಟ್ಟಾಗಲೆಲ್ಲಾ   ರಾಜ್ಯದ ಅಭಿವೃದ್ಧಿ ಕೆಲಸ ಮಾಡದೆ, ಜಾತಿ-ಧರ್ಮದ ಹೆಸರಿನಲ್ಲಿ ಸಮಾಜದ ಸಾಮರಸ್ಯ ಹಾಳು ಮಾಡುವುದರಲ್ಲೇ  ಕಾಂಗ್ರೆಸ್ ಹೈಕಮಾಂಡ್  ಕಾಲ ಕಳೆಯುತ್ತಿರುವುದು ದುರಂತ,” ಎಂದು ಬಣ್ಣಿಸಿರುವ  ಡಾ.ಸುಶ್ರುತಗೌಡ, ಕ್ರೈಸ್ತ-ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡವರಿಗೆ ಅವರ ಮೂಲ ಜಾತಿಯನ್ನು ನಮೂದಿಸಲು ಅವಕಾಶ ನೀಡಿ, ಭವಿಷ್ಯದಲ್ಲಿ ಅವರು ಕೂಡಾ ಬಡ ಹಿಂದುಳಿದವರ ಮೀಸಲಾತಿ ಕಬಳಿಸಲು  ಈ  ಮೂಲಕ ಅವಕಾಶ ನೀಡಲಾಗುತ್ತಿದೆ. ಇದು ಸಂವಿಧಾನ ಬಾಹಿರ,” ಎಂದು ಬಣ್ಣಿಸಿದ್ದಾರೆ.

“ಕ್ರೈಸ್ತ  ಧರ್ಮದಲ್ಲಿ ಶೇ.೯೯.೯೯ರಷ್ಟು ಮತಾಂತರಿತ ಹಿಂದೂಗಳು ಇರುವಂತೆಯೇ, ಇಸ್ಲಾಂ ಧರ್ಮದಲ್ಲೂ ಶೇ.೯೯ ರಷ್ಟು ಮತಾಂತರಿತ ಹಿಂದೂಗಳಿದ್ದಾರೆ. ಕ್ರೈಸ್ತ ಬ್ರಾಹ್ಮಣ,   ಕ್ರೈಸ್ತ  ಕುರುಬ, ಕ್ರೈಸ್ತ ಒಕ್ಕಲಿಗ,  ಕ್ರೈಸ್ತ ವಿಶ್ವಕರ್ಮ, ಕ್ರೈಸ್ತ ಗೊಲ್ಲ ಎಂದು ನಮೂದಿಸಲುಅ ಅವಕಾಶ ನೀಡಲಾಗುತ್ತದೆ. ಅದೇ ರೀತಿ , ಇಸ್ಲಾಂ ಧರ್ಮದ ಜಾತಿ ಕಾಲಂನಲ್ಲೂ ಮುಸ್ಲಿಂ ಕುರುಬ, ಮುಸ್ಲಿಂ ಒಕ್ಕಲಿಗ, ಮುಸ್ಲಿಂ ವಿಶ್ವಕರ್ಮ, ಮುಸ್ಲಿಂ ಗೊಲ್ಲ, ಮುಸ್ಲಿಂ ಬ್ರಾಹ್ಮಣ ಎಂದು ನಮೂದಿಸಿ, ಆ ಮಾಹಿತಿಯನ್ನು ಬಹಿರಂಗಪಡಿಸಬೇಕು. ಆಗ ಆ ಧರ್ಮದ ಆಂತರ್ಯದ ಜಾತಿ  ಪದ್ಧತಿ, ಮತಾಂತರ  ಸಮಾಜದ ಗಮನಕ್ಕೆ ಬರುತ್ತದೆ,” ಎಂದು ತಿಳಿಸಿದ್ದಾರೆ.

” ಕೇಂದ್ರ ಸರ್ಕಾರ ಈಗಾಗಲೇ ಹಿಂದುಳಿದವರ್ಗಗಳ ಗಣತಿಗೆ ನಿರ್ಧರಿ, ಆದೇಶ ಹೊರಡಿಸಿದೆ.  ಆ ಬಳಿಕವು ಸುಮಾರು  650 ಕೋಟಿ ರೂಪಾಯಿ  ವೆಚ್ಚ ಮಾಡಿ ರಾಜ್ಯ  ಸರ್ಕಾರ ತರಾತುರಿಯಲ್ಲಿ ಹಿಂದುಳಿದವರ್ಗಗಳ ಜನಗಣತಿ ಆರಂಭಿಸಿರುವುದರ ಹಿಂದೆ   ಹಿಂದೂ ಧರ್ಮೀಯರನ್ನು ಜಾತಿ ಹೆಸರಿನಲ್ಲಿ ಒಡೆದು ಆಳುವ ಕುಯುಕ್ತಿ ಇರುವಂತಿದೆ. ಇದರ ಬದಲಿಗೆ  ಈ ಮೊತ್ತವನ್ನು ಬಡವರ ಕಲ್ಯಾಣಕ್ಕೆ ಬಳಸಬಹುದಿತ್ತು    ಎಂದು   ಡಾ.ಸುಶ್ರುತಗೌಡ  ತಿಳಿಸಿದ್ದಾರೆ.

” ಧರ್ಮಗಳೊಳಗಿರುವ ಜಾತಿ ಹುಡುಕುವ ಕಾಂಗ್ರೆಸ್ ಪಕ್ಷದ  ನೀತಿ,  ರಾಜ್ಯದಲ್ಲಿರುವ ಎಲ್ಲಾ ಧರ್ಮೀಯರೂ ಮೂಲತಃ ಹಿಂದೂಗಳು, ನಾವೆಲ್ಲಾ ಒಂದು ಎಂಬ ಏಕತಾ ಭಾವ ಮೂಡಿಸಲಿ.  ಕಾಂಗ್ರೆಸ್ ಹೈಕಮಾಂಡ್ ನ ಹಿಂದೂ ವಿರೋಧಿ    ನಿರ್ಧಾರಗಳು  ರಾಜ್ಯದಲ್ಲಿ ಹೆಚ್ಚಿರುವ  ಕೋಮು ಹಿಂಸಾಚಾರವನ್ನು  ತೊಲಗಿಸಿ, ಜನರ ನಡುವೆ ಸೌಹಾರ್ದತೆ ಬೆಳೆಯಲಿ. ಇದರಿಂದ ಪಕ್ಷಕ್ಕೆ  ತಟ್ಟಿರುವ ಜಾತಿವಾದದ ಶಾಪ ಸಹ ನಿವಾರಣೆಯಾಗುತ್ತೆ,”  ಎಂದು ಡಾ.ಸುಶ್ರುತಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!