ಬೆಂಗಳೂರು, ಜುಲೈ 15: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾರನ್ನು ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೀಗೆ ಮಾತಾಡಿದರು:
“ನಿರ್ದಿಷ್ಟವಾಗಿ ಅವರೇನೂ ತನಗೆ ಹೇಳಲಿಲ್ಲ, ತಮ್ಮ ಇಲಾಖೆಯಿಂದ ಏನೆಲ್ಲ ಕೆಲಸಗಳಾಗಿವೆ ಅಂತ ಅವರಿಗೆ ಹೇಳಿದ್ದೇನೆ, ಕ್ಷೇತ್ರಾವಾರು ಅನುದಾನಗಳನ್ನು ಬಿಡುಗಡೆ ಮಾಡಿರುವ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ಕೆಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೆಲಸವಾಗಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ ಅಂತ ಸುರ್ಜೇವಾಲಾ ಅವರಿಗೆ ಹೇಳಿದ್ದಾರೆ, ಅದರ ಬಗ್ಗೆ ಚರ್ಚೆಯಾಯಿತು, ಅವರೊಂದಿಗೆ ತಾನು ಮೀಟಿಂಗ್ ಮಾಡೋದಾಗಿ ಹೇಳಿದ್ದೇನೆ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

