Headlines

ಸಿಎಂ ಕುರ್ಚಿ ಸಮರ ದೆಹಲಿಗೆ ಶಿಫ್ಟ್!!!

ಪವರ್ ಶೇರಿಂಗ್ ಫೈಟ್‌.. ನಾಯಕತ್ವ ಗುದ್ದಾಟದ ಮಧ್ಯೆ ಇವತ್ತು ಸಿಎಂ, ಡಿಸಿಎಂ ಡೆಲ್ಲಿಯಾತ್ರೆ ಮಾಡ್ತಿದ್ದಾರೆ. ಇಂದು ಪ್ರತ್ಯೇಕವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಡೆಲ್ಲಿ ಫ್ಲೈಟ್ ಹತ್ತಿದ್ದಾರೆ. ಕಳೆದ ಬಾರಿ ಡೆಲ್ಲಿಯಲ್ಲಿ ನಾನೇ 5 ವರ್ಷ ಮುಖ್ಯಮಂತ್ರಿ ಎಂದಿದ್ದ ಸಿದ್ದರಾಮಯ್ಯ ಮತ್ತೇನು ಬಾಂಬ್ ಸಿಡಿಸಲಿದ್ದಾರೆ? ಎಂಬ ಕೌತುಕ ಮೂಡಿದೆ. ಹೀಗೆ ಸಿಎಂ, ಡಿಸಿಎಂ ಪ್ರತ್ಯೇಕವಾಗಿ ದೆಹಲಿಯಾತ್ರೆ ಮಾಡ್ತಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಗಾಂಧಿ ಭೇಟಿಯಾಗ್ತಾರಾ ಸಿಎಂ-ಡಿಸಿಎಂ?

ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಬಂದಿದ್ರು. ಇದೀಗ ಮತ್ತೆ ಇವತ್ತು ದೆಹಲಿಗೆ ತೆರಳಲಿದ್ದಾರೆ. ಕಳೆದ ಬಾರಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿಗೆ ಕಾಲಾವಕಾಶ ಸಿಗದೇ ಸಿಎಂ ಸಿದ್ದರಾಮಯ್ಯ ವಾಪಸ್ ಆಗಿದ್ದರು. ಇದೀಗ ಇವತ್ತು ಮತ್ತೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಾ ಕೈ ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಈ ಬಾರಿಯಾದ್ರೂ ಸಿಎಂ ಸಿದ್ದು-ಡಿಸಿಎಂ ಡಿ‌.ಕೆ ಶಿವಕುಮಾರ್ ರಾಹುಲ್ ಗಾಂಧಿಯನ್ನ ಭೇಟಿಯಾಗ್ತಾರಾ? ಎಂಬ ಕೌತುಕ ಮೂಡಿದೆ.

ದೆಹಲಿಗೆ ಸಿಎಂ, ಡಿಸಿಎಂ ಪ್ರತ್ಯೇಕ ಯಾತ್ರೆ…!

ಇಂದು ಪ್ರತ್ಯೇಕವಾಗಿ ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಹಾಗೂ ಡಿಸಿಎಂಮಧ್ಯಾಹ್ನ 3 ಗಂಟೆಗೆ ಸಿಎಂ ಹೊರಟ್ರೆ, ಸಂಜೆ ವೇಳೆಗೆ ಡಿಸಿಎಂ ದಿಲ್ಲಿ ಪ್ರಯಾಣ ಬೆಳೆಸಿದ್ದಾರೆ.
ನಾಳೆ ಅಂದರೆ ಜುಲೈ 25ರಂದು ದೆಹಲಿ ಎಐಸಿಸಿಯ ಒಬಿಸಿ ಸಭೆಯಲ್ಲಿ ಭಾಗಿಯಾಗಲಿರೋ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಕೈ ಹೈಕಮಾಂಡ್ ನಾಯಕರನ್ನ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ ಖಾಲಿ ಇರುವ ನಿಗಮ – ಮಂಡಳಿ, ಎಂಎಲ್​ಸಿ ಸ್ಥಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಡಾ ಕೇಸ್, ಸುಪ್ರೀಂಕೋರ್ಟ್ ತೀರ್ಪು ಸೇರಿದಂತೆ ಹಲವು ವಿಚಾರಗಳ ಚರ್ಚೆ ಸಾಧ್ಯತೆ ಇದೆ. ಒಟ್ಟಿನಲ್ಲಿ ನಾಳೆ ಶುಕ್ರವಾರ ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನ ಕರ್ನಾಟಕದ ಸಿಎಂ, ಡಿಸಿಎಂ ಭೇಟಿಯಾಗುತ್ತಾರಾ? ಎಂಬ ಕುತೂಹಲ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಕೇಳಿರುವ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ನಾಯಕತ್ವ ಸಂಬಂಧ ರಾಹುಲ್ ಜೊತೆ ಡಿಕೆಶಿ ಚರ್ಚೆ ಮಾಡುವ ಸಾಧ್ಯತೆ ಇದೆ.
ನಾಯಕತ್ವ ಚರ್ಚೆ.. ಸಿಎಂ ಕುರ್ಚಿ ಕಿತ್ತಾಟದ ಮಧ್ಯೆ ಸಿಎಂ, ಡಿಸಿಎಂ ಪ್ರತ್ಯೇಕವಾಗಿ ದೆಹಲಿ ಕಡೆ ಮುಖ ಮಾಡಿರೋದು ಕಾಂಗ್ರೆಸ್ ವಲಯದಲ್ಲೇ ಬಿಸಿಬಿಸಿ ಟಾಕ್‌ಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!