Headlines

200 ರೂ. ಸಿನಿಮಾ ಟಿಕೆಟ್ ದರ ಆದೇಶಕ್ಕೆ ತಡೆಯಾಜ್ಞೆ ಬೆನ್ನಲ್ಲೇ 700 ರೂ.ಗೆ ಏರಿದ ಟಿಕೆಟ್ ದರ!

ಬೆಂಗಳೂರು, ಸೆ.24: ರಾಜ್ಯಸರ್ಕಾರ ಸಿನಿಮಾ ಥಿಯೇಟರ್ ಗಳಿಗೆ ನಿಗದಿಪಡಿಸಿದ್ದ 200 ರೂಪಾಯಿ ಟಿಕೆಟ್ ದರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೇರಿದೆ. ನಿನ್ನೆಯಷ್ಟೇ ಹೈಕೋರ್ಟ್ ನ ಜಸ್ಟೀಸ್ ರವಿ ಹೊಸಮನಿ ಅವರ ಪೀಠವು 200 ರೂಪಾಯಿ ಟಿಕೆಟ್ ದರ ಜಾರಿಗೆ ತಡೆಯಾಜ್ಞೆ ನೀಡಿತ್ತು. ಇದಾದ ಬಳಿಕ ಇಂದು ರಾಜ್ಯದ ಸಿನಿಮಾ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರ ಗಗನಕ್ಕೇರಿದೆ.
ಬೆಂಗಳೂರಲ್ಲಿ ತೆಲುಗು ಚಿತ್ರದ ಟಿಕೆಟ್ ಬೆಲೆ 700 ರೂಪಾಯಿಗೆ ಏರಿಕೆಯಾಗಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲೇ ಟಿಕೆಟ್ ಬೆಲೆ 700 ರೂಪಾಯಿಗೆ ಏರಿಕೆಯಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಟಿಕೆಟ್ ದರ 500 ರೂ. 600 ರೂ. 700 ರೂಪಾಯಿವರೆಗೂ ಏರಿಕೆಯಾಗಿದೆ.

ಪವನ್ ಕಲ್ಯಾಣ್ ನಟನೆಯ OG ಚಿತ್ರದ ಟಿಕೆಟ್ ಸಖತ್ ದುಬಾರಿಯಾಗಿವೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗ್ತಿರುವ ತೆಲುಗು ಸಿನಿಮಾ ಅಂದರೆ, ಓಜಿ ಸಿನಿಮಾ. ಈ ಸಿನಿಮಾದ ಟಿಕೆಟ್ ಬೆಲೆ 400 ರೂ. ಗಳಿಂದ ಹಿಡಿದು 500 ರೂ., 600 ರೂ., 700 ರೂ.
ವರೆಗೂ ಏರಿಕೆಯಾಗಿದೆ. ಇತ್ತೀಚೆಗಷ್ಟೇ ಸರ್ಕಾರ ಟಿಕೆಟ್ ಬೆಲೆ ಗರಿಷ್ಠ 200 ರೂಪಾಯಿ ಮೀರುವಂತಿಲ್ಲ ಅಂತ ಆದೇಶ ಮಾಡಿತ್ತು. ಆದ್ರೆ, ಸರ್ಕಾರದ ಆದೇಶದ ವಿರುದ್ಧವಾಗಿ ಕೆಲವ್ರು ಕೋರ್ಟ್ ಗೆ ಹೋಗಿ ಸಿನಿಮಾ ನಿರ್ಮಾಪಕರು ತಡೆಯಾಜ್ಞೆ ಪಡೆದಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಟಿಕೆಟ್‌ ಬೆಲೆ ಗಗನಕ್ಕೇರಿಕೆಯಾಗಿದೆ. ಮಲ್ಟಿಪ್ಲೆಕ್ಸ್ ಗಳಿಗಿಂತ ಸಾಮಾನ್ಯ ಚಿತ್ರಮಂದಿರಗಳಲ್ಲೇ ದರ ಏರಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!