ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಜಪ್ತಿಯಾದ ವಾಹನ ಬಿಡಿಸಿಕೊಳ್ಳಲು ಲಂಚದ ಬೇಡಿಕೆ ಇಟ್ಟಿದ್ದ ಮುಖ್ಯಪೇದೆ ಲೋಕಾಯುಕ್ತರು ಬೀಸಿದ ಬಲೆಗೆ ಬಲಿಯಾಗಿದ್ದಾರೆ
ಚಾಮರಾಜನಗರ ಸಂಚಾರಿ ಠಾಣೆಯ ಮುಖ್ಯಪೇದೆ ಮಲ್ಲು ಎಂಬುವವರೆ ಲೋಕ ಬಲೆಗೆ ಬಿದ್ದ ಪೇದೆಯಾಗಿದ್ದಾರೆ.

ಬಂಡಿಗೆರೆ ಗ್ರಾಮದ ದೂರುದಾರರೊಬ್ಬರು ಜಪ್ತಿಯಾಗಿದ್ದ ವಾಹನವನ್ನ ನ್ಯಾಯಾಲಯದ ಆದೇಶ ಮೇರೆಗೆ ವಾಹನ ಬಿಡಿಸಿಕೊಳ್ಳಲು ಮೂರು ಸಾವಿರ ಲಂಚದ ಬೇಡಿಕೆಯನ್ನ ಮುಖ್ಯಪೇದೆ ಮಲ್ಲು ಇಟ್ಟಿದ್ದರು ಎನ್ನಲಾಗಿದೆ. ದೂರುದಾರರ ಮೇರೆಗೆ ಸಂಚಾರಿ ಠಾಣೆಯಲ್ಲೆ ಹಣ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಡಿವೈಸ್ಪಿ ಹಾಗೂ ಸಿಬ್ಬಂದಿಗಳು ದಾಳಿ ಕಾರ್ಯದಲ್ಲಿ ಭಾಗವಹಿಸಿದ್ದರು. ೨೦೨೬ ರ ಹೊಸ ವರ್ಷದಲ್ಲಿ ಲೋಕಾಯುಕ್ತದಲ್ಲಿ ಮೊದಲ ಪ್ರಕರಣ ಇದಾಗಿದ್ದು ಎಸ್ಪಿ ಕವಿತಾ ಅವರ ವರ್ಗಾವಣೆ ನಂತರ ಹೊಸ ಎಸ್ಪಿ ಅವರ ಕಟ್ಟುನಿಟ್ಟಿನ ಖಡಕ್ ಅದಿಕಾರ ಭಯದ ವಾತಾವರಣ ಇಲ್ಲದ ಹಿನ್ನಲೆ ಸಂಚಾರ ಠಾಣಾ ಸಿಬ್ಬಂದಿ ಬಲಿಯಾಗಿರುವುದು ನೋಡಿದಾಗ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟತೆಯ ಗಮಲು ಆರಂಭವಾದ ವಾತಾವರಣ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಸಂಚಾರಿ ಠಾಣೆಯವರು ಅಪ್ರಾಪ್ತ ಮಕ್ಕಳ ವಾಹನ ಚಾಲನೆಯಲ್ಲಿ ಸಿಕ್ಕಿಬಿದ್ದಾಗ ದೂರು ನ್ಯಾಯಾಲಯದಲ್ಲಿ ದಾಖಲಿಸದೆ ಠಾಣಾ ವಲಯದಲ್ಲಿ ಇತ್ಯರ್ಥ ಮಾಡುವ ಬಗ್ಗೆ ವ್ಯಾಪಕವಾಗಿ ದೂರು ಹಾಗೂ ನ್ಯಾಯಾಲಯದ ಆದೇಶ ಮೇರೆಗೆ ವಾಹನ ಬಿಡುಗಡೆಗೊಳಿಸಿಕೊಳ್ಳಲು ಠಾಣೆಯಲ್ಲಿ ಕೆಲ ಹಿರಿಯ ಅದಿಕಾರಿಗಳ ಮೇರೆಗೆ ಕೆಲ ಸಿಬ್ಬಂದಿಗಳು ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ.. ಪೂರಕವಾಗಿ ಇಂದು ಮುಖ್ಯ ಪೇದೆ ಲೋಕಾಯುಕ್ತ ಅದಿಕಾರಿಗಳಿಗೆ ಸಿಕ್ಕಿಬಿಧ್ದಿರುವುದು ಗಮನಾರ್ಹವಾಗಿದೆ

