Headlines

ಕಾಂಗ್ರೆಸ್‌ ಮುಖಂಡನ ವಿರುದ್ಧ ಕ್ರಮಕ್ಕೆ ಒಕ್ಕಲಿಗರ ಆಗ್ರಹ

ಮಂಡ್ಯ: ಒಕ್ಕಲಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸೀತಾರಾಮ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮಂಡ್ಯ ಜಿಲ್ಲಾ ವಿವಿಧ ಒಕ್ಕಲಿಗರ ಸಮುದಾಯದ ಮುಖಂಡ ಹಾಗೂ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ವಿಶಾಲರಘು ಖಂಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮಾಜದ ಬಗ್ಗೆ ಅಶ್ಲೀಲ ಪದ ಬಳಸಿ ಮಾತನಾಡಿದ್ದ ಸೀತಾರಾಮ್ ವಿರುದ್ಧ ಈಗಾಗಲೇ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಅಡಿಯಲ್ಲಿ ದೂರು ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡ ಸೀತಾರಾಮ್ ಒಕ್ಕಲಿಗರ ಸಮಾಜವನ್ನು ಬಾಯಿಗೆ ಬಂದಂತೆ ಮಾತನಾಡಿರುವ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಒಕ್ಕಲಿಗ ಸಮುದಾಯದ ಬಗ್ಗೆ ದೂರವಾಣಿ ಸಂಭಾಷಣೆಯಲ್ಲಿ ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಮುಖಂಡ ಸೀತಾರಾಮ್‌ ಕ್ಷಮೆ ಕೇಳಬೇಕು. ಯಾವುದೇ ವ್ಯಕ್ತಿ ಯಾವುದೇ ಜನಾಂಗದ ಮೇಲೆ ಕೆಟ್ಟದಾಗಿ ಮಾತನಾಡಬಾರದು. ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಈ ವ್ಯಕ್ತಿ ಒಬ್ಬ ನೀಚ, ಅಯೋಗ್ಯ ಎಂದರೆ ತಪ್ಪಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ಕ, ತಂಗಿ ಹಾಗೂ ತಾಯಿ ಬಗ್ಗೆ ಗೊತ್ತಿಲ್ಲದೇ ಇಂತಹ ಅವಾಚ್ಯಶಬ್ಧಗಳಿಂದ ನಿಂದನೆ ಮಾಡಿದ್ಧಾನೆ, ಇಂತಹ ನೀಚನಿಗೆ ತಕ್ಕ ಶಿಕ್ಷೆ ನೀಡಬೇಕು. ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗ ಮುಖಂಡರು ಇಂತಹ ಅಯೋಗ್ಯನನ್ನ ಯಾವುದೇ ಸ್ಥಾನ ನೀಡಿದ್ದರೂ ವಜಾಗೊಳಿಸಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡುವಂತೆ ಮಾಡಿ ಅಲ್ಲಿ ಅನಾಹುತವಾದರೆ ಸರ್ಕಾರವೇ ಜವಾಬ್ದಾರಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಕ್ಕಲಿಗ ಮುಖಂಡರಾದ ಎಲ್.ಕೃಷ್ಣ ಮಾತನಾಡಿ, ಈ ವ್ಯಕ್ತಿ ನಮ್ಮ ಸಮಾಜದ ಬಗ್ಗೆ ಕೆಟ್ಟದಾಗಿ ಮಾತನಾಡಿದರುವುದು ತಪ್ಪು. ಇವನು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ, ಸೀತಾರಾಮ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಒಕ್ಕಲಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸೀತಾರಾಮ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹ ಪಡಿಸಿದರು.

ಮುಖಂಡರಾದ ಕೆ ಸಿ ನಾಗಮ್ಮ, ಸಂಪಹಳ್ಳಿ ಶಿವಶಂಕರ್, ರಮೇಶ್, ಬಿ.ಎಲ್.ಕೃಷ್ಣೇಗೌಡ, ಸುಜಾತ, ಜ್ಯೋತಿ, ಎಂ.ಪ್ರಶಾಂತ್, ಬೋರೇಗೌಡ, ಅಭಿಲಾಶ್, ಸುದರ್ಶನ್, ಬೋರ್‌ವೆಲ್ ನಾರಾಯಣ, ಶ್ರೀಕಾಂತ್, ಸುಜಾತ ಸಿದ್ದಯ್ಯ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!