ಬೆಂಗಳೂರು, ಆಗಸ್ಟ್ 5: ಕೆಎಸ್ಆರ್ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಹೆಚ್.ವಿ ಅನಂತ್ ಸುಬ್ಬಾರಾವ್ ಸಾರಿಗೆ ನೌಕರರ ಮುಷ್ಕರವನ್ನು ಸ್ಥಗಿತಗೊಳಿಸಲಾಗಿದೆ, ನೌಕರರು ತಮ್ಮ ಕೆಲಸಗಳಿಗೆ ರಿಪೋರ್ಟ್ ಮಾಡಿಕೊಳ್ಳಬೇಕೆಂದು ಹೇಳಿದರು.
ಸಾರಿಗೆ ಮುಷ್ಕರ ಹಿಂಪಡೆದ ಬಗ್ಗೆ ಅನಂತ ಸುಬ್ಬರಾವ್
ಅವರು ಹೇಳಿದ್ದಿಷ್ಟು:
ನೌಕರರಲ್ಲಿ ಯಾವ ಗೊಂದಲವೂ ಇಲ್ಲ, ಮುಷ್ಕರಕ್ಕೆ ಕರೆ ಕೊಟ್ಟವರು ನಾವು ಮತ್ತು ನಾವೇ ಕೆಲಸಕ್ಕೆ ಹಾಜರಾಗುವಂತೆ ಹೇಳುತ್ತಿದ್ದೇವೆ ಎಂದು ಹೇಳಿದ ಅವರು, ಸರ್ಕಾರ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮನ್ನು ಮಾತುಕತೆಗೆ ಕರೆದು ಇತರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದರು. ಸರ್ಕಾರ ನೀಡಲು ಸಮ್ಮತಿಸಿರುವ 14 ತಿಂಗಳ ಹಿಂಬಾಕಿಯನ್ನು ಯಾವ ಕಾರಣಕ್ಕೂ ನಾವು ತೆಗೆದುಕೊಳ್ಳಲ್ಲ, ಎಲ್ಲ38 ತಿಂಗಳುಗಳ ಅರಿಯರ್ಸ್ ನೀಡಬೇಕು ಎಂದು ಸುಬ್ಬಾರಾವ್ ಹೇಳಿದರು.

